Advertisement

ಬ್ರಸೆಲ್ಸ್‌ ರೈಲು ನಿಲ್ದಾಣದಲ್ಲಿ ಸ್ಫೋಟ; ಶಂಕಿತ ಗುಂಡಿಗೆ ಬಲಿ, ಭದ್ರತ

12:32 PM Jun 21, 2017 | udayavani editorial |

ಬ್ರಸೆಲ್ಸ್‌ : ಇಲ್ಲಿನ ಸಿಟಿ ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ವ್ಯಕ್ತಿಯೋರ್ವ ಉಪಕರಣವೊಂದನ್ನು ಸ್ಫೋಟಿಸಿದ ಘಟನೆಯನ್ನು ಅನುಸರಿಸಿ ರೈಲು ನಿಲ್ದಾಣದಲ್ಲಿ  ಗರಿಷ್ಠ ಭದ್ರತೆಯನ್ನು ಆಯೋಜಿಸಲಾಗಿದೆ ಎಂದು ಬೆಲ್ಜಿಯನ್‌ ಅಧಿಕಾರಿ ತಿಳಿಸಿದ್ದಾರೆ. 

Advertisement

ನಿನ್ನೆ ತಡರಾತ್ರಿ ವ್ಯಕ್ತಿಯೋರ್ವ ಸಣ್ಣ ಉಪಕರಣವೊಂದನ್ನು ಸ್ಫೋಟಿಸಿದಾಕ್ಷಣ ಆತನನ್ನು ಕೂಡಲೇ ಸೈನಿಕನೋರ್ವ ಗುಂಡಿಕ್ಕಿದ. ಗುಂಡೇಟಿಗೆ ಗುರಿಯಾದ ಆ ವ್ಯಕ್ತಿ ಬಳಿಕ ಕೊನೆಯುಸಿರೆಳೆದ. ಆತನ ಸ್ಫೋಟ ಕೃತ್ಯದಲ್ಲಿ ಯಾರೊಬ್ಬರೂ ಗಾಯಗೊಂಡಿರಲಿಲ್ಲ. 

ಈ ಘಟನೆಯನ್ನು ಅನುಸರಿಸಿ ಭದ್ರತಾ ಕಾರಣಕ್ಕಾಗಿ ನಿನ್ನೆ ತಡರಾತ್ರಿ ಮುಚ್ಚಲ್ಪಟ್ಟಿದ್ದ  ಸಿಟಿ ಸೆಂಟ್ರಲ್‌ ರೈಲು ಇಂದು ಬೆಳಗ್ಗೆ ಎಂದಿನಂತೆಯೇ ತೆರೆಯುವುದಿತ್ತು. ಆ ಪ್ರಕಾರ ಎಲ್ಲ ಸಿಬಂದಿಗಳು ಕರ್ತವ್ಯ ನಿರ್ವಹಣೆಗೆ ಆಗಮಿಸತೊಡಗಿದ್ದರು. ಆದರೆ ಪೊಲೀಸರು ಹಾಕಿದ್ದ ಭದ್ರತಾ ಬ್ಯಾರಿಕೇಡ್‌ಗಳನ್ನು ತೆರವು ಗೊಳಿಸಲಾಗಿರಲಿಲ್ಲ. ಅಂತೆಯೇ ರೈಲು ನಿಲ್ದಾಣ ಇಂದು ಬೆಳಗ್ಗೆ ಮುಚ್ಚಿತ್ತು.

ಯಾವುದೇ ರೀತಿಯ ಅತಿಶಯದ ಪ್ರತಿಕ್ರಿಯೆ ತೋರುವುದಕ್ಕಿಂತ ಗರಿಷ್ಠ ಮುನ್ನೆಚ್ಚರಿಕೆಯ ಕ್ರಮವಾಗಿ ಭದ್ರತೆಯನ್ನು ಬಿಗಿ ಗೊಳಿಸುವುದೇ ಸರಿ ಎಂದು ಬೆಲ್ಜಿಯಂ ನ ಒಳಾಡಳಿತ ಸಚಿವ ಜ್ಯಾನ್‌ ಜ್ಯಾಂಬನ್‌ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next