Advertisement

ಅಮೆರಿಕ ಶ್ವೇತ ಭವನಕ್ಕೆ ಕಾರ್‌ ಬಾಂಬ್‌ ದಾಳಿ ಬೆದರಿಕೆ: ಹೈ ಅಲರ್ಟ್‌

01:08 PM Mar 19, 2017 | |

ನ್ಯೂಯಾರ್ಕ್‌: ಅಮೆರಿಕದ ವೈಟ್‌ಹೌಸ್‌ ಮೇಲೆ ವ್ಯಕ್ತಿಯೊಬ್ಬ ಬಾಂಬ್‌ ಇರುವ ಕಾರನ್ನು ನುಗ್ಗಿಸುವುದಾಗಿ ಹೇಳಿದ ಬಳಿಕ ಭದ್ರತೆಯನ್ನು ಇನ್ನಷ್ಟು ಬಿಗಿ ಗೊಳಿಸಲಾಗಿದೆ.

Advertisement

ಕಾರಿನಲ್ಲಿ ಬಾಂಬ್‌ ಇರುವ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಭದ್ರತೆಯನ್ನು ತಕ್ಷಣ ಇನ್ನಷ್ಟು ಬಿಗಿಗೊಳಿಸಿ  ಶ್ವೇತ ಭವನದ ಸುತ್ತ ಮುತ್ತ ಹೈ ಅಲರ್ಟ್‌ ಘೋಷಿಸಲಾಗಿದೆ. 

ದಾಳಿ ಬೆದರಿಕೆಗೆ ಸಂಬಂಧಿಸಿ ಓರ್ವನನ್ನು ವಶಕ್ಕೆ ಪಡೆಯಲಾಗಿದ್ದು, ಕಾರೊಂದನ್ನು ಜಪ್ತಿ ಮಾಡಿರುವ ಬಗ್ಗೆ ವರದಿಯಾಗಿದೆ.

ಶ್ವೇತ ಭವನದ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ಸಂಚಾರವನ್ನೂ ನಿರ್ಬಂಧಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next