Advertisement

ಕೊತ್ತಲ ಬಸವೇಶ್ವರ ದೇಗುಲ ಸೀಲ್‌ಡೌನ್‌

01:38 PM Apr 20, 2020 | Naveen |

ಸೇಡಂ: ಪಟ್ಟಣದ ಸುಪ್ರಸಿದ್ಧ ಐತಿಹಾಸಿಕ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ರವಿವಾರ ದೇವಾಲಯವನ್ನು ಸೀಲ್‌ಡೌನ್‌ ಮಾಡಲಾಗಿದ್ದು, ಸ್ವಾಮೀಜಿ ಮೇಲೂ ನಿಗಾ ವಹಿಸಲಾಗಿದೆ.

Advertisement

ಇತ್ತೀಚೆಗೆ ವಾಡಿ ಸಮೀಪದ ರಾವೂರ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಜಾತ್ರೆಗಳು ನಡೆದ ಪರಿಣಾಮ ತಾಲೂಕು ಆಡಳಿತ ಕಟ್ಟೆಚ್ಚರ ವಹಿಸಿದೆ. ರವಿವಾರ ಕೊತ್ತಲ ಬಸವೇಶ್ವರ ಜಾತ್ರೆ ಇದ್ದ ನಿಮಿತ್ತ, ದೇವಾಲಯ ಸಮಿತಿ ಜಾತ್ರೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರೂ ಮುಂಜಾಗ್ರತಾ ಕ್ರಮವಾಗಿ ದೇವಾಲಯಕ್ಕೆ ಪೊಲೀಸ್‌ ಸರ್ಪಗಾವಲು ಹಾಕಲಾಗಿದೆ.

ದೇವಾಲಯದ ಪ್ರಮುಖ ದ್ವಾರಗಳಿಗೆ ಕಟ್ಟಿಗೆಗಳ ಬೇಲಿ ನಿರ್ಮಿಸಿದ್ದಲ್ಲದೆ, ಪರದೆ ಹಾಕಿ ದೇವಾಲಯವನ್ನು ಭಕ್ತರಿಗೆ ಕಾಣದಂತೆ ಮರೆಮಾಚಲಾಗಿದೆ. ಪ್ರತಿ ವರ್ಷ ಜಾತ್ರೆ ದಿನ ಸಾವಿರಾರು ಜನರಿಂದ ಕಂಗೊಳಿಸುತ್ತಿದ್ದ ರಥ ಬೀದಿ ರವಿವಾರ ಬಿಕೋ ಎನ್ನುತ್ತಿತ್ತು. ಎಲ್ಲೆ ನೋಡಿದರಲ್ಲಿ ಪೊಲೀಸರ ಬೂಟು, ಲಾಠಿ ಸಪ್ಪಳ ಕೇಳಿಬರುತ್ತಿತ್ತು. ಸಹಾಯಕ ಆಯುಕ್ತ ರಮೇಶ ಕೋಲಾರ, ತಹಶೀಲ್ದಾರ್‌ ಬಸವರಾಜ ಬೆಣ್ಣೆಶಿರೂರ, ಸಿಪಿಐ ರಾಜಶೇಖರ ಹಳಗೋದಿ, ಪಿಎಸ್‌ಐ ಸುಶೀಲಕುಮಾರ, ವಿದ್ಯಾಶ್ರೀ ದೇವಾಲಯಕ್ಕೆ ಪದೇ ಪದೇ ಭೇಟಿ ನೀಡಿ ಆಗುಹೋಗುಗಳ ಮೇಲೆ ನಿಗಾ ಇಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next