Advertisement

ನಗರಸಭೆ ಮಾಜಿ ಅಧ್ಯಕ್ಷರ ಬಡಾವಣೆ ನೋಡಿ!

04:13 PM Apr 24, 2017 | Team Udayavani |

ಶಹಾಬಾದ: ಕಸಕಡ್ಡಿ, ಪ್ಲಾಸ್ಟಿಕ್‌ಗಳಿಂದ ತುಂಬಿಕೊಂಡಿರುವ ಚರಂಡಿ, ವಿಲೇವಾರಿಯಾಗದ ಕಸ, ಎಲ್ಲೆಂದರಲ್ಲಿ ಓಡಾಡುವ ಹಂದಿಗಳು, ಸೋರುತ್ತಿರುವ ಕೊಳವೆ ಬಾವಿ. ಬೀದಿ ದೀಪಗಳಿಲ್ಲದೆ ಕತ್ತಲು ಆವರಿಸಿರುವ ಬಡಾವಣೆಗಳು. ಇವು ನಗರಸಭೆ ಮಾಜಿ ಅಧ್ಯಕ್ಷ ಗಿರೀಶ ಕಂಬಾನೂರ ಹಾಗೂ ಹಾಲಿ ಸದಸ್ಯರಿರುವ ವಾರ್ಡ್‌ ನಂ.14ರ ಸಮಸ್ಯೆಗಳು.

Advertisement

ಚರಂಡಿಗಳು ಕಸದಿಂದ ತುಂಬಿಕೊಂಡು ನೀರು ಸರಾಗವಾಗಿ ಹರಿಯದೆ ಗಬ್ಬೆದ್ದು ನಾರುತ್ತಿದೆ. ಎಲ್ಲೆಂದರಲ್ಲಿ ಬಿದ್ದ ಕಸ ಸರಿಯಾಗಿ ವಿಲೇವಾರಿ ಆಗದಿರುವುದರಿಂದ ಬಡಾವಣೆ ಜನತೆ ಸೊಳ್ಳೆಗಳ ಕಾಟದಿಂದ ವಿವಿಧ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ರಾತ್ರಿಯಾದರೆ ಬೀದಿ ದೀಪಗಳಿಲ್ಲದೇ ತೊಂದರೆ ಪಡುವಂತಾಗಿದೆ.

ಅಲ್ಲದೆ ವೃದ್ಧರು ಮನೆಯಿಂದ ಹೊರಗೆ ಹೋಗುವುದಕ್ಕೆ ಆತಂಕ ಪಡುತ್ತಿದ್ದಾರೆ. ಕೊಲ್ಲಾಪುರ ಲಕ್ಷ್ಮೀ ದೇವಸ್ಥಾನದ ಸಮೀಪದಲ್ಲಿರುವ ಕೊಳವೆ ಬಾವಿ ಸುತ್ತ ಚರಂಡಿಯ ನೀರು, ಕಸ ಸಂಗ್ರಹವಾಗಿದ್ದು, ಆ ಕೊಳವೆ ಬಾವಿಯ ನೀರನ್ನೇ ನಿವಾಸಿಗಳು ಕುಡಿಯುವ ಅನಿವಾರ್ಯತೆ ಎದುರಾಗಿದೆ.

ಅಲ್ಲದೆ ಬೀದಿ ನಾಯಿ ಮತ್ತು ಹಂದಿಗಳ ಉಪಟಳ ಮಿತಿ ಮೀರಿದೆ. ವಾರ್ಡ್‌ ಸದಸ್ಯ ಹಾಗೂ ಮಾಜಿ ನಗರಸಭೆ ಅಧ್ಯಕ್ಷ ಗಿರೀಶ ಕಂಬಾನೂರ ಕೊಳವೆ ಬಾವಿ ಸುತ್ತಲೂ ಆವರಿಸಿರುವ ಕಸವನ್ನು ವಿಲೇವಾರಿ ಮಾಡಲು ಅನೇಕ ಬಾರಿ ತಿಳಿಸಿದ್ದೇವೆ.ಆದರೂ ಕ್ಯಾರೇ ಎನ್ನುತ್ತಿಲ್ಲ.

ನಗರಸಭೆ ಪ್ರಭಾರಿ ಪೌರಾಯುಕ್ತ ಹುದ್ದೆ ಹೊಂದಿರುವ ಎಇಇ ಶರಣು ಪೂಜಾರಿ ಅವರಿಗೆ ಸಿಬ್ಬಂದಿ ವರ್ಗದವರಿಂದ ಕೆಲಸ ಮಾಡಿಸಲು ಸಾಧ್ಯವಾಗುತ್ತಿಲ್ಲ. ಸಾರ್ವಜನಿಕರ ಸಮಸ್ಯೆ ಕೇಳಿದರೆ ಸಿಬ್ಬಂದಿ ಜೊತೆ ಮಾತನಾಡಿ ಎಂದು ಹೇಳುವ ಅಧಿಧಿಕಾರಿ ನಮಗೆ ಬೇಕಿಲ್ಲ. ಈ ಕುರಿತು ಜಿಲ್ಲಾಧಿಕಾರಿಗೆ ದೂರು ನೀಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Advertisement

ಸೊಳ್ಳೆಗಳ ಕಾಟ: ಬಡಾವಣೆಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆಯಿಲ್ಲದ ಕಾರಣ ಕೊಳಚೆ ನೀರು ಸಂಗ್ರಹವಾಗಿ ಸೊಳ್ಳೆಗಳ ಕಾಟ ವಿಪರೀತವಾಗಿದೆ. ರಾತ್ರಿ ಮಲಗಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 

* ಮಲ್ಲಿನಾಥ ಜಿ.ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next