ಸಂಡೂರು: ಎನ್‌ಎಂಡಿಸಿ ಗಣಿ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಮಡಿವಾಳ ಟಿ. ಕೊಟ್ರಪ್ಪ 16 ಚಕ್ರದ ಅದಿರು ಲಾರಿ ಗಾಲಿಗೆ ಸಿಕ್ಕು ಸಾವನ್ನಪ್ಪಿದ್ದು ತಕ್ಷಣ ಪರಿಹಾರ ಕೊಡಬೇಕೆಂದು ಒತ್ತಾಯಿಸಿ ಕರವೇ ಪ್ರತಿಭಟಿಸಿತು.
ಸೆಕ್ಯೂರಿಟಿ ಗಾರ್ಡ್ ಮಡಿವಾಳ ಟಿ.ಕೊಟ್ರಪ್ಪ ಕರ್ತವ್ಯ ನಿರತನಾಗಿದ್ದ ಸಂದರ್ಭದಲ್ಲಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಎನ್‌ಎಂಡಿಸಿ ಅವರು ಹೈದರಾಬಾದ್‌ನ ಎಸ್.ಎಸ್. ಕನಸ್ಟಕ್ಷನ್ ಕಂಪನಿಯವರಿಗೆ ಹೊರಗುತ್ತಿಗೆ ನೀಡಿದ್ದರು.
ಸ್ಥಳದಲ್ಲಿಯೇ ಸಾವನ್ನಪ್ಪಿದ ಮಡಿವಾಳ ಟಿ.ಕೊಟ್ರಪ್ಪನವರ ಕುಟುಂಬಕ್ಕೆ ಯಾವುದೇ ಪರಿಹಾರ ನೀಡದೆ ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ಕ.ರ. ವೇ. ತಾಲೂಕು ಘಟಕದ ಅಧ್ಯಕ್ಷ (ಶಿವರಾಮೇಗೌಡ ಬಣ) ಪಿ. ರಾಜು, ಗಣಿ ಕಾರ್ಮಿಕರ ಸಂಘದ ಅಧ್ಯಕ್ಷ ಆನಂದ, ರೈತ ಸಂಘದ ತಾಲೂಕು ಅಧ್ಯಕ್ಷ ಬಿ.ಎಂ. ಉಜ್ಜೀನಯ್ಯ, ಸತೀಶ್ ಜಿಲ್ಲಾಧಿ ಕಾರಿ ಪವನ್ ಕುಮಾರ ಮಲಪಾಟಿ ಅವರು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ನಡೆಸಿದರು.
ತದನಂತರ ಮಡಿವಾಳ ಟಿ. ಕೊಟ್ರಪ್ಪನವರ ಮೃತದೇಹವನ್ನು ಸಂಡೂರಿನ ಸಾರ್ವಜನಿಕ ಆಸ್ಪತ್ರೆಗೆ ಪೋಸ್ಟ್‌ಮಾರ್ಟಂಗಾಗಿ ತರಲಾಯಿತು. ತದನಂತರ ಕರವೇ ರಾಜು ಅವರು ಜಿಲ್ಲಾ ಧಿಕಾರಿ ಪವನ್ ಕುಮಾರ ಮಾಲಿಪಾಟಿ ಅವರ ಜೊತೆ ಮಾತನಾಡಿ, ಮೃತರ ಕುಟುಂಬಕ್ಕೆ ಪರಿಹಾರ ನೀಡಲು ಸೂಚಿಸಿದರು. ಸಂಡೂರಿನ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂಜೆ 5.40 ನಿಮಿಷಕ್ಕೆ ಮೃತನ ಪೋಸ್ಟ್‌ಮಾಟಂ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆಯಿತು