Advertisement

ಜೆಎನ್‌ಯು ಹಾಸ್ಟೆಲ್‌ನಲ್ಲಿ ಮುಂಜಾನೆ ಭದ್ರತಾ ತಪಾಸಣೆ

12:50 PM Oct 19, 2017 | |

ಹೊಸದಿಲ್ಲಿ: ಪ್ರತಿಷ್ಠಿತ ಜವಹರಲಾಲ್‌ ನೆಹರು ವಿವಿ ಇದೀಗ ಮತ್ತೂಮ್ಮೆ ವಿವಾದಕ್ಕೊಳಗಾಗಿದೆ. ಮುಂಜಾನೆ ವೇಳೆ ಭದ್ರತಾ ಸಿಬಂದಿ ಜೆಎನ್‌ಯು ಹಾಸ್ಟೆಲ್‌ಗೆ ದಾಳಿ ಮಾಡಿ ಪರಿಶೋಧನೆ ನಡೆಸಿದ್ದು, ಇದು ವಿವಿ ಮತ್ತು ನಿರ್ದಿಷ್ಟವಾಗಿ ವಿದ್ಯಾರ್ಥಿನಿಯರನ್ನು ಅವಮಾನಿಸುವ ಪ್ರಯತ್ನ ಎಂದು ಟೀಕಿಸಲಾಗಿದೆ. 

Advertisement

ಉಪನ್ಯಾಸಕರೊಬ್ಬರ ನೇತೃತ್ವದಲ್ಲಿ ಭದ್ರತಾ ಸಿಬಂದಿ ತಂಡ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರ ಕೊಠಡಿಗೆ ಪ್ರವೇಶಿಸಿ ತಪಾಸಣೆ ನಡೆಸಿದೆ. ಈ ದಾಳಿಯ ಕುರಿತು ವರದಿ ಮಾಡಿರುವ ಕೆಲ ಮಾಧ್ಯಮಗಳು, ಹಲವು ವಿದ್ಯಾರ್ಥಿನಿಯರು ವಿದ್ಯಾರ್ಥಿಗಳ ಕೊಠಡಿಗಳಲ್ಲಿದ್ದರು ಎಂದಿವೆ. ಅ.5ರಂದು ಸುಮಾರು 20-25 ಭದ್ರತಾ ಸಿಬಂದಿ ಉಪನ್ಯಾಸಕ ಬುದ್ಧ ಸಿಂಗ್‌ ನೇತೃತ್ವದಲ್ಲಿ ಹಾಸ್ಟೆಲ್‌ ಕೊಠಡಿಗಳ ತಪಾಸಣೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next