Advertisement
ಮಂಗಳವಾರ ಸಂಜೆ ಶ್ರೀ ಶಿವಯೋಗಿ ಮಂದಿರದಲ್ಲಿ ಶರಣ ಸಂಗಮ ಮತ್ತು ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಎಲ್ಲ ಧರ್ಮಯರಿಗೆ ಭಾರತವೇ ಶ್ರೇಷ್ಠ ಧರ್ಮ. ಸಂವಿಧಾನವೇ ಶ್ರೇಷ್ಠಾತಿಶ್ರೇಷ್ಠ ಗ್ರಂಥ ಎಂದರು. ಈಗ ಎಲ್ಲರೂ ನಮ್ಮ ಧರ್ಮವೇ ಶ್ರೇಷ್ಠ ಎಂದು ಸಂವಿಧಾನವನ್ನೇ ಮರೆಯುತ್ತಿದ್ದೇವೆ.
Related Articles
Advertisement
ಚಿತ್ರದುರ್ಗ ಮುರುಘಾ ಮಠದ ಡಾ| ಶಿವಮೂರ್ತಿ ಮುರುಘಾ ಶರಣರ ಅಧ್ಯಕ್ಷತೆಯಲ್ಲಿ ಅಸ್ತಿತ್ವಕ್ಕೆ ಬಂದಿರುವ ಧರ್ಮ ಸಂಸತ್ತು ಉದ್ಘಾಟನೆಗೊಂಡಿದ್ದೇ ಅಂಬೇಡ್ಕರ್‌ರವರ ಸಮಾಧಿ ಇರುವ ಮುಂಬೈನ ದಾದರ್‌ನಲ್ಲಿ ಎಂಬುದು ಸಂತಸದ ವಿಚಾರ. ಸಮಾನತೆ, ಸಾಮಾಜಿಕ ನ್ಯಾಯ, ವೈಚಾರಿಕ ಪ್ರಜ್ಞೆ ಜಾಗೃತಿ, ಸಮ ಸಮಾಜ ನಿರ್ಮಾಣದ ಮಹತ್ತರ ಉದ್ದೇಶದಿಂದ ಧರ್ಮ ಸಂಸತ್ತು ಅಸ್ತಿತ್ವಕ್ಕೆ ಬಂದಿದೆ ಎಂದು ತಿಳಿಸಿದರು.
ಭಾರತೀಯ ಸಂವಿಧಾನ ಮತ್ತು ಧರ್ಮ ನಿರಪೇಕ್ಷೆ… ವಿಷಯ ಕುರಿತು ಉಪನ್ಯಾಸ ನೀಡಿದ ವಕೀಲ ಎಲ್. ಎಚ್. ಅರುಣ್‌ಕುಮಾರ್ ಮಾತನಾಡಿ, ಅಂಬೇಡ್ಕರ್ ರವರು ವಿಶ್ವದ ಅತ್ಯುತ್ತಮ ಸಂದೇಶ ಅಭ್ಯಾಸ ಮಾಡಿ ಈ ದೇಶದ ನೆಲಕ್ಕೆ ಹೊಂದಿಕೆಯಾಗುವಂಥಹ ಸಂವಿಧಾನವನ್ನು ಕಾಣಿಕೆಯಾಗಿ ನೀಡಿದ್ದಾರೆ.
ಆಂಗ್ಲ ಭಾಷೆಯಲ್ಲಿ 1,17,369 ಪುಟ ಹೊಂದಿದೆ. 100ಕ್ಕೂ ಹೆಚ್ಚು ಬಾರಿ ತಿದ್ದುಪಡಿ ಕಂಡಿದೆ. ಭಾರತದ ಅಖಂಡತೆ ಮತ್ತು ಸಹಬಾಳ್ವೆಯನ್ನು ಎತ್ತಿ ಹಿಡಿದಿರುವಂಥಹ ಮಹಾನ್ ಧರ್ಮಗ್ರಂಥ ಎಂದರೆ ಸಂವಿಧಾನ ಎಂದು ತಿಳಿಸಿದರು. ಸಂವಿಧಾನ ಪ್ರಭುತ್ವ ಮತ್ತು ಧರ್ಮದ ನಡುವೆ ಸಣ್ಣದಾದ ಲಕ್ಷ್ಮಣರೇಖೆ ಹಾಕಿದೆ.
ಆದರೂ, ಆ ಲಕ್ಷ್ಮಣರೇಖೆ ದಾಟಿ ಪ್ರಭುತ್ವ ಧರ್ಮದ ಅಂಗಳದಲ್ಲಿ, ಧರ್ಮದ ಅಂಗಳದಲ್ಲಿ ಪ್ರಭುತ್ವ ಇರುವುದು ಕಂಡು ಬರುತ್ತದೆ. ಸಂವಿಧಾನ ಆಶಯದ ವಿರುದ್ಧ ನಡೆ ಸಾಮಾನ್ಯ ಎನ್ನುವಂತಾಗಿದೆ. ಧರ್ಮ, ಭಾಷೆ, ವರ್ಗ, ಜಾತಿಯ ಹೆಸರಲ್ಲಿ ಆಕ್ರಮಣ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಧಾರವಾಡದ ನಗೆ ಭಾಷಣಕಾರ ಬಿ.ಜಿ. ಪಾಟೀಲ್ ಇದ್ದರು.