Advertisement
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಕರೆದ ಎನ್‌ಜಿಒ, ದಾನಿಗಳ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಮಳಖೇಡ ರಾಜಶ್ರೀ ಸಿಮೆಂಟ್ ಕಾರ್ಖಾನೆ, ಅಜೀಂ ಪ್ರೇಮಜಿ ಫೌಂಡೇಷನ್, ಮಾರ್ವಾಡಿ ಸಮಾಜ, ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೀಗೆ ಹಲವಾರು ದಾನಿಗಳಿಂದ ಪಡೆದಂತಹ ದವಸ ಧಾನ್ಯ, ಅಡುಗೆ ಸಾಮಗ್ರಿಗಳ 3600 ಕಿಟ್‌ಗಳನ್ನು ಈಗಾಗಲೇ ಅವಶ್ಯಕತೆ ಇರುವ ಕುಟುಂಬಗಳಿಗೆ ತಲುಪಿಸಲಾಗಿದೆ. ಯಾವುದೇ ಪಕ್ಷ ಬೇಧ, ಜಾತಿ ಬೇಧ ಮಾಡದೇ ಕಷ್ಟದಲ್ಲಿರುವವರಿಗೆ ಕಿಟ್ ಗಳನ್ನು ಸರಬರಾಜು ಮಾಡಲಾಗಿದೆ. ಪಡಿತರ ಕಾರ್ಡ್ ಹೊಂದಿರದವರು ಹಾಗೂ ಪಡಿತರಕ್ಕಾಗಿ ಅರ್ಜಿ ಹಾಕದ 1800 ಕುಟುಂಬಗಳನ್ನು ಗುರುತಿಸಲಾಗಿದ್ದು, ಅವರಿಗೂ ಸಹ ದವಸ ಧಾನ್ಯ ತಲುಪಿಸಲಾಗುತ್ತಿದೆ. ಈಗ ಸರ್ಕಾರದ ಆದೇಶದಂತೆ ವಿವಿಧ ರೀತಿಯಲ್ಲಿ ಜನರಿಗೆ ನೆರವಾದ ಎನ್.ಜಿ.ಒಗಳು, ವೈಯಕ್ತಿಕ ದಾನಿಗಳ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಮುಂದೆ ದಾನಿಗಳಿಗೆ ಅನುಕೂಲವಾಗಲಿದೆ.
Advertisement
3600 ಆಹಾರ ಧಾನ್ಯ ಕಿಟ್ ವಿತರಣೆ: ಬಸವರಾಜ
01:27 PM Apr 27, 2020 | Naveen |
Advertisement
Udayavani is now on Telegram. Click here to join our channel and stay updated with the latest news.