ಬೀಜಿಂಗ್: ಮಾರಣಾಂತಿಕ ಕೋವಿಡ್ 19 ವೈರಸ್ ತವರು ಎಂದೇ ಕುಖ್ಯಾತಿ ಪಡೆದ ಚೀನಾದಲ್ಲಿ ಈ ಮಹಾಮಾರಿಗೆ ಸಾವನ್ನಪ್ಪಿದ್ದವರ ಸಂಖ್ಯೆ 3000, 4000 ಎಂದು ಸರ್ಕಾರ ಹೇಳಿತ್ತು. ಆದರೆ ಇದು ಸತ್ಯವಾದ ಅಂಕಿಅಂಶ ಅಲ್ಲ ಎಂಬುದು ಚೀನಾದ ಸ್ಥಳೀಯರ ವಾದವಾಗಿದೆ ಎಂದು ದ ಸನ್ ಪತ್ರಿಕೆ ವರದಿ ಮಾಡಿದೆ.
ಚೀನಾದ ವುಹಾನ್ ನಲ್ಲಿ ಮಾರಕ ಕೋವಿಡ್ 19 ವೈರಸ್ ಗೆ ಬಲಿಯಾದವರ ಸಂಖ್ಯೆ ಬರೋಬ್ಬರಿ 42 ಸಾವಿರ ಎಂದು ಅಂದಾಜಿಸಲಾಗಿದೆ. ಸ್ಥಳೀಯರ ವಾದ ಸರಣಿ ಹೀಗಿದೆ…ದಿನಂಪ್ರತಿ 500 ಯೂರಾನ್ಸ್ (ಅಂತ್ಯ ಸಂಸ್ಕಾರ ನೆರವೇರಿಸಲು ನೀಡುವ ಬೂದಿ) ಅನ್ನು ಸರಬರಾಜು ಮಾಡಲಾಗಿತ್ತು. ಹುಬೈ ಪ್ರಾಂತ್ಯದಲ್ಲಿ ಏಳು ದಿನಗಳ ಕಾಲವೂ 500 ಯೂರಾನ್ಸ್ ಹಂಚಲಾಗಿತ್ತು ಎಂದು ತಿಳಿಸಿದ್ದಾರೆ.
ವರದಿಯ ಪ್ರಕಾರ, ಸುಮಾರು 3,500 ಜನರಿಗೆ ಪ್ರತಿದಿನ ಬೂದಿಯ ಮಡಕೆಯನ್ನು ಸಂತ್ರಸ್ತರ ಕುಟುಂಬಕ್ಕೆ ಸರ್ಕಾರ ನೀಡಿತ್ತು. ಇದರ ಅರ್ಥ 42ಸಾವಿರ ಯೂರಾನ್ಸ್ ಹನ್ನೆರಡು ದಿನಗಳಲ್ಲಿ ವಿತರಿಸಲಾಗಿದೆ ಎಂದು ದ ಮೇಲ್ ಆನ್ ಲೈನ್ ವರದಿ ವಿವರಿಸಿದೆ.
ವುಹಾನ್ ನಲ್ಲಿ ವಾಸವಾಗಿರುವವರು ಹೇಳುವ ಪ್ರಕಾರ ಕೋವಿಡ್ 19 ಅತೀ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಆದರೆ ಜನರು ಭಯಭೀತರಾಗುತ್ತಾರೆ ಎಂದು ಸತ್ಯಾಂಶ ಬಿಚ್ಚಿಟ್ಟಿಲ್ಲ ಎಂದು ದೂರಿದ್ದಾರೆ. ಸರ್ಕಾರ ನಿಧಾನಕ್ಕೆ ನಿಜವಾದ ಅಂಕಿಅಂಶವನ್ನು ಬಿಡುಗಡೆ ಮಾಡಬಹುದು. ನಂತರ ಜನರು ಕೂಡಾ ಸತ್ಯವನ್ನು ಒಪ್ಪಿಕೊಳ್ಳುತ್ತಾರೆ ಎಂದು ವ್ಯಕ್ತಿಯೊಬ್ಬರು ಪತ್ರಿಕೆ ತಿಳಿಸಿದ್ದಾರೆ.
ಹುಬೈ ಪ್ರಾಂತ್ಯದಲ್ಲಿ ಕಳೆದ ಒಂದು ತಿಂಗಳಲ್ಲಿ 28 ಸಾವಿರ ಜನರ ಶವ ಸಂಸ್ಕಾರ ನಡೆಸಲಾಗಿದೆ ಎಂದು ಒಂದು ಮೂಲ ತಿಳಿಸಿದೆ ಎಂದು ವರದಿ ವಿವರಿಸಿದೆ. ಕೋವಿಡ್ 19 ವೈರಸ್ ದಾಳಿಗೆ ತುತ್ತಾಗಿದ್ದ ವುಹಾನ್ ನಿಂದ ಸಾವಿರಾರು ಯೂರಾನ್ಸ್ ಅನ್ನು ಚೀನಾ ಸತ್ಯ ಹೊರ ಜಗತ್ತಿಗೆ ತಿಳಿಯಲಿದೆ ಎಂಬ ಭಯದಿಂದ ರಹಸ್ಯವಾಗಿ ಸಾಗಿಸಿರುವುದಾಗಿ ಸನ್ ಆನ್ ಲೈನ್ ಈ ಹಿಂದೆ ವರದಿಯೊಂದನ್ನು ಪ್ರಕಟಿಸಿತ್ತು.
ಚೀನಾ ಮೂಲದ ಕೈಕ್ಸಿನ್ ಮಾಧ್ಯಮದ ವರದಿಯಂತೆ ಅಂತ್ಯಸಂಸ್ಕಾರ ನಡೆಸುವ ಮನೆಗಳಿಗೆ ಲಾರಿಗಳಲ್ಲಿ ಯೂರಾನ್ಸ್ ಅನ್ನು ತುಂಬಿ ಕಳುಹಿಸುತ್ತಿರುವ ಫೋಟೊವನ್ನು ಪ್ರಕಟಿಸಿರುವುದಾಗಿ ಹೇಳಿದೆ. ಎರಡು ದಿನಗಳಲ್ಲಿ ,2500 ಯೂರಾನ್ಸ್ ಎಂದು ವರದಿ ಮಾಡಿದ್ದು, ಮತ್ತೊಂದು ಫೋಟೋದಲ್ಲಿ ರಹಸ್ಯವಾಗಿ 3,500 ಯೂರಾನ್ಸ್ ತುಂಬಿಸಿರುವು ಫೋಟೊವನ್ನು ಪ್ರಕಟಿಸಿತ್ತು ಎಂದು ವಿವರಿಸಿದೆ.
ಮಾರಕ ವೈರಸ್ ನಿಂದ ವುಹಾನ್ ಮತ್ತು ಹುಬೈ ಪ್ರಾಂತ್ಯ ಅಕ್ಷರಶಃ ನಲುಗಿ ಹೋಗಿದ್ದವು. ಆದರೆ ಹೊರಗೆ ಜಗತ್ತಿಗೆ ಭಯಾನಕ ವಿವರಗಳು ಬಯಲಾಗಿಲ್ಲವಾಗಿತ್ತು. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಮಾಧ್ಯಮಗಳಿಗೆ, ಸತ್ಯ ಹೇಳುವ ವೈದ್ಯರಿಗೆ ಎಲ್ಲರಿಗೂ ಚೀನಾ ಸರ್ಕಾರ ನಿರ್ಬಂಧ ವಿಧಿಸಿಬಿಟ್ಟಿತ್ತು.