Advertisement
ಸೀಮಾ ಬಿಸ್ಲಾ ಫೈನಲ್‌ನಲ್ಲಿ ಈಕ್ವಡಾರ್‌ನ ಲೂಸಿಯಾ ಯಮಿಲೆತ್ ಯೆಪೆಜ್ ಗುಜ್ಮಾನ್ ವಿರುದ್ಧ ಸೆಣಸಬೇಕಿತ್ತು. ಆದರೆ ಅವರು ಗಾಯಾಳಾಗಿ ಹಿಂದೆ ಸರಿದರು. ಯುರೋಪಿಯನ್ ಚಾಂಪಿಯನ್‌ಶಿಪ್ ಕಂಚಿತ ಪದಕ ವಿಜೇತೆ, ಪೋಲೆಂಡ್‌ನ ಅನ್ನಾ ಲ್ಯುಕಾಸಿಯಾಕ್ ಅವರನ್ನು ಸೆಮಿಫೈನಲ್‌ನಲ್ಲಿ ಮಣಿಸಿದಾಗಲೇ ಸೀಮಾಗೆ ಟೋಕಿಯೊ ಒಲಿಂಪಿಕ್ಸ್ ಅರ್ಹತೆ ಲಭಿಸಿತ್ತು.
Related Articles
ಗ್ರೀಕೊ ರೋಮನ್ ವಿಭಾಗದ ಸ್ಪರ್ಧೆಯಲ್ಲಿ ಭಾರತ ನಿರಾಶಾದಾಯಕ ಪ್ರದರ್ಶನ ನೀಡಿತು. ಇಲ್ಲಿ ಯಾರಿಗೂ ಒಲಿಂಪಿಕ್ಸ್ ಅರ್ಹತೆ ಸಂಪಾದಿಸಲು ಸಾಧ್ಯವಾಗಲಿಲ್ಲ.
Advertisement
ಗುರುಪ್ರೀತ್ ಸಿಂಗ್ ಮೇಲೆ ವಿಶ್ವಾಸ ಇರಿಸಲಾಗಿತ್ತು. ಆದರೆ 77 ಕೆ.ಜಿ. ವಿಭಾಗದ ಪ್ರೀ-ಕ್ವಾರ್ಟರ್ ಫೈನಲ್‌ನಲ್ಲಿ ಅವರು ಪರಾಭವಗೊಂಡರು.
ಹಿಂದೆ ಸರಿದ ಸುಮಿತ್ಪುರುಷರ 125 ಕೆ.ಜಿ. ಫ್ರೀಸ್ಟೈಲ್ ವಿಭಾಗದ ಸ್ಪರ್ಧೆಯ ಫೈನಲ್ ಪ್ರವೇಶಿಸಿ ಟೋಕಿಯೊ ಅರ್ಹತೆ ಪಡೆದಿದ್ದ ಸುಮಿತ್ ಮಲಿಕ್ ಗಾಯಾಳಾಗಿ ಹಿಂದೆ ಸರಿದರು. ಇಲ್ಲಿ ಅವರು 2018ರ ಯುತ್ ಒಲಿಂಪಿಕ್ ಚಾಂಪಿಯನ್, ರಶ್ಯದ ಸಗೇìಯಿ ಕೊಝಿರೇವ್ ವಿರುದ್ಧ ಸೆಣಸಬೇಕಿತ್ತು. ಕೊಝಿಕೋವ್ ಚಿನ್ನ, ಮಲಿಕ್ ಬೆಳ್ಳಿ ಗೆದ್ದರು.