Advertisement

ಕಳಪೆ ಭತ್ತ ತಳಿ ಕೊಟ್ಟ ಸೀಡ್ಸ್‌ ಅಧಿಕಾರಿಗಳಿಗೆ ತರಾಟೆ

02:23 PM May 20, 2019 | Suhan S |

ಪಾಂಡವಪುರ: ಸೀಡ್ಸ್‌ ಸಂಸ್ಥೆ ವಿತರಿಸಿರುವ ಡಿಆರ್‌ಎಚ್-836, ಎಂಸಿ-13 ಹೈಬ್ರೀಡ್‌ ಭತ್ತದ ತಳಿಗಳಿಂದ ಹೆಚ್ಚು ಇಳುವರಿ ಬರದೇ, ಭತ್ತವೂ ಜೊಳ್ಳಾಗುತ್ತಿದೆ ಎಂದು ಆರೋಪಿಸಿ ಸೀಡ್ಸ್‌ ಸಂಸ್ಥೆ ಅಧಿಕಾರಿಗಳನ್ನು ರೈತ ಸಿ.ಬಿ.ಚಂದ್ರಶೇಖರ್‌ ತರಾಟೆಗೆ ತೆಗೆದುಕೊಂಡರು.

Advertisement

ತಾಲೂಕಿನ ಚಿಕ್ಕಮರಳಿ ಪ್ರಗತಿಪರ ರೈತ ತಮ್ಮಯ್ಯಪ್ಪ ತಿಮ್ಮೇಗೌಡರ ಜಮೀನಿನಲ್ಲಿ ಸೀಡ್ಸ್‌ ಸಂಸ್ಥೆ ಏರ್ಪಡಿಸಿದ್ದ ಭತ್ತದ ಬೆಳೆ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾವು ಬೆಳೆದಿದ್ದ ಬೆಳೆಯ ಮಾದರಿ ತಂದು ಅಧಿಕಾರಿಗಳಿಗೆ ನೀಡಿ ತಮ್ಮ ಅಸಮಾದಾನ ಹೊರಹಾಕಿದರು.

ಬೆಳೆ ವಿಮೆ ಮಾಡಿ: ಟಾಟಾಸೀಡ್ಸ್‌ ಸಂಸ್ಥೆಯ ಡಿಆರ್‌ಎಚ್-836 ತಳಿಯ ಭತ್ತ 5 ಎಕರೆಯಲ್ಲಿ ನಾಟಿ ಮಾಡಿಸಿದ್ದೇವೆ. ಸಂಸ್ಥೆಯ ಅಧಿಕಾರಿಗಳ ಸಲಹೆಯಂತೆಯೇ ರಸಗೊಬ್ಬರ, ಕೀಟನಾಶಕ ಬಳಕೆ ಮಾಡಿದ್ದೇವೆ. ಆದರೂ ನಮ್ಮ ಜಮೀನಿನಲ್ಲಿ ಭತ್ತ ಸರಿಯಾಗಿ ಬೆಳೆದಿಲ್ಲ, ಶೇ.25ರಷ್ಟು ಭತ್ತ ಜೊಳ್ಳಾಗಿದೆ. ಎಕರೆಗೆ ಕನಿಷ್ಠ 25 ಕ್ವಿಂಟಾಲ್ ಇಳುವರಿ ಬಂದರೆ ಸಾಕಾಗಿದೆ. ರೈತರಿಗೆ ಬಿತ್ತನೆ ಬೀಜ ಕೊಡುವ ಸಂಸ್ಥೆಗಳು ರೈತರ ಬೆಳೆಗೆ ವಿಮೆ ನೀಡಿದರೆ ಅನುಕೂಲವಾಗುತ್ತದೆ. ಇಲ್ಲವಾದರೆ ನಿಮ್ಮ ಸಂಸ್ಥೆಯಿಂದಲೇ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಒಂದೇ ಸಮನಾಗಿ ಬಂದಿಲ್ಲ: ರೈತ ಕೃಷ್ಣೇಗೌಡ ಮಾತನಾಡಿ, ನಾನೂ ಸಹ ಡಿಆರ್‌ಎಚ್-836 ಭತ್ತದ ತಳಿ 3 ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ್ದೇನೆ. ನಮ್ಮ ಜಮೀನಿನಲ್ಲಿ ಭತ್ತ ಒಂದೇ ಸಮನಾಗಿ ಬಂದಿಲ್ಲ, ಒಂದು ಭತ್ತದ ಗೊನೆ ಹಣ್ಣಾಗಿದ್ದರೆ, ಇನ್ನೊಂದು ಇನ್ನೂ ಕಾಯಿ ಯಾಗಿದೆ. ಕಾಯಿಯಾಗಿರುವ ಭತ್ತ ಹಣ್ಣಾಗು ವವರೆಗೆ ಕಾದರೆ ಈಗಾಗಲೇ ಹಣ್ಣಾಗಿರುವ ಭತ್ತ ಉದುರಿ ಹೋಗುತ್ತದೆ. ಇದಕ್ಕೆ ನಾವೇನು ಮಾಡಬೇಕು ಎಂದು ಟಾಟಾಸೀಡ್ಸ್‌ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಟಾಟಾಸೀಡ್ಸ್‌ ಸಂಸ್ಥೆ ಮಾರುಕಟ್ಟೆ ಅಧಿಕಾರಿ ಶ್ರೀಕಾಂತ್‌ ಮಾತನಾಡಿ, ಟಾಟಾಸೀಡ್ಸ್‌ ಸಂಸ್ಥೆಯು 2008ರಿಂದ ರೈತರಿಗೆ ಭತ್ತ, ಮೆಕ್ಕೆಜೋಳ, ಹತ್ತಿ, ಸೂರ್ಯಕಾಂತಿ, ಎಣ್ಣೆ ಬಿತ್ತನೆ ಬೀಜ ಸೇರಿದಂತೆ ವಿವಿಧ ತರಕಾರಿಗಳ ಹೈಬ್ರೀಡ್‌ ಬಿತ್ತನೆ ಬೀಜಗಳನ್ನು ದೇಶಾದ್ಯಂತ ವಿತರಣೆ ಮಾಡುತ್ತಿದ್ದೇವೆ. ನಮ್ಮ ಸಂಸ್ಥೆಯ ಗುಣಮಟ್ಟ ಕಂಡು ಟಾಟಾಸಂಸ್ಥೆಯು 2011ರಲ್ಲಿ ನಮ್ಮ ಸೀಡ್ಸ್‌ ಸಂಸ್ಥೆಯನ್ನು ಟಾಟಾ ಸಂಸ್ಥೆಯೊಂದಿಗೆ ವಿಲೀನ ಮಾಡಿಕೊಂಡಿತ್ತು. ಅಲ್ಲಿಂದ ದೇಶಾದ್ಯಂತ ನಮ್ಮ ಸಂಸ್ಥೆಯಿಂದ ಬಿತ್ತನೆ ಬೀಜ ವಿತರಣೆ ಮಾಡುತ್ತಿದ್ದು, ದೇಶದಲ್ಲಿ 3ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಇದೇ ವೇಳೆ ಟಾಟಾಸೀಡ್ಸ್‌ ಸಂಸ್ಥೆಯ ಡಿಆರ್‌ಎಚ್-836 ಭತ್ತದ ತಳಿ ಬಿತ್ತನೆ ಮಾಡಿ ಉತ್ತಮ ಬೆಳೆ ತೆಗೆದಿರುವ ಪ್ರಗತಿಪರ ರೈತ ತಿಮ್ಮೇಗೌಡರನ್ನು ಸನ್ಮಾನಿಸಲಾಯಿತು.

Advertisement

ಕಾರ್ಯಕ್ರಮದಲ್ಲಿ ಗ್ರಾಪಂ ಮಾಜಿ ಸದಸ್ಯ ಸಿ.ಬಿ.ತಮ್ಮಣ್ಣ, ಪಿಎಸ್‌ಎಸ್‌ಕೆ ಮಾಜಿ ನಿರ್ದೇಶಕ ಸಿ.ಸ್ವಾಮೀಗೌಡ, ರೈತರಾದ ಹರಳಹಳ್ಳಿ ರಾಮೇಗೌಡ, ಬೇವಿನಕುಪ್ಪೆ ತಿಮ್ಮೇಗೌಡ, ಚಂದ್ರಶೇಖರ್‌, ಕೃಷ್ಣೇಗೌಡ, ಸ್ವಾಮೀಗೌಡ, ವಿಶ್ವನಾಥ್‌ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

ರೇಷ್ಮೆ ಬೆಳೆ ವೈಜ್ಞಾನಿಕ ಬೆಲೆಗೆ ಆಗ್ರಹ:

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೇಷ್ಮೆ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ, ರೇಷ್ಮೆ ಬೆಳೆಗಾರರ ರಕ್ಷಣೆ ಮಾಡಬೇಕು ಎಂದು ಒತ್ತಾಯಿಸಿ ರೇಷ್ಮೆ ಬೆಳೆಗಾರರ ಒಕ್ಕೂಟದ ಕ್ಟ್ಛಾy ಕರ್ತರು ನಗರದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಧರಣಿ ನಡೆಸಿದರು. ಪ್ರತಿ ವರ್ಷ ಮಳೆಗಾಲದಲ್ಲಿ ಮಾತ್ರ ರೇಷ್ಮೆ ಬೆಳೆಯ ಬೆಲೆ ಕುಸಿತವಾ ಗುತ್ತಿತ್ತು. ಆದರೆ ಈ ವರ್ಷ ಬೇಸಿಗೆಯ ಲ್ಲಿಯೂ ಬೆಲೆ ಕುಸಿತ ವಾಗಿದ್ದು, ರೇಷ್ಮೆ ಬೆಳೆಗಾರರು ಸಂಕಷ್ಟ ಅನುಭವಿಸು ವಂತಾಗಿದೆ. ರೇಷ್ಮೆ ಉತ್ಪಾ ದನೆಗೆ ಖರ್ಚು ಮಾಡಿದ ಹಣವೇ, ಮರಳಿ ಬಾರದಿರು ವಷ್ಟು ರೇಷ್ಮೆ ಬೆಲೆ ಕುಸಿತವಾಗಿದೆ. ರೇಷ್ಮೆ ಬೆಲೆ ಕುಸಿತಕ್ಕೆ ಅಧಿಕಾರಿಗಳು ಹಾಗೂ ಕೃಷಿ ತಜ್ಞರ ನಿರ್ಲಕ್ಷ್ಯವೇ ಪ್ರಮುಖ ಕಾರ ಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಷ್ಟ ಸರ್ಕಾರವೇ ಭರಿಸಲಿ: ಕಳೆದ ಸರ್ಕಾರದಲ್ಲಿ ಪ್ರತಿ ಕೆ.ಜಿ. ರೇಷ್ಮೆಗೆ 30 ರೂ. ಬೆಂಬಲ ಬೆಲೆ ನೀಡಲಾಗುತ್ತಿತ್ತು. ಆದರೆ, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ 40 ರೂ. ಬೆಂಬಲ ಬೆಲೆ ನೀಡುವುದಾಗಿ ಹೇಳಿದ್ದರೂ, ಈವರೆಗೆ ರೈತರಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಸಿಬಿ ರೇಷ್ಮೆ ಗೂಡಿಗೆ 350 ರೂ. ಹಾಗೂ ಸಿಎಸ್‌ಆರ್‌ ರೇಷ್ಮೆ ಗೂಡಿ ಗೆ 400 ರೂ. ಬೆಲೆ ನೀಡಬೇಕು. ಇಲ್ಲವಾ ದಲ್ಲಿ ಬಸವರಾಜ ಸಮಿತಿ ಶಿಫಾರಸ್ಸಿನಂತೆ ರೇಷ್ಮೆ ಬೆಲೆ 300 ರೂ.ಗಳಿಗಿಂತ ಕಡಿಮೆ ಯಾದರೆ ಅದರ ನಷ್ಟ ಸರ್ಕಾರವೇ ಭರಿಸಬೇಕು ಎಂದು ಆಗ್ರಹಿಸಿದರು.

ರೈತರ ವಲಸೆ: ರೇಷ್ಮೆ ಬೆಳೆ ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿದ್ದು, 18 ವರ್ಷ ದಿಂದ 60 ವರ್ಷ ದಾಟಿದ ವೃದ್ಧರಿಗೂ ದೈಹಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಉದ್ಯೋಗ ದೊರೆಯುತ್ತದೆ. ರೇಷ್ಮೆ ಬೆಲೆ ಕುಸಿತದಿಂದ ರೈತರು ವಿಮುಖರಾಗಿ ಕೃಷಿ ಬಿಟ್ಟು ನಗರ ಪ್ರದೇಶಕ್ಕೆ ವಲಸೆ ಹೋಗು ವಂತಾ ಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ರೇಷ್ಮೆಗೆ ವೈಜ್ಞಾನಿಕ ಬೆಲೆ ನಿಗದಿ ಹಾಗೂ ರೇಷ್ಮೆ ಬೆಳೆಗಾರರಿಗೆ ಆರೋಗ್ಯ ವಿಮೆ ನೀಡಿ ರಕ್ಷಣೆಗೆ ಮುಂ ದಾಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next