ಉಳ್ಳಾಲ: ತೊಕ್ಕೊಟ್ಟು ಜಂಕ್ಷನ್‍ನಲ್ಲಿರುವ ಸ್ಮಾರ್ಟ್ ಪ್ಲಾನೆಟ್ ವಸತಿ ಸಂಕೀರ್ಣದಲ್ಲಿ ಕಳೆದ ಮೂರು ವರ್ಷಗಳಿಂದ ಸೆಕ್ಯುರಿಟಿ ಕೆಲಸ ಮಾಡುತ್ತಿರುವ ಕೇರಳ ಕ್ಯಾಲಿಕಟ್ ಮೂಲದ ಮೊಯ್ದಿನ್ ಕುಟ್ಟಿ(65) ಇವರಿಗೆ ಕೇರಳ ರಾಜ್ಯ ಭಾಗ್ಯಮಿತ್ರ ಲಾಟರಿಯಲ್ಲಿ ಒಂದು ಕೋಟಿ ರೂ. ಪ್ರಥಮ ಬಹುಮಾನ ಲಭಿಸಿದೆ.
ಲಾಟರಿ ತೆಗೆಯುವ ಹವ್ಯಾಸವಿದ್ದ ಮೊಯ್ದಿನ್ ಕುಟ್ಟಿ ಉಪ್ಪಳದಲ್ಲಿ ಖರೀದಿಸಿದ ಎ.4ರಂದು ಡ್ರಾ ಆದ ಲಾಟರಿಯಲ್ಲಿ ಇವರು ಖರೀದಿಸಿದ ಬಿ.ಜೆ. 134048 ಸಂಖ್ಯೆಗೆ ಒಂದು ಕೋಟಿ ರೂ. ಪ್ರಥಮ ಬಹುಮಾನ ಬಂದಿದ್ದು ಲಾಟರಿಯ ಪ್ರಥಮ ಬಹುಮಾನದಲ್ಲಿ ಐದು ಮಂದಿ ಕೋಟಿ ವಿಜೇತರಲ್ಲಿ ಮೊಯ್ದಿನ್ ಕುಟ್ಟಿ ಒಬ್ಬರಾಗಿದ್ದಾರೆ.
ಮೊಯದಇನ್ ಕುಟ್ಟಿ ಅವರು ಸ್ಮಾರ್ಟ್‍ಸಿಟಿಯಲ್ಲಿ ಒಮೆಗಾ ಟೈಲರ್ ಅಂಗಡಿಯ ಮಾಲಕ ರವಿ ಅವರಿಂದ ಐನೂರು ರೂ. ಸಾಲ ಪಡೆದು ಉಪ್ಪಳಕ್ಕೆ ತೆರಳಿ ಲಾಟರಿ ಖರೀದಿಸಿದ್ದರು. ಕಳೆದ ಹಲವು ದಶಕಗಳಿಂದ ಲಾಟರಿ ಖರೀದಿಸುವ ಗೀಳು ಇಟ್ಟುಕೊಂಡಿದ್ದ ಕುಟ್ಟಿಗೆ ಈ ಬಾರಿ ಭಾಗ್ಯಮಿತ್ರ ಅದೃಷ್ಟ ನೀಡಿದೆ.
ವಿದೇಶದಲ್ಲೂ ಕೋಟಿ ಗೆದ್ದಿದ್ದರು : ವಿದೇಶದಲ್ಲಿ ಉದ್ಯೋಗದಲ್ಲಿದ್ದ ಮೊಯ್ದಿನ್ ಕುಟ್ಟಿ ಅವರಿಗೆ 1988ರ ಸುಮಾರಿಗೆ ದುಬೈ ಮೂಲದ ಲಾಟರಿಯಲ್ಲೂ ಒಂದು ಕೋಟಿ ಬಹುಮಾನ ಪಡೆದಿದ್ದೆ ಎನ್ನುವ ಕುಟ್ಟಿ ಭಾರತದ ಕರೆನ್ಸಿಯ ಪ್ರಕಾರ 10 ಕೋಟಿ ರೂ. ಈ ಗೆದ್ದ ಲಾಟರಿಯ ಮೌಲ್ಯವಾಗಿದ್ದು, ಈ ಹಣದಿಂದ ಜಾಗ ಖರೀದಿಸಿ ಮನೆ ಕಟ್ಟಿದ್ದೆ ಎನ್ನುತ್ತಾರೆ ಮಲಯಾಳಂನಲ್ಲಿ ಮಾತನಾಡುವ ಇವರು ಸೆಕ್ಯುರಿಟಿಯಾಗಿ ಮಂಗಳೂರಿಗೆ ಬರಲು ಯಾವ ಕಾರಣ ಎಂದು ತಿಳಿಸಿಲ್ಲ.
ಲಾಟರಿಯಲ್ಲಿ ಕೋಟಿ ಪಡೆಯುತ್ತಿದ್ದಂತೆ ಮೊಯ್ದಿನ್ ಕುಟ್ಟಿ ಅವರನ್ನು ಕಳೆದೆರಡು ದಿನಗಳಿಂದ ವಿಚಾರಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಲಾಟರಿಯನ್ನು ಸಂಬಂಧಿತ ಏಜೆನ್ಸಿಯ ಮೂಲಕ ಲಾಟರಿ ನಡೆಸುವ ಇಲಾಖೆಗೆ ಹಸ್ತಾಂತರಿಸಿದ್ದು, ಬಹುಮಾನ ಪಡೆದ ಲಾಟರಿಯ ಝೆರಾಕ್ಸ್ ಪ್ರತಿ ಕೈಯಲ್ಲಿಟ್ಟುಕೊಂಡಿದ್ದಾರೆ.