Advertisement

Jammu and Kashmir: ಮೂವರು ಉಗ್ರರನ್ನು ಹತ್ಯೆಗೈದ ಭದ್ರತಾ ಪಡೆ

11:19 PM Oct 29, 2024 | Team Udayavani |

ನವದೆಹಲಿ: ಜಮ್ಮು-ಕಾಶ್ಮೀರದ ಅಖ್ನೂರ್‌ ಬಳಿ ನಡೆದ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಮಂಗಳವಾರ ಮೂವರು ಉಗ್ರರನ್ನು ಹತ್ಯೆಗೈದಿದ್ದಾರೆ. ಈ ಕಾರ್ಯಾಚರಣೆಗೆ ಸೇನೆಯು ಮಾನವ ರಹಿತ ವಾಹನ ಹಾಗೂ ಕೃತಕ ಬುದ್ಧಿಮತ್ತೆ ಬಳಕೆ ಮಾಡಲಾಗಿದೆ. ಇದರ ಜತೆಗೆ ಅಖ್ನೂರ್‌ನಲ್ಲಿ ಸೋಮವಾರ ಉಗ್ರರ ವಿರುದ್ಧ ನಡೆಸಲಾಗಿದ್ದ ಕಾರ್ಯಾಚರಣೆಗೆ ಯುದ್ಧ ಟ್ಯಾಂಕರ್‌ ಅನ್ನೂ ಬಳಕೆ ಮಾಡಲಾಗಿದೆ.

Advertisement

ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ ಮೇ.ಜ. ಸಮೀರ್‌ ಶ್ರೀವಾಸ್ತವ ಮಾಹಿತಿ ನೀಡಿದ್ದು,” ಉಗ್ರರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ಗಮನಿಸಿದರೆ, ಅವರು ದೊಡ್ಡದೊಂದು ಯೋಜನೆ ರೂಪಿಸಿಕೊಂಡು ಬಂದಿದ್ದರು ಎನಿಸುತ್ತದೆ’ ಎಂದು ಹೇಳಿದ್ದಾರೆ. ದಾಳಿ ನಡೆದ ದಟ್ಟಾರಣ್ಯಕ್ಕೆ ತಲುಪಲು ಹಾಗೂ ಉತ್ತಮ ಕಣ್ಗಾವಲು, ಸೇನಾ ಬಲವರ್ಧನೆಗೆ ಸೇನೆಯು ಬಿಎಂಪಿಯಂತಹ ಬಲಿಷ್ಠ ವಾಹನ ಬಳಸಿದೆ ಎಂದು ಶ್ರೀವಾಸ್ತವ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next