Advertisement

ಕನಸ ಕಂಡೆನು!

06:00 AM Nov 09, 2018 | Team Udayavani |

ಎಲ್ಲರೂ ಜೀವನದಲ್ಲಿ ಕನಸು ಕಾಣುತ್ತಾರೆ ಹಾಗೂ ಅದನ್ನು ನನಸಾಗಿಸುತ್ತಾರೆ. ಒಬ್ಬ ಬಡ ಹುಡುಗನಿದ್ದನು. ಅವರಿಗೆ ಸರಿಯಾದ ಮನೆಯಿಲ್ಲ, ಬಟ್ಟೆಯಿಲ್ಲ. ಒಂದು ಹೊತ್ತು ಊಟಕ್ಕೂ ಗತಿ ಇರಲಿಲ್ಲ. ತಂದೆ ದುಡಿದ ಹಣದಿಂದ ಕುಡಿದು ಬರುತ್ತಿದ್ದರು. ತಾಯಿ ಮನೆಗೆಲಸಕ್ಕೆ ಹೋಗುತ್ತಿದ್ದರು. ಅವನು ಏಳನೆಯ ತರಗತಿಯಲ್ಲಿ ಓದುತ್ತಿದ್ದನು. ಎಂದಿನಂತೆ ರಾತ್ರಿ ಊಟ ಮಾಡಿ ಮಲಗಿದನು. ಮರುದಿನ ಬೆಳಗ್ಗೆ ಎದ್ದಾಗ ಒಂದು ಒಳ್ಳೆಯ ರೂಮಿನಲ್ಲಿರುವ ಹಾಸಿಗೆಯಿಂದ ಎದ್ದನು. ಅಮ್ಮ ಅಡುಗೆ ಮನೆಯಲ್ಲಿ ಇದ್ದರು. ಅಪ್ಪ ಆಫೀಸಿಗೆ ಹೊರಡಲು ಸಿದ್ಧರಾಗುತ್ತಿದ್ದರು. ಹೊರಗಡೆ ಎರಡು ಕಾರುಗಳು ನಿಂತಿದ್ದವು. ಹಾಗೂ ಅವನಿಗೆ ಬೇಕಾದ ತಿಂಡಿ-ತಿನಿಸು ಮತ್ತು ಬಟ್ಟೆಗಳನ್ನು  ತಂದಿಟ್ಟಿದ್ದರು. ಅಮ್ಮ ಅವನನ್ನು ಶಾಲೆಗೆ ಹೊರಡಿಸಿದರು. ಇದೆಲ್ಲ ಹೇಗಾಯಿತು ಎಂದುಕೊಳ್ಳಲು ಅವನಿಗೆ ಮನಸ್ಸು ಬರಲಿಲ್ಲ. ನಾನು ಶಾಲೆಗೆ ಹಾಗೂ ಅಪ್ಪ ಆಫೀಸಿಗೆ ಕಾರಿನಲ್ಲಿ ಹೋದೆವು. ಅಮ್ಮ ಮೊದಲಿಗಿಂತ ತುಂಬಾ ಬದಲಾವಣೆ ಆಗಿದ್ದರು. ಹಿಂದಿನಿಂದ ಎರಡು-ಮೂರು ಕಾರುಗಳು ಬರುತ್ತಿದ್ದವು. ಆ ಬಡ ಹುಡುಗ ಇಷ್ಟು ಬೇಗ ಶ್ರೀಮಂತನಾಗಲು ಸಾಧ್ಯವೆ? ಆದರೆ ಅದು ಅವನ ಕನಸಾಗಿತ್ತು. ಸ್ವಲ್ಪ ಹಿಂದಕ್ಕೆ ಜ್ಞಾಪಿಸಿಕೊಳ್ಳಿ. ಆ ಹುಡುಗ ಮರುದಿನ ಬೆಳಿಗ್ಗೆ ಎದ್ದು ಶಾಲೆಗೆ ಹೋದನು. ಮುಂದೆ ಹಿಂದೆ ನೆನೆಸಿದ್ದ ಕನಸುಗಳನ್ನು ನನಸಾಗಿಸಿದನು!

Advertisement

ಮಂಜುನಾಥ
ಪ್ರಥಮ ಪಿಯುಸಿ
ಪದವಿಪೂರ್ವ ಕಾಲೇಜು, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next