Advertisement
ದೇಶದಲ್ಲಿ ಕೋವಿಡ್ ಸೋಂಕಿನ ನಿಯಂತ್ರಣದ ಹಿನ್ನೆಲೆಯಿಂದಾಗಿ ಲಾಕ್ ಡೌನ್ ನಂತಹ ಕಠಿಣ ಕ್ರಮಗಳನ್ನು ಸರ್ಕಾರ ಜಾರಿಗೆ ತಂದಿರುವ ಕಾರಣದಿಂದಾಗಿ ಉದ್ಯೋಗ ಸಮಸ್ಯೆ ಹೆಚ್ಚಾಗಿದೆ. ದೇಶದಲ್ಲಿ ಕೋವಿಡ್ ಸೋಂಕಿನ ಎರಡನೇ ಅಲೆಯಲ್ಲಿ ಒಂದು ಕೋಟಿ ಮಂದಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಮಾಹಿತಿ ನೀಡಿದೆ.
Related Articles
Advertisement
ಕೊವಿಡ್ ಸೋಂಕನ್ನು ನಿಯಂತ್ರಣ ಮಾಡುವ ಉದ್ದೆಶದಿಂದ ದೇಶದ ಹಲವು ರಾಜ್ಯಗಳು ಲಾಕ್ ಡೌನ್ ಗೆ ಮೊರೆ ಹೋಗಿದ್ದವು.ಈ ಕಾರಣದಿಂದಾಗಿ ಒಂದು ಕೋಟಿ ಭಾರತೀಯರಿಗೆ ಉದ್ಯೋಗ ನಷ್ಟವಾಗಿದೆ. ಆರ್ಥಿಕ ಸ್ಥಿತಿ ಚೇತರಿಕೆಯನ್ನು ಕಂಡರೇ, ನಿರುದ್ಯೋಗದ ಸಮಸ್ಯೆ ಕೊಂಚ ಮಟ್ಟಿಗೆ ನಿವಾರಣೆ ಆಗಬಹುದು. ಆದರೂ ಸಂಪೂರ್ಣ ಸಮಸ್ಯೆಯನ್ನು ನಿವಾರಣೆ ಆಗಲು ಸಾಧ್ಯವಿಲ್ಲ. ಈಗಾಗಲೇ ಸಾಕಷ್ಟು ಕಂಪೆನಿಗಳು ಸ್ಥಗಿತಗೊಂಡಿದ್ದು, ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿರುವವರಿಗೆ ಉದ್ಯೋಗವನ್ನು ಹಿಡಿದುಕೊಳ್ಳಲು ಬಹಳ ಕಷ್ಟ ಇದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು, ಅಸಂಘಟಿತ ವಲಯದಲ್ಲಿ ಸ್ವಲ್ಪ ಮಟ್ಟಿಗೆ ಉದ್ಯೋಗ ಮತ್ತೆ ಸೃಷ್ಟಿಯಾಗಬಹುದು. ಫಾರ್ಮಲ್ ಉದ್ಯೋಗಗಳನ್ನು ಕಳೆದುಕೊಂಡವರಿಗೆ ಇನ್ನೂ ಕೆಲವು ತಿಂಗಳುಗಳ ಕಾಲ ಉದ್ಯೋಗ ಸಮಸ್ಯೆ ಇರಲಿದೆ. ಆದಾಯದ ಮೇಲೆ ಮುಂದಿನ ಕೆಲವು ತಿಂಗಳುಗಳ ಕಾಲ ಭಾರಿ ಹೊಡೆತ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಮೇ ತಿಂಗಳಲ್ಲಿ ನಿರುದ್ಯೋಗ ಸಮಸ್ಯೆ ದಾಖಲೆಯ ಪ್ರಮಾಣ ಶೇಕಡಾ 23.5ಕ್ಕೆ ಏರಿಕೆ ಕಂಡು ಸಾಕಷ್ಟು ಮಂದಿ ತೊಂದರೆ ಅನುಭವಿಸಿದ್ದರು.
ಇನ್ನು, ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ, ಆದಾಯ ಸಮಸ್ಯೆ ಬಗ್ಗೆ ಸಮೀಕ್ಷೆ ನಡೆಸಿದ್ದು, ಕುಟುಂಬದ ಆದಾಯವು ಕೋವಿಡ್ ಕಾರಣದಿಂದ ಪಾತಾಳಕ್ಕಿಳಿದಿದೆ ಎಂದು ಸಮೀಕ್ಷೆಯತ ವರದಿ ತಿಳಿಸಿದೆ. ಎರಡು ಲಕ್ಷ ಮನೆಗಳನ್ನು ಈ ಸಮೀಕ್ಷೆಗೆ ಒಳಪಡಿಸಿಕೊಂಡಿದ್ದು, ಆ ಪೈಕಿ ಕೇವಲ ಶೇಕಡಾ 3 ರಷ್ಟು ಕುಟುಂಬಗಳಲ್ಲಿ ಮಾತ್ರ ಆದಾಯ ಯತಾವತ್ತಾಗಿದ್ದು ಹಾಗೂ ಸ್ವಲ್ಪ ಮಟ್ಟಿಗೆ ಹೆಚ್ಚಳವಾಗಿದೆ. ಶೇಕಡಾ 42 ರಷ್ಟು ಕುಟುಂಬಗಳ ಆದಾಯ ಕುಸಿತ ಹಾಗೂ ಶೇಕಡಾ 42 ರಷ್ಟು ಕುಟುಂಬಗಳ ಆದಾಯದಲ್ಲಿ ವ್ಯತ್ಯಾಸ ಉಂಟಾಗಿದೆ ಎಂದು ಸಮೀಕ್ಷೆ ವರದಿ ತಿಳಿಸಿದೆ.
ಇದನ್ನೂ ಓದಿ : ಸದ್ಯಕ್ಕೆ ಯಡಿಯೂರಪ್ಪನರೆ ಮುಖ್ಯಮಂತ್ರಿ : ಶಾಸಕ ಸಿ.ಟಿ ರವಿ