Advertisement

ಗೋಲ್ಕೊಂಡ ಕೋಟೆ ಸೊಬಗು ಒಮ್ಮೆಯಾದರೂ ನೋಡಿಬನ್ನಿ

08:40 PM Feb 12, 2020 | Sriram |

ಮುತ್ತಿನ ನಗರ ಮತ್ತು ಬಿರಿಯಾನಿ ನಗರ ಎಂದೇ ಪ್ರಸಿದ್ಧಿ ಪಡೆದಿರುವ ಹೈದರಾಬಾದ್‌ ತೆಲಂಗಾಣ ರಾಜ್ಯದಲ್ಲಿರುವ ಒಂದು ಅದ್ಭುತ ನಗರವಾಗಿದೆ. ಕಣ್ಮನ ಸೆಳೆಯುವ ಹಲ ವಾರು ಪ್ರವಾಸಿ ತಾಣಗಳು ತನ್ನ ತೆಕ್ಕೆಯಲ್ಲಿಟ್ಟು ಕೊಂಡಿರುವ ಹೈದರಾಬಾದ್‌ ಪ್ರವಾಸಿಗರ ಪ್ರಮುಖ ಆಕರ್ಷಣೆ. ನಿಜಾಮರ ನಾಡಿಗೆ ಪ್ರವಾಸ ಕೈಗೊಳ್ಳಲು ಸೂಕ್ತ ತಾಣವಾಗಿದೆ.

Advertisement

ಗೋಲ್ಕೊಂಡ ಕೋಟೆ ಈ ಪ್ರದೇಶದ ಅತ್ಯು ತ್ತಮ ಸಂರಕ್ಷಿತ ಸ್ಮಾರಕಗಳಲ್ಲಿ ಒಂದಾಗಿದೆ. ಈ ಕೋಟೆಯ ನಿರ್ಮಾಣವು 1600ರ ದಶಕದಲ್ಲಿ ಪೂರ್ಣಗೊಂಡಿತು ಮತ್ತು ಒಮ್ಮೆ ಕೊಹ್‌-ಐ- ನೂರ್‌ ವಜ್ರವನ್ನು ಸಂಗ್ರಹಿಸಿದ ಪ್ರದೇಶವೆಂದು ಹೆಸರುವಾಸಿಯಾಗಿದೆ.

ಕುರಿಗಾಹಿಗಳ ದಿಬ್ಬ
ಗೋಲ್ಕೊಂಡಾ ಕೋಟೆ ಅಥವಾ ಗೊಲ್ಲ ಕೊಂಡ ಕೋಟೆಯು ಕುರಿಗಾಹಿಗಳ ದಿಬ್ಬ ಎಂಬ ಅರ್ಥವನ್ನು ಸೂಚಿಸುತ್ತದೆ. ಈ ಕೋಟೆಯನ್ನು ಹೈದರಾಬಾದಿನಿಂದ 11 ಕಿ.ಮೀ. ದೂರದಲ್ಲಿ 15ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಗೋಲ್ಕೊಂಡಾ ಒಂದಾನೊಂದು ಕಾಲದಲ್ಲಿ ವೈಭವಯುತವಾಗಿದ್ದ ನಗರವಾಗಿತ್ತು. ಆದರೆ ಇಂದು ನಾವು ಇಲ್ಲಿ ಆ ಗತಕಾಲದ ವೈಭವವನ್ನು ಕೇವಲ ಅಳಿದುಳಿದ ಅವಶೇಷಗಳಲ್ಲಿ ಮಾತ್ರ ಕಾಣಬಹುದು. ಈ ಪ್ರದೇಶವು ತನ್ನಲ್ಲಿ ದೊರಕಿದ ವಿಶ್ವವಿಖ್ಯಾತ ವಜ್ರ ವೈಢೂರ್ಯಗಳಾದ ಕೊಹಿ ನೂರ್‌, ಐಡಲ್ಸ್‌ ಐ ಮತ್ತು ಹೋಪ್‌ ಡೈಮಂಡ್‌ ಗಳಿಗಾಗಿ ಪ್ರಸಿದ್ಧವಾಗಿದೆ.

ಗೋಲ್ಕೊಂಡಾ ಕೋಟೆಯನ್ನು 1512ನೇ ಇಸವಿಯಲ್ಲಿ ಈ ನಗರವನ್ನು ಆಳಿದ ಖುತುಬ್‌ ಷಾಹಿ ಸಾಮ್ರಾಜ್ಯದ ಅರಸರು ನಿರ್ಮಿಸಿದರು. ಖುಲಿ ಖುತುಬ್‌ ಷಾಹ್‌ ವಾಲಿಯ ಅವಧಿಯಲ್ಲಿ ಈ ಕೋಟೆಯ ಬಹುಪಾಲು ಭಾಗವು ನಿರ್ಮಾಣ ಗೊಂಡಿತು. ಈ ಕೋಟೆಯನ್ನು ಉತ್ತರ ಭಾರತದ ಮೊಘಲರ ದಾಳಿಯಿಂದ ರಕ್ಷಿಸುವ ಸಲುವಾಗಿ ನಿರ್ಮಿಸಲಾಯಿತು.

ಮರುಕಳಿಸುವ ಸಪ್ಪಳ
ಈ ಕೋಟೆಯ ವಿಶೇಷ ಅಂಶವೆಂದರೆ ಇಲ್ಲಿನ ಧ್ವನಿವ್ಯವಸ್ಥೆ, ಅದು ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಸೇರಿದೆ. ನೀವು ಈ ಕೋಟೆಯ ಆವರಣದಲ್ಲಿ ನಿಂತು ಚಪ್ಪಾಳೆ ಬಾರಿಸಿದರೆ, ಅದರ ಪ್ರತಿಧ್ವನಿಯು ಮುಖ್ಯ ಪ್ರವೇಶ ದ್ವಾರದಿಂದ 91 ಮೀಟರ್‌ ಎತ್ತರದಲ್ಲಿರುವ ಭಾಗಗಳಿಗೂ ಕೇಳುತ್ತದೆ. ಅಲ್ಲದೆ ನಂಬಿಕೆಗಳ ಪ್ರಕಾರ ಗೋಲ್ಕೊಂಡಾ ಕೋಟೆಯಿಂದ ಚಾರ್‌ ಮಿನಾರಿಗೆ ಒಂದು ರಹಸ್ಯ ಸುರಂಗ ಮಾರ್ಗವಿದೆಯಂತೆ. ಆದರೆ ಅದರ ಕುರುಹುಗಳು ಮತ್ತು ಸಾಕ್ಷಿಗಳು ಯಾವುವೂ ಇದುವರೆಗೂ ದೊರೆತಿಲ್ಲ.

Advertisement

ಬೆಳಗ್ಗಿನ ಸಮಯ ಸೂಕ್ತ
ಇಲ್ಲಿನ ವಾಸ್ತುಶಿಲ್ಪ, ದಂತಕಥೆಗಳು, ಇತಿಹಾಸ ಮತ್ತು ಗೋಲ್ಕೊಂಡ ಕೋಟೆಯ ರಹಸ್ಯವು ಅದರ ಆಕರ್ಷಣೆಯನ್ನು ಹೆಚ್ಚಿಸುತ್ತದೆ ಮತ್ತು ಹೈದರಾಬಾದ್‌ನಲ್ಲಿ ನೋಡಲೇಬೇಕಾದ ಸ್ಥಳಗಳಲ್ಲಿ ಇದೂ ಒಂದು. ಇಲ್ಲಿಗೆ ಬೆಳಗ್ಗಿನ ಸಮಯದಲ್ಲಿ ಇಲ್ಲವೇ ಸಂಜೆಯ ಹೊತ್ತಿನಲ್ಲಿ ಹೋಗಬೇಕು. ಮಧ್ಯಾಹ್ನ ಸಮಯದಲ್ಲಿ ತುಂಬಾನೇ ಬಿಸಿಲು ಇರುವುದರಿಂದ ಕೋಟೆ ಹತ್ತಲು ಸಾಧ್ಯವಾಗುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next