Advertisement

ಮಣಿಪಾಲ ದಂತ ವೈದ್ಯಕೀಯ ವಿಜ್ಞಾನಗಳ ಕಾಲೇಜಿಗೆ ದ್ವಿತೀಯ ಸ್ಥಾನ

02:53 AM Jun 12, 2020 | Sriram |

ಹೊಸದಿಲ್ಲಿ: ಕೇಂದ್ರ ಮಾನವ ಸಂಪದಭಿವೃದ್ಧಿ ಸಚಿವಾಲಯದ ರಾಷ್ಟ್ರೀಯ ಸಾಂಸ್ಥಿಕ ರ್‍ಯಾಂಕಿಂಗ್‌ ಫ್ರೇಮ್ ‌ವರ್ಕ್‌ (ಎನ್‌ಐಆರ್‌ಎಫ್) ದೇಶಾದ್ಯಂತದ ವಿವಿಧ ವೃತ್ತಿಪರ ಶಿಕ್ಷಣ ಸಂಸ್ಥೆಗಳ ರ್‍ಯಾಂಕ್‌ ಪಟ್ಟಿ ಬಿಡುಗಡೆ ಮಾಡಿದ್ದು, ಮಣಿಪಾಲ ದಂತ ವೈದ್ಯಕೀಯ ವಿಜ್ಞಾನಗಳ ಕಾಲೇಜು (ಎಂಸಿಒಡಿಎಸ್‌) ದೇಶದ ಅತ್ಯುತ್ತಮ ದಂತ ವೈದ್ಯಕೀಯ ಕಾಲೇಜುಗಳ ಪೈಕಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

Advertisement

ಕೇಂದ್ರ ಮಾನವ ಸಂಪದಭಿವೃದ್ಧಿ ಸಚಿವ ರಮೇಶ್‌ ಪೊಖ್ರಿಯಾಲ್ ಗುರುವಾರ ರ್‍ಯಾಂಕಿಂಗ್‌ ಪಟ್ಟಿ ಬಿಡುಗಡೆ ಮಾಡಿದರು. ಇದೇ ಮೊದಲ ಬಾರಿಗೆ ದಂತ ವೈದ್ಯಕೀಯ ವಿಭಾಗದಲ್ಲಿ ರಾಷ್ಟ್ರೀಯ ರ್‍ಯಾಂಕಿಂಗ್‌ ಪ್ರಕಟಿಸಲಾಗಿದ್ದು, ಎಂಸಿಒಡಿಎಸ್‌ ಎರಡನೇ ಸ್ಥಾನ ಪಡೆದಿದೆ. ದಿಲ್ಲಿಯ ಮೌಲಾನಾ ಆಜಾದ್‌ ಇನ್‌ಸ್ಟಿಟ್ಯೂಟ್‌ ಆಫ್ ಡೆಂಟಲ್‌ ಸೈನ್ಸಸ್‌ ಮೊದಲ ಮತ್ತು ಪುಣೆಯ ಡಾ| ಡಿ.ವೈ. ಪಾಟೀಲ್‌ ವಿದ್ಯಾಪೀಠ ಮೂರನೇ ಸ್ಥಾನವನ್ನು ಪಡೆದುಕೊಂಡಿವೆ.ಮಣಿಪಾಲ ದಂತ ವೈದ್ಯಕೀಯ ವಿಜ್ಞಾನಗಳ ಕಾಲೇಜು, ಮಣಿಪಾಲ್‌ ಅಕಾಡೆಮಿ ಆಫ್ ಹೈಯರ್‌ ಎಜುಕೇಶನ್‌(ಮಾಹೆ)ನ ಅಂಗಸಂಸ್ಥೆಯಾಗಿದೆ.

ಒಟ್ಟಾರೆ ರ್‍ಯಾಂಕಿಂಗ್‌
ಒಟ್ಟಾರೆ ರ್‍ಯಾಂಕಿಂಗ್‌ನಲ್ಲಿ ಐಐಟಿ ಮದ್ರಾಸ್‌ ಮೊದಲ ಸ್ಥಾನ, ಐಐಎಸ್‌ಸಿ ಬೆಂಗಳೂರು ದ್ವಿತೀಯ ಮತ್ತು ಐಐಟಿ ದಿಲ್ಲಿ ಮೂರನೇ ಸ್ಥಾನ ಪಡೆದುಕೊಂಡಿವೆ.

ಬಿ-ಸ್ಕೂಲ್‌ ವಿಭಾಗ
ಐಐಎಂ-ಅಹ್ಮದಾಬಾದ್‌, ಐಐಎಂ- ಬೆಂಗಳೂರು ಮತ್ತು ಐಐಎಂ- ಕೋಲ್ಕತಾಗಳು ಮೊದಲ ಮೂರು ಸ್ಥಾನಗಳಲ್ಲಿವೆ. ಐಐಟಿ ವಿಭಾಗದಲ್ಲಿ ಐಐಟಿ-ಮದ್ರಾಸ್‌, ಐಐಟಿ-ದಿಲ್ಲಿ ಮತ್ತು ಐಐಟಿ-ಮುಂಬಯಿಗಳು ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದಿವೆ.

ಫಾರ್ಮಸಿ ವಿಭಾಗ
ದಿಲ್ಲಿಯ ಜಾಮಿಯಾ ಹಂದದ್‌, ಪಂಜಾಬ್‌ ವಿ.ವಿ., ಚಂಡೀಗಢ ಮತ್ತು ಮೊಹಾಲಿಯ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಫಾರ್ಮಾಸುಟಿಕಲ್‌ ರಿಸರ್ಚ್‌ ಮೊದಲ 3 ಸ್ಥಾನಗಳನ್ನು ಪಡೆದಿವೆ.

Advertisement

ವಾರ್ಷಿಕ ರ್‍ಯಾಂಕಿಂಗ್‌
ವಿ.ವಿ.ಗಳ ವಿಭಾಗದಲ್ಲಿ ಐಐಎಸ್‌ಸಿ -ಬೆಂಗಳೂರು, ಜವಾಹರಲಾಲ್‌ ನೆಹರೂ ವಿ.ವಿ. ಮತ್ತು ಬನಾರಸ್‌ ಹಿಂದೂ ವಿ.ವಿ. ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದಿವೆ.

ವೈದ್ಯಕೀಯ ಕಾಲೇಜು ವಿಭಾಗ
ಏಮ್ಸ್‌ (ಎಐಐ ಎಂಎಸ್‌)- ದಿಲ್ಲಿ, ಪಿಜಿಐ- ಚಂಡೀಗಢ ಮತ್ತು ಸಿಎಂಸಿ- ವೆಲ್ಲೂರು ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿವೆ.

ಕಾಲೇಜು ವಿಭಾಗ
ಮಿರಾಂಡಾ ಕಾಲೇಜು, ಲೇಡಿ ಶ್ರೀರಾಮ್‌ ಮಹಿಳಾ ಕಾಲೇಜು ಮತ್ತು ಸೇಂಟ್‌ ಸ್ಟೀಫ‌ನ್ಸ್‌ ಕಾಲೇಜು  ಕ್ರಮವಾಗಿ ಮೊದಲ ಮೂರು ಸ್ಥಾನ ಗಳನ್ನು ಪಡೆದಿವೆ.

ಕಾನೂನು ಕಾಲೇಜು ವಿಭಾಗ
ರಾಷ್ಟ್ರೀಯ ಕಾನೂನು ಶಿಕ್ಷಣ ಸಂಸ್ಥೆ ವಿ.ವಿ. – ಬೆಂಗ ಳೂರು, ಎನ್‌ಎಲ್‌ಯು- ದಿಲ್ಲಿ, ನಲ್ಸಾರ್‌ ಕಾನೂನು ವಿ.ವಿ. -ಹೈದರಾ ಬಾದ್‌ ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next