ಹಳೆಯಂಗಡಿ : ರಾಜ್ಯ ಸರಕಾರ ಉತ್ತಮ ಜನಪರ ಆಡಳಿತ ನೀಡಿರುವುದರಿಂದ ಮುಂದಿನ ಚುನಾವಣೆ ಯಲ್ಲೂ ಸ್ಪಷ್ಟ ಬಹುಮತದಿಂದ ಆಡಳಿತಕ್ಕೆ ಮರಳಲಿದೆ. ವಿಪಕ್ಷದ ಯಾವುದೇ ಕುತಂತ್ರ ನಡೆಯದು ಎಂದು ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಹಳೆಯಂಗಡಿಯ ಇಂದಿರಾ ನಗರ ಪರಿಸರದಲ್ಲಿ ಕಾಂಗ್ರೆಸ್ ಪಕ್ಷದ ಮನೆ ಮನೆಗೆ ಕಾಂಗ್ರೆಸ್ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪಕ್ಷದ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಸರಕಾರದ ಸಾಧನೆ ಮತ್ತು ಯೋಜನೆಗಳನ್ನು ತಲುಪಿಸುವ ಜವಾಬ್ದಾರಿ ನಿರ್ವಹಿಸಬೇಕು. ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಬಗ್ಗೆಯೂ ಮಾಹಿತಿ ನೀಡಬೇಕು ಎಂದು ಅವರು ಹೇಳಿದರು.
ಕೆ.ಪಿ.ಸಿ.ಸಿ. ಸದಸ್ಯ ಎಚ್. ವಸಂತ ಬೆರ್ನಾಡ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಮಹಿಳಾ ಬ್ಲಾಕ್ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ, ಕೋಶಾಧಿಕಾರಿ ನಂದಾ ಪಾಯಸ್, ಯುವ ಕಾಂಗ್ರೆಸ್ ಅಧ್ಯಕ್ಷ ಹಕೀಂ ಮೂಲ್ಕಿ, ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಜಲಜಾ, ಸದಸ್ಯರಾದ ಅಬ್ದುಲ್ ಖಾದರ್, ಅಬ್ದುಲ್ ಅಝೀಝ್, ಎಚ್. ಹಮೀದ್, ಅಬ್ದುಲ್ ಬಶೀರ್, ಚಿತ್ರಾ ಸುರೇಶ್, ಶರ್ಮಿಳಾ ಎಸ್. ಕೋಟ್ಯಾನ್, ಪ್ರವೀಣ್ ಸಾಲ್ಯಾನ್, ಕರಾವಳಿ ಪ್ರಾಧಿಕಾರದ ನಿರ್ದೇಶಕ ಸಾಹುಲ್ ಹಮೀದ್ ಕದಿಕೆ, ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಚಂದ್ರಶೇಖರ ಕದಿಕೆ, ಮೂಲ್ಕಿ ನಗರ ಪಂಚಾಯತ್‌ನ
ಸದಸ್ಯರಾದ ಪುತ್ತು ಬಾವಾ, ಅಶೋಕ್ ಪೂಜಾರ್, ಮಾಜಿ ಜಿ.ಪಂ. ಅಧ್ಯಕ್ಷೆ ಸುಗಂಧಿ ಕೊಂಡಾಣ, ಲತಾ ಕಲ್ಲಾಪು, ದಿನೇಶ್ ಸುವರ್ಣ, ರಾಜು ಕುಂದರ್, ಚಂದ್ರಶೇಖರ ಕಿನ್ನಿಗೋಳಿ, ಧನ್‌ರಾಜ್ ಕೋಟ್ಯಾನ್ ಸಸಿಹಿತ್ಲು, ಸವಿತಾ ಶರತ್ ಬೆಳ್ಳಾಯರು ಮತ್ತಿತರರಿದ್ದರು.
ಹಳೆಯಂಗಡಿ ಗ್ರಾಮ ಸಮಿತಿ ಅಧ್ಯಕ್ಷ ಮನ್ಸೂರ್ ಸಾಗ್ ಸ್ವಾಗತಿಸಿದರು.ಪ್ರಕಾಶ್ ಆಚಾರ್ಯ ಕಿನ್ನಿಗೋಳಿ ರೂಪಿಸಿದರು.