Advertisement

ಮಾಜಿ ಸಿಎಂ ಫಾರೂಖ್ ನಿವಾಸದ ಮೇಲೆ ದಾಳಿ, CRPF ಗುಂಡಿಗೆ ವ್ಯಕ್ತಿ ಬಲಿ

06:28 PM Aug 04, 2018 | Team Udayavani |

ಜಮ್ಮು: ಜಮ್ಮು- ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾ ಅವರ ಬಿಗಿ ಭದ್ರತೆಯ ನಿವಾಸದೊಳಗೆ ಎಸ್ ಯುವಿ ಕಾರನ್ನು ಬಲವಂತವಾಗಿ ನುಗ್ಗಿಸಿ ಆತಂಕ ಸೃಷ್ಟಿಸಿದ್ದ ವ್ಯಕ್ತಿಯನ್ನು ಸಿಆರ್ ಪಿಎಫ್ ಯೋಧರು ಗುಂಡು ಹಾರಿಸಿ ಹತ್ಯೆಗೈದಿರುವ ಘಟನೆ ಶನಿವಾರ ನಡೆದಿದೆ.

Advertisement

ಈ ವ್ಯಕ್ತಿಯನ್ನು ಪೂಂಛ್ ಜಿಲ್ಲೆಯ ನಿವಾಸಿ ಮುರ್ ಫಾಸ್ ಎಂದು ಗುರುತಿಸಲಾಗಿದೆ. ಈತ ಮೊದಲು ವಿಐಪಿ ಮೈನ್ ಗೇಟ್ ನ ಭದ್ರತೆ ಉಲ್ಲಂಘಿಸಿ ಎಸ್ ಯುವಿ ಕಾರನ್ನು ಒಳನುಗ್ಗಿಸಿದ್ದ. ಈ ಸಂದರ್ಭದಲ್ಲಿ ಭದ್ರತಾ ಅಧಿಕಾರಿಗಳ ಜೊತೆ ಹೊಯ್ ಕೈ ನಡೆದಿತ್ತು. ತದನಂತರ ಬಲವಂತವಾಗಿ ಮನೆಯೊಳಗೆ ನುಗ್ಗಲು ಯತ್ನಿಸಿದ್ದ.

ಕೆಲವು ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆಯುತ್ತಿದ್ದಾಗಲೇ ಭದ್ರತಾ ಸಿಬ್ಬಂದಿಗಳು ಗುಂಡಿನ ದಾಳಿ ನಡೆಸಿ ಹತ್ಯೆಗೈದಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಫಾರೂಖ್ ಅಬ್ದುಲ್ಲಾ ಹಾಗೂ ಪುತ್ರ ಓಮರ್ ಅಬ್ದುಲ್ಲಾಗೆ ಝಡ್ ಪ್ಲಸ್ ಭದ್ರತೆ ನೀಡಲಾಗಿದೆ.

ನಾವು ಎಷ್ಟೇ ಎಚ್ಚರಿಕೆ ಕೊಟ್ಟರೂ ಈ ವ್ಯಕ್ತಿ ಕೇಳಲಿಲ್ಲ. ಆಗ ಗುಂಡು ಹಾರಿಸಲಾಯಿತು ಎಂದು ಸಿಆರ್ ಪಿಎಫ್ ಅಧಿಕಾರಿ ತಿಳಿಸಿದ್ದಾರೆ. ಆತ ಯಾವ ಉದ್ದೇಶಕ್ಕಾಗಿ ಬಂದಿದ್ದಾನೆಯೇ? ಆತನ ಹಿನ್ನೆಲೆ ಏನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಇನ್ಸ್ ಪೆಕ್ಟರ್ ಜನರ್ ಆಫ್ ಪೊಲೀಸ್ ಎಸ್ ಡಿ ಸಿಂಗ್ ಜಾಮ್ವಾಲ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next