Advertisement
ತೀರ್ಪಿನ ಜತೆಗೆ ಸಮಾಜದ ಓರೆ ಕೋರೆಯನ್ನು ತಿದ್ದುವ ಪ್ರಾಮಾಣಿಕ ಪ್ರಯತ್ನ ನ್ಯಾಯ ಪೀಠದಲ್ಲಿದ್ದ ನ್ಯಾಯಮೂರ್ತಿಗಳ ಮಾತುಗಳಲ್ಲಿ ಎದ್ದು ಕಾಣುತ್ತಿತ್ತು. ಸಲಿಂಗಿಗಳ ಭವಿಷ್ಯವನ್ನು ಸುಭದ್ರಗೊಳಿಸುವ ಬಗ್ಗೆ ಮಾತನಾಡಿದ ನ್ಯಾ. ಚಂದ್ರಚೂಡ್, “ಯಾರ್ಯಾರ ಜತೆಯಲ್ಲಿ ಲೈಂಗಿಕ ಸಂಬಂಧ ಹೊಂದಬೇಕೆಂಬುದು ಆಯಾ ವ್ಯಕ್ತಿಗಳ ತೀರಾ ಖಾಸಗಿ ವಿಚಾರ. ಇದನ್ನು ನಿರ್ಧರಿಸುವ ಹಕ್ಕು ಸಮಾಜಕ್ಕಿಲ್ಲ. ಸಮಾಜದಲ್ಲಿ ಒಬ್ಬನೇ ಒಬ್ಬ ಸಲಿಂಗಿ ಇದ್ದರೂ ಅವನ ಮೂಲಭೂತ ಹಕ್ಕುಗಳನ್ನು ಸಾಮಾಜಿಕ ಕಟ್ಟುಪಾಡುಗಳ ಹೆಸರಿನಲ್ಲಿ ಕಿತ್ತುಕೊಳ್ಳಲು ನ್ಯಾಯಪೀಠ ಅವಕಾಶ ನೀಡುವುದಿಲ್ಲ’ ಎಂದರು.
ಜರ್ಮನಿಯ ಚಿಂತಕನ ಮಾತು ಸಲಿಂಗಿಗಳ ವಿಚಾರದಲ್ಲಿ ಹೇಳಬೇಕಿದೆ. ಸಲಿಂಗಿಗಳ ಬಗ್ಗೆ ಸಮಾಜದಲ್ಲಿ ಇರುವ ಪೂರ್ವ ಗ್ರಹ ಚಿಂತನೆಗಳಿಗೆ ಇತಿಶ್ರೀ ಹಾಡಬೇಕಿದೆ. ಪ್ರತಿಯೊಂದು ಮೋಡದಲ್ಲೂ ಕಾಮನ ಬಿಲ್ಲನ್ನು ಕಾಣುವಂಥ ದೃಷ್ಟಿ ಕೋನ ತರಬೇಕಿದೆ. ಈ ನಿಟ್ಟಿನಲ್ಲಿ ಎಲ್ಲಾ ನಾಗರಿಕರನ್ನು ಸಬಲೀಕರಣಗೊಳಿಸಬೇಕಿದೆ” ಎಂದು ಆಶಿಸಿದರು. ಇನ್ನು, ನ್ಯಾ. ನಾರಿಮನ್ ಅವರು, “ನ್ಯಾಯ ಪೀಠ ಇಂದು ನೀಡಿರುವ ತೀರ್ಪಿನ ಬಗ್ಗೆ ಸರಕಾರ ಹಾಗೂ ಮಾಧ್ಯಮಗಳು ವ್ಯಾಪಕವಾಗಿ ಪ್ರಚಾರ ಮಾಡಬೇಕು. ಈ ಮೂಲಕ ಸಾರ್ವಜನಿಕರಲ್ಲಿ ಸಲಿಂಗಗಳಿಗೂ ಎಲ್ಲರಂತೆ ಬದುಕುವ ಹಕ್ಕಿದೆ ಎಂಬುದು ಎಲ್ಲರಿಗೂ ಮನಗಾಣುವಂತೆ ಮಾಡಬೇಕು” ಎಂದರು. ಇನ್ನು, ನ್ಯಾಯಪೀಠದಲ್ಲಿದ್ದ ಮತ್ತೂಬ್ಬ ನ್ಯಾಯ ಮೂರ್ತಿ ಖಾನ್ವಿಳ್ಕರ್, “”ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು ಸಾವಿಗೆ ಸಮಾನ. ಹಾಗಾಗಿ, ಸಲಿಂಗಿಗಳಿಗೆ ಅವರಿಗೆ ಸಿಗಬೇಕಾದ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಕೊಡಬೇಕಿದೆ” ಎಂದರು.
Related Articles
ಸಲಿಂಗ ಕಾಮಕ್ಕೆ ಕಾನೂನು ಮಾನ್ಯತೆ ನೀಡಿದ ಸುಪ್ರೀಂ ಕೋರ್ಟ್ ತೀರ್ಪನ್ನು ವಿಶ್ವ ಸಂಸ್ಥೆ ಸ್ವಾಗತಿಸಿದೆ. ಎಲ್‌ಜಿಬಿಟಿಐ ಸಮುದಾಯಕ್ಕೆ ಅವರ ಮೂಲಭೂತ ಹಕ್ಕುಗಳನ್ನು ನೀಡುವಲ್ಲಿ ಇದು ಮೊದಲ ಹೆಜ್ಜೆ ಎಂದು ವಿಶ್ವ ಸಂಸ್ಥೆ ತಿಳಿಸಿದೆ.
Advertisement
ಈ ಮೊದಲೇನಿತ್ತು? 1864ರಲ್ಲಿ ರೂಪುಗೊಂಡಿದ್ದ ಐಸಿಪಿ ಸೆಕ್ಷನ್ 377ರಲ್ಲಿ ಸಲಿಂಗ ಕಾಮವು ಶಿಕ್ಷಾರ್ಹ ಅಪರಾಧ ಎಂದು ಉಲ್ಲೇಖೀಸಲಾಗಿತ್ತ ಲ್ಲದೆ, ಈ ಅಪರಾಧ ಎಸಗಿದವರಿಗೆ ಗರಿಷ್ಠ 10 ವರ್ಷಗಳ ಜೈಲು ವಾಸ ವಿಧಿಸುವ ಅವಕಾಶವಿತ್ತು. 26ನೇ ದೇಶವಾಗಿ ಭಾರತ
ಸಲಿಂಗಿಗಳಿಗೆ ಕಾನೂನು ಮಾನ್ಯತೆ ನೀಡುವ ಮೂಲಕ ಭಾರತ, ಈ ಐತಿಹಾಸಿಕ ತೀರ್ಮಾನ ಕೈಗೊಂಡಿರುವ ವಿಶ್ವದ 26ನೇ ದೇಶವಾಗಿ ಹೊರಹೊಮ್ಮಿದೆ. ವ್ಯಾಪಕ ಸ್ವಾಗತ: ಕೇರಳದ ಸಲಿಂಗಿ ಸಂಘವು ಸೆ. 6ರ ಭಾರತದ 2ನೇ ಸ್ವಾತಂತ್ರ್ಯ ದಿನವೆಂದು ಘೋಷಿಸಿದ್ದರೆ, ದಿಲ್ಲಿಯ ಕಾರ್ಯಕರ್ತರು, ಎಲ್‌ಜಿಬಿಟಿಕ್ಯು ಇನ್ನು ಕತ್ತಲೆಯಲ್ಲಿ ಬದುಕುವ ಅವಶ್ಯಕತೆಯಿಲ್ಲ ಎಂದಿದ್ದಾರೆ. ಮನ ಮುಟ್ಟುವಂತಿದೆ
ಕಾಂಗ್ರೆಸ್ ತೀರ್ಪಿನ ಬಗ್ಗೆ ಟ್ವೀಟ್ ಮಾಡಿದ್ದು “ಶತಮಾನಗಳ ವಸಾಹತು ಶಾಹಿ ಸಂಸ್ಕೃತಿಯೊಂದರಿಂದ ರೂಪುಗೊಂಡಿದ್ದ ಕಾನೂನೊಂದಕ್ಕೆ ತಿದ್ದು ಪಡಿ ತಂದಿದೆ. ಇದರಿಂದ ಸಲಿಂಗಿಗಳ ಹಕ್ಕುಗಳ ರಕ್ಷಣೆಯಾಗಿರುವುದರಲ್ಲದೆ, ಉದಾರವಾದ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದೆ’ ಎಂದು ಬರೆದುಕೊಂಡಿದೆ ಪ್ರಕರಣದ ಹಿನ್ನೋಟ
2001: ಸಮ್ಮತಿಯ ಸಲಿಂಗಕ್ಕೆ ಕಾನೂನು ಮಾನ್ಯತೆ ನೀಡುವಂತೆ ನಾಝ್ ಫೌಂಡೇ ಷನ್‌ನಿಂದ ಅರ್ಜಿ
ಸೆ. 24, 2004: ನಾಝ್ ಸಂಸ್ಥೆಯ ಅರ್ಜಿ ತಿರಸ್ಕರಿಸಿದ ಹೈಕೋರ್ಟ್
ಡಿಸೆಂಬರ್, 2004: ಸಲಿಂಗ ಕಾಮ ಕಾರ್ಯಕರ್ತರಿಂದ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ.
ಏ. 3, 2006: ಪ್ರಕರಣದ ಮರು ವಿಚಾರಣೆಗೆ ದಿಲ್ಲಿ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ.
ಅ. 4, 2006: ಮಾನ್ಯತೆ ನೀಡುವುದರ ವಿರುದ್ಧ ಬಿಜೆಪಿ ನಾಯಕ ಬಿ.ಪಿ. ಸಿಂಘಲ್ ದಿಲ್ಲಿ ಹೈಕೋರ್ಟ್‌ಗೆ ಅರ್ಜಿ
ಜು. 2, 2009: ಸಲಿಂಗ ಕಾಮ ಅಪರಾಧವಲ್ಲ ಎಂದು ತೀರ್ಪು ನೀಡಿದ ದಿಲ್ಲಿ ಹೈಕೋರ್ಟ್.
ಡಿ. 11, 2013: 2009ರಲ್ಲಿ ದಿಲ್ಲಿ ಹೈಕೋರ್ಟ್ ಆದೇಶ ಸುಪ್ರೀಂನಿಂದ ರದ್ದು
ಏ. 3, 2013: ಕ್ಯುರೇ ಟಿವ್ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ.
ಫೆ. 2, 2016: ಕ್ಯುರೇಟಿವ್ ಅರ್ಜಿಗಳ ವಿಚಾರಣೆ ಐವರು ನ್ಯಾಯ ಮೂರ್ತಿಗಳ ಪೀಠಕ್ಕೆ ಹಸ್ತಾಂತರ.
ಆ. 24, 2017: ಲೈಂಗಿಕ ಬಯಕೆಗಳು ಆಯಾ ವ್ಯಕ್ತಿಯ ಖಾಸಗಿತನದ ವಿಚಾರ ಹಾಗೂ ಇದೊಂದು ಮೂಲ ಭೂತ ಹಕ್ಕು ಎಂದ ಸುಪ್ರೀಂ ಕೋರ್ಟ್.
ಜ. 8, 2018: 2013ರಲ್ಲಿ ನೀಡಿದ್ದ ತೀರ್ಪನ್ನು ಪುನರ್ ಪರಿಶೀಲನೆ ಮಾಡಲು ಸುಪ್ರೀಂ ಕೋರ್ಟ್ ನಿರ್ಧಾರ.
ಜು. 11, 2018: ಪ್ರಕರಣದ ತೀರ್ಪು ಸರ್ವೋತ್ಛ ನ್ಯಾಯಾಲಯದ ಮರ್ಜಿಗೆ ಬಿಟ್ಟ ವಿಚಾರವೆಂದ ಕೇಂದ್ರ ಸರಕಾರ.
ಜು. 17, 2018: ವಿಚಾರಣೆ ಅಂತ್ಯಗೊಳಿಸಿ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್ ನ್ಯಾಯ ಪೀಠ.
ಸೆ. 6, 2018: ಐಪಿಸಿ 377 ಸೆಕ್ಷ ನ್‌ನ ಕೆಲವು ಅಂಶಗಳನ್ನು ರದ್ದುಗೊಳಿಸಿ, ಸಲಿಂಗ ಕಾಮಕ್ಕೆ ಕಾನೂನು ಮಾನ್ಯತೆ ನೀಡಿದ ಸುಪ್ರೀಂ ಕೋರ್ಟ್. ಲವ್ ಈಸ್ ಲವ್. ನಮ್ಮ ದೇಶ ದಲ್ಲಿ ಈದಿನ ಮಹತ್ವದ ದಿನ. ಇಂಥದ್ದೊಂದು ವಿಶೇಷ ತೀರ್ಪಿಗಾಗಿ ಹೋರಾಡಿದ ಎಲ್ಲರಿಗೂ ಧನ್ಯ ವಾದ.
ಆಲಿಯಾ ಭಟ್, ನಟಿ ಈ ತೀರ್ಪು ನಾಗರಿಕರಿಗೆ ಸಿಕ್ಕಿದ ಸ್ವಾತಂತ್ರ್ಯ. ಕೇವಲ ಒಂದು ವರ್ಗಕ್ಕೆ ಅಲ್ಲ. ಹಿಂದಿನ ಸಂದರ್ಭಗಳಲ್ಲಿ ನಾನು ಹೇಳಿದ್ದ ಮಾತುಗಳನ್ನು ಪುಷ್ಟೀಕರಿಸಿದಂತಿದೆ.
ಶಶಿ ತರೂರ್, ಕಾಂಗ್ರೆಸ್ ನಾಯಕ ಐಪಿಸಿ ಸೆಕ್ಷನ್ 377ರ ಕಿರಿಕಿರಿ ಅನುಭವಿಸಿದವರಿಗೆ ಅದರಿಂದ ಇಂದು ಮುಕ್ತಿ ಸಿಕ್ಕಿದೆ.
ಅಕ್ಷಯ್ ಕುಮಾರ್, ನಟ ತೀರ್ಪಿನಿಂದ ಉಸಿರುಗಟ್ಟುತ್ತಿರುವವರಿಗೆ ಆಮ್ಲಜನಕ ನೀಡಿದಂತಾಗಿದೆ. ಇದೊಂದು ಐತಿಹಾಸಿಕ ತೀರ್ಪು. ಎಲ್ಲರಿಗೂ ಸಮಾನ ಹಕ್ಕು ನೀಡಿದ್ದು ಹೆಮ್ಮೆಯೆನಿಸುತ್ತಿದೆ.
ಕರಣ್ ಜೋಹರ್, ನಿರ್ದೇಶಕ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹವಾದರೂ, ನಿಸರ್ಗದತ್ತವಾಗಿ ಮೂಡುವ ಸಂಬಂಧಗಳಿಗಷ್ಟೇ ಈ ಸಮಾಜ ಮಾನ್ಯತೆ ನೀಡುತ್ತದೆ. ಈ ಬಗ್ಗೆ ಮತ್ತಷ್ಟು ಚರ್ಚೆಗಳಾಗಬೇಕಿದೆ
ಅರುಣ್ ಕುಮಾರ್, ಆರ್‌ಎಸ್‌ಎಸ್ ಮುಖಂಡ