Advertisement

ಮೊದಲ ಚಿತ್ರದಲ್ಲಿ ಅಭಿಷೇಕ್ ಹೀಗೆ ಕಾಣ್ತಾರೆ ನೋಡಿ!

11:07 AM May 26, 2018 | |

ಅಂಬರೀಶ್ ಪುತ್ರ ಅಭಿಷೇಕ್ ಅಭಿನಯದ ಮೊದಲ ಚಿತ್ರವು ಕೊನೆಗೂ ಶುರುವಾಗುವ ಹಂತಕ್ಕೆ ಬಂದಿದೆ. ಚಿತ್ರಕ್ಕೆ ಈಗಾಗಲೇ “ಅಮರ್’ ಎಂದು ಹೆಸರಿಡಲಾಗಿದ್ದು, ಚಿತ್ರವನ್ನು ನಾಗಶೇಖರ್ ನಿರ್ದೇಶಿಸುತ್ತಿದ್ದಾರೆ.

Advertisement

ಈ ಚಿತ್ರದ ಮುಹೂರ್ತ ಸೋಮವಾರ (ಮೇ 28) ನಡೆಯಲಿದ್ದು, ಚಿತ್ರದ ಮೊದಲ ಫೋಟೋ ಇದೀಗ ಬಿಡುಗಡೆಯಾಗಿದೆ. ಈ ಫೋಟೋದಲ್ಲಿ ಅಭಿಷೇಕ್ ಬಹಳ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದು, ಭುವನ್ ಗೌಡ ಇತ್ತೀಚೆಗೆ ಫೋಟೋ ಶೂಟ್ ಮಾಡಿದ್ದಾರೆ.

“ಅಮರ್’ ಚಿತ್ರವನ್ನು ಸಂದೇಶ್ ನಾಗರಾಜ್ ನಿರ್ಮಿಸುತ್ತಿದ್ದು, ಚಿತ್ರಕ್ಕೆ ಸತ್ಯ ಹೆಗಡೆ ಅವರ ಛಾಯಾಗ್ರಹಣ, ಅರ್ಜುನ್ ಜನ್ಯಾ ಅವರ ಸಂಗೀತ, ದೀಪು ಎಸ್ ಕುಮಾರ್ ಸಂಕಲನವಿರಲಿದೆ. ಚಿತ್ರದಲ್ಲಿ ಸುಹಾಸಿನಿ, ರಂಗಾಯಣ ರಘು, ಸಾಧು ಕೋಕಿಲ, ಚಿಕ್ಕಣ್ಣ ಮುಂತಾದವರು ಕಾಣಿಸಿಕೊಳ್ಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next