Advertisement

‘ಸೀತಮ್ಮನ ಮಗ’ ಟ್ರೇಲರ್‌ ರಿಲೀಸ್‌

03:28 PM Jun 30, 2022 | Team Udayavani |

ಯತಿರಾಜ್‌ ನಟನೆ ಮತ್ತು ನಿರ್ದೇಶನದ “ಸೀತಮ್ಮನ ಮಗ’ ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಗಿದೆ.

Advertisement

ಇತ್ತೀಚೆಗೆ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್‌ ಮಂಡಳಿ ಚಿತ್ರಕ್ಕೆ “ಯು’ ಪ್ರಮಾಣ ಪತ್ರ ನೀಡಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ ಟ್ರೇಲರ್‌ ಬಿಡುಗಡೆಯ ಮೂಲಕ ಚಿತ್ರದ ಪ್ರಚಾರ ಕಾರ್ಯಕ್ಕೆ ಮುಂದಾಗಿದೆ.

“ಸೀತಮ್ಮನ ಮಗ’ ಚಿತ್ರದಲ್ಲಿ ಯತಿರಾಜ್‌, ಸೋನು ಸಾಗರ, ಚೈತ್ರ ಶ್ರೀನಿವಾಸ್‌, ಚರಣ್‌ ಕಸಾಲ, ಬುಲೆಟ್‌ ರಾಜು ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

“ಸೋನು ಫಿಲಂಸ್‌’ ಬ್ಯಾನರ್‌ ನಲ್ಲಿ ಮಂಜುನಾಥ್‌ ನಾಯಕ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರ ದುರ್ಗದ ಬಳಿಯ ಪಂಡರಹಳ್ಳಿಯ ಸುತ್ತಮುತ್ತ “ಸೀತಮ್ಮನ ಮಗ’ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next