Advertisement

ಸೆಕೆಂಡ್‌ಹ್ಯಾಂಡ್‌ ವಸ್ತುಗಳನ್ನು ಕಡಿಮೆಗೆ ಮಾಡಿದರೆ ಇಲ್ಲ ಜಿಎಸ್ಟಿ

03:40 AM Jul 16, 2017 | Team Udayavani |

ಹೊಸದಿಲ್ಲಿ: ಸೆಕೆಂಡ್‌ ಹ್ಯಾಂಡ್‌ ಸರಕುಗಳಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸ ಲಾಗುತ್ತದೆ ಎಂಬ ವದಂತಿಗಳಿಗೆ ಕೇಂದ್ರ ಸರಕಾರ ಶನಿವಾರ ಸ್ಪಷ್ಟನೆ ನೀಡಿದೆ. ಅವುಗಳನ್ನು ನಿಗದಿತ ದರಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡಿದರೆ ಅದಕ್ಕೆ ತೆರಿಗೆ ವಿಧಿಸಲಾಗು ವುದಿಲ್ಲ ಎಂದು ವಿತ್ತ ಇಲಾಖೆ ಹೇಳಿದೆ.  

Advertisement

ಇದರ ಜತೆಗೆ ರಾಜ್ಯಗಳಿಂದ ರಾಜ್ಯಕ್ಕೆ ಸಾಗಣೆಯಾಗುವ ಸೆಕೆಂಡ್‌ ಹ್ಯಾಂಡ್‌ ವಸ್ತುಗಳಿಗೆ ತೆರಿಗೆ ವಿಧಿಸಲಾಗುತ್ತಿಲ್ಲ ಎಂದಿದೆ. ನಿಗದಿತ ವಸ್ತುಗಳನ್ನು ನೋಂದಾಯಿತ ವ್ಯಕ್ತಿಯಿಂದ ಖರೀದಿಸಿ ಮತ್ತು ನೋಂದಣಿ ಮಾಡದ ವ್ಯಕ್ತಿಯಿಂದ ಸರಬರಾಜು ಮಾಡಿದರೂ ತೆರಿಗೆ ವಿಧಿಸುವ ಅವಕಾಶ ಇಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. 

ತಪ್ಪು ಮಾಹಿತಿ ನೀಡಲಾಗುತ್ತದೆ: ಈ ನಡುವೆ ಪಂಜಾಬ್‌ನ ಲುಧಿಯಾನಾದಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಜಿಎಸ್‌ಟಿ ಎನ್ನುವುದು ಸರಳ ತೆರಿಗೆ ವ್ಯವಸ್ಥೆ. ಕಾನೂನು ಪಾಲಿಸುವವರನ್ನು ತೆರಿಗೆ ಪರಿಶೀಲ ನೆಗಾಗಿ ಕಚೇರಿಗೆ ಕರೆಯಿಸಿಕೊಳ್ಳಲಾಗು ವುದಿಲ್ಲ. ಅವರಿಗೇನಿದ್ದರೂ ಆನ್‌ ಲೈನ್‌ ಮೂಲಕವೇ ತೆರಿಗೆ ಪಾವತಿ-ಸ್ವೀಕೃತಿ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಆದರೆ ಈ ವಿಚಾರದಲ್ಲಿ ಹೆಚ್ಚು ಜಾಣತನ ಪ್ರದರ್ಶಿಸಿದರೆ ಅಂಥವರ ವಿರುದ್ಧ ಕಾನೂನಿನ ಅನ್ವಯ  ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಲು ಜೇಟ್ಲಿ ಮರೆಯಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next