Advertisement

ಕಾರ್ಯದರ್ಶಿಯ ಬೆರಳು ಕಚ್ಚಿದ ಕಾರ್ಯಕರ್ತ!

11:13 AM Nov 11, 2017 | |

ಬೆಂಗಳೂರು: ಕುಮಾರಪಾರ್ಕ್‌ನ ಜೆಡಿಯು ಕಚೇರಿಯಲ್ಲಿ ಶುಕ್ರವಾರ ನಡೆದ ಟಿಪ್ಪುಜಯಂತಿ ಆಚರಣೆ ವಿಚಾರವಾಗಿ ಪಕ್ಷದ ಕಾರ್ಯಕರ್ತರಿಬ್ಬರು ಪರಸ್ಪರ ಕೈ ಕೈ ಮಿಲಾಯಿಸಿಕೊಂಡಿದ್ದು, ಕಾರ್ಯ  ಕರ್ತನೊಬ್ಬ ನಗರ ಪ್ರಧಾನ ಕಾರ್ಯದರ್ಶಿ ವಿ. ನಾಗೇಶ್‌ ಕೈ ಬೆರಳು ಕಚ್ಚಿ ಗಾಯಗೊಳಿಸಿದ್ದಾನೆ. 

Advertisement

ಶುಕ್ರವಾರ ಬೆಳಗ್ಗೆ 11.45ರ ಸುಮಾರಿಗೆ ಕಚೇರಿಗೆ ಆಗಮಿಸಿದ ಪಕ್ಷದ ಕಾರ್ಯಕರ್ತ ಗೋವಿಂದರಾಜು ಎಂಬಾತ ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಘೋಷಣೆ ಕೂಗಿ ಟಿಪ್ಪು ಮತಾಂಧ, ಹಿಂದೂಗಳನ್ನು ಕೊಲೆಗೈದಿದ್ದಾನೆ ಆತನ ಜಯಂತಿ ಆಚರಣೆ ನಡೆಸುವುದು ಸರಿಯಲ್ಲ ಎಂದು ಆಕ್ಷೇಪವ್ಯಕ್ತಪಡಿಸಿದ.

ಈ ವೇಳೆ ನಾಗೇಶ್‌ ಸೇರಿದಂತೆ ಮತ್ತಿತರು, ಗೋವಿಂದರಾಜು ಅವರನ್ನು ನಿನಗೆ ಇಷ್ಟವಿಲ್ಲದಿದ್ದರೆ ಹೊರಟು ಹೋಗು ಎಂದಿದ್ದಾರೆ. ಇದರಿಂದ ಕೆರಳಿದ ಗೋವಿಂದರಾಜು, ಪಕ್ಷದ ಅಧ್ಯಕ್ಷ ಎಂ.ಪಿ ನಾಡಗೌಡ ಹಾಗೂ ನೀವೆಲ್ಲಾ ಸಿಎಂ ಸಿದ್ದರಾಮಯ್ಯನವರ ಚೇಲಾಗಳು.

ಅದಕ್ಕಾಗಿಯೇ ಟಿಪ್ಪು ಜಯಂತಿ ಆಚರಿಸುತ್ತಿದ್ದೀರಿ ಎಂದು ಅವಾಚ್ಯಶಬ್ದಗಳಿಂದ ನಿಂದಿಸಿ ಟಿಪ್ಪು ಸುಲ್ತಾನ್‌ ಪೋಟೋ ಬಿಸಾಡಲು ಮುಂದಾದ. ಈ ವೇಳೆ ನಾಗೇಶ್‌ ಹಾಗೂ ಗೋವಿಂದರಾಜು ನಡುವೆ ಪರಸ್ಪರ ತಳ್ಳಾಟ ನೂಕಾಟ ನಡೆದಿದ್ದು, ಕೈ ಕೈ ಮಿಲಾಯಿಸಿಕೊಂಡಿದ್ದು, ಆಕ್ರೋಶಗೊಂಡ ಗೋವಿಂದರಾಜು, ನಾಗೇಶ್‌ ಬಲಗೈ ಹೆಬ್ಬೆರಳನ್ನು ಜೋರಾಗಿ ಕಚ್ಚಿದ್ದಾನೆ. 

Advertisement

Udayavani is now on Telegram. Click here to join our channel and stay updated with the latest news.

Next