Advertisement

ದ್ವಿತೀಯ ಏಕದಿನ ಪಂದ್ಯ : ಶ್ರೀಲಂಕಾ ವಿರುದ್ಧ ಭಾರತ ಸರಣಿ ಜಯಭೇರಿ

11:37 PM Jul 20, 2021 | Team Udayavani |

ಕೊಲಂಬೊ : ದೀಪಕ್‌ ಚಹರ್‌ ಅವರ ದಿಟ್ಟ ಬ್ಯಾಟಿಂಗ್‌ ಹೋರಾಟದ ಫಲದಿಂದ ಶ್ರೀಲಂಕಾ ಎದುರಿನ ದ್ವಿತೀಯ ಏಕದಿನ ಪಂದ್ಯವನ್ನು 3 ವಿಕೆಟ್‌ಗಳಿಂದ ರೋಚಕವಾಗಿ ಗೆದ್ದ ಭಾರತ ಸರಣಿ ಜಯಭೇರಿ ಮೊಳಗಿಸಿದೆ.

Advertisement

ಶ್ರೀಲಂಕಾ 9 ವಿಕೆಟಿಗೆ 275 ರನ್‌ ಪೇರಿಸಿದರೆ, ಭಾರತ 49.1 ಓವರ್‌ಗಳಲ್ಲಿ 7 ವಿಕೆಟಿಗೆ 277 ರನ್‌ ಬಾರಿಸಿ ಅಮೋಘ ಗೆಲುವು ಸಾಧಿಸಿತು. ಆಗ ದೀಪಕ್‌ ಚಹರ್‌ 82 ಎಸೆತಗಳಿಂದ 69 ರನ್‌ (7 ಫೋರ್‌, 1 ಸಿಕ್ಸರ್‌) ಬಾರಿಸಿ ಅಜೇಯರಾಗಿದ್ದರು. ಉತ್ತಮ ಬೆಂಬಲ ನೀಡಿದ ಭುವನೇಶ್ವರ್‌ 19 ರನ್‌ ಕೊಡುಗೆ ಸಲ್ಲಿಸಿದರು. 36ನೇ ಓವರ್‌ ವೇಳೆ 7ಕ್ಕೆ 193 ರನ್‌ ಗಳಿಸಿ ಸೋಲಿನಂಚಿನಲ್ಲಿದ್ದ ಭಾರತವನ್ನು ಚಹರ್‌-ಭುವನೇಶ್ವರ್‌ ಸೇರಿಕೊಂಡು ಮೇಲೆತ್ತಿದ ರೀತಿ ಅಸಾಮಾನ್ಯ ಸಾಹಸಕ್ಕೊಂದು ನಿದರ್ಶನವೆನಿಸಿತು. ಇವರಿಬ್ಬರಿಂದ ಮುರಿಯದ 8ನೇ ವಿಕೆಟಿಗೆ 84 ರನ್‌ ಹರಿದು ಬಂತು.

ಸೂರ್ಯಕುಮಾರ್‌ ಯಾದವ್‌ ಕೂಡ ಅರ್ಧ ಶತಕ ಬಾರಿಸಿ (53) ಆಸರೆಯಾದರು. ಮನೀಷ್‌ ಪಾಂಡೆ 37 ರನ್‌ ಮಾಡಿದರು. ಕಪ್ತಾನ ಧವನ್‌ ಗಳಿಕೆ 29 ರನ್‌. ಆದರೆ ಪೃಥ್ವಿ ಶಾ (13), ಇಶಾನ್‌ ಕಿಶನ್‌ (1), ಹಾರ್ದಿಕ್‌ ಪಾಂಡ್ಯ (0) ವಿಫಲರಾದರು.

ಶ್ರೀಲಂಕಾ ಪರ ಓಪನರ್‌ ಆವಿಷ್ಕ ಫೆರ್ನಾಂಡೊ (50), ಮಿಡ್ಲ್ ಆರ್ಡರ್‌ ಬ್ಯಾಟ್ಸ್‌ಮನ್‌ ಚರಿತ ಅಸಲಂಕ (65) ಅರ್ಧ ಶತಕ ಬಾರಿಸಿದರು. ರವಿವಾರ ಕಡೆಯ ಹಂತದಲ್ಲಿ ಸಿಡಿದು ನಿಂತ ಚಮಿಕ ಕರುಣರತ್ನೆ ಮತ್ತೂಂದು ಉಪಯುಕ್ತ ಇನ್ನಿಂಗ್ಸ್‌ ಮೂಲಕ ಅಜೇಯ 44 ರನ್‌ ಕೊಡುಗೆ ಸಲ್ಲಿಸಿದರು. ಆದರೆ ಮುನ್ನೂರರ ಗಡಿ ದಾಟುವ ಲಂಕೆಯ ಯೋಜನೆ ಕೈಗೂಡಲಿಲ್ಲ.

Colombo: India’s Krunal Pandya plays a shot during the second one day international cricket match between Sri Lanka and India in Colombo, Sri Lanka, Tuesday, July 20, 2021.AP/PTI Photo(AP07_20_2021_000266B)

Advertisement

ಚಹಲ್‌ ಅವಳಿ ಬೇಟೆ
ಚಹಲ್‌ 14ನೇ ಓವರ್‌ನ ಸತತ ಎಸೆತಗಳಲ್ಲಿ ಮಿನೋದ್‌ ಭನುಕ (36) ಮತ್ತು ಭನುಕ ರಾಜಪಕ್ಷೆ (0) ಅವರನ್ನು ಪೆವಿಲಿಯನ್ನಿಗೆ ರವಾನಿಸಿ ಭಾರತಕ್ಕೆ ಮೇಲುಗೈ ಒದಗಿಸಿದರು. ಮೊದಲ ವಿಕೆಟಿಗೆ ಲಂಕಾ 13.2 ಓವರ್‌ಗಳಿಂದ 77 ರನ್‌ ಗಳಿಸಿ ಓಟ ಬೆಳೆಸಿತ್ತು. ಚಹಲ್‌ ಸಾಧನೆ 50ಕ್ಕೆ 3. ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದ ಭುವನೇಶ್ವರ್‌ ಇಲ್ಲಿ 54ಕ್ಕೆ 3 ವಿಕೆಟ್‌ ಕಿತ್ತು ಲಯ ಕಂಡುಕೊಂಡರು. ಪೇಸರ್‌ ದೀಪಕ್‌ ಚಹರ್‌ ಉಳಿದೆರಡು ವಿಕೆಟ್‌ ಉರುಳಿಸಿದರು. ಕುಲದೀಪ್‌ಗೆ ಯಶಸ್ಸು ಸಿಗಲಿಲ್ಲ.

ಸತತ ವಿಕೆಟ್‌ ಪತನದಿಂದ ಆರಂಭಕಾರ ಆವಿಷ್ಕ ವಿಚಲಿತರಾಗಲಿಲ್ಲ. ಧನಂಜಯ ಡಿ ಸಿಲ್ವ (32) ಜತೆಗೂಡಿ 3ನೇ ವಿಕೆಟಿಗೆ ಮತ್ತೂಂದು ಉಪಯುಕ್ತ ಜತೆಯಾಟದಲ್ಲಿ ಪಾಲ್ಗೊಂಡು 47 ರನ್‌ ಒಟ್ಟುಗೂಡಿಸಿದರು. ಭುವನೇಶ್ವರ್‌ ಈ ಜೋಡಿಯನ್ನು ಬೇರ್ಪಡಿಸಿದರು. ಆವಿಷ್ಕ ಅವರ 50 ರನ್‌ 71 ಎಸೆತಗಳಿಂದ ಬಂತು. 4 ಬೌಂಡರಿ ಹಾಗೂ ಇನ್ನಿಂಗ್ಸಿನ ಏಕೈಕ ಸಿಕ್ಸರ್‌ ಇದರಲ್ಲಿತ್ತು.
ಚೊಚ್ಚಲ ಫಿಫ್ಟಿ ಹೊಡೆದ ಅಸಲಂಕ ವಿಕೆಟ್‌ ಕೂಡ ಭುವನೇಶ್ವರ್‌ ಪಾಲಾಯಿತು. ಅವರ 65 ರನ್‌ 68 ಎಸೆತಗಳಿಂದ ಬಂತು (6 ಫೋರ್‌). ಕರುಣರತ್ನೆ 33 ಎಸೆತಗಳಿಂದ ಅಜೇಯ ಇನ್ನಿಂಗ್ಸ್‌ ಕಟ್ಟಿದರು (5 ಬೌಂಡರಿ).

ಈ ಪಂದ್ಯಕ್ಕಾಗಿ ಭಾರತ ಯಾವುದೇ ಬದಲಾವಣೆ ಮಾಡಿಕೊಳ್ಳಲಿಲ್ಲ. ಶ್ರೀಲಂಕಾ ಇಸುರು ಉದಾನ ಬದಲು ಕಸುನ್‌ ರಜಿತ ಅವರನ್ನು ಆಡಿಸಿತು.

ಸ್ಕೋರ್‌ಪಟ್ಟಿ
ಭಾರತ
ಪೃಥ್ವಿ ಶಾ ಬಿ ಹಸರಂಗ 13
ಶಿಖರ್‌ ಧವನ್‌ ಎಲ್‌ಬಿಡಬ್ಲ್ಯು ಹಸರಂಗ 29
ಇಶಾನ್‌ ಕಿಶನ್‌ ಬಿ ರಜಿತ 1
ಮನೀಷ್‌ ಪಾಂಡೆ ರನೌಟ್‌ 37
ಸೂರ್ಯಕುಮಾರ್‌ ಯಾದವ್‌
ಹಾರ್ದಿಕ್‌ ಪಾಂಡ್ಯ ಸಿ ಧನಂಜಯ ಬಿ ಶಣಕ 0
ಕೃಣಾಲ್‌ ಪಾಂಡ್ಯ ಬಿ ಹಸರಂಗ 35
ಸೂರ್ಯಕುಮರ್‌ ಎಲ್‌ಬಿಡಬ್ಲ್ಯು ಸಂದಕನ್‌ 53
ದೀಪಕ್‌ ಚಹರ್‌ ಔಟಾಗದೆ 69
ಭುವನೇಶ್ವರ್‌ ಔಟಾಗದೆ 19
ಇತರ 21
ವಿಕೆಟ್‌ ಪತನ: 1-28, 2-39, 3-65, 4-115, 5-116, 6-160, 7-193.
ಬೌಲಿಂಗ್‌:
ಕಸುನ್‌ ರಜಿತ 7.1-0-53-1
ದುಷ್ಮಂತ ಚಮೀರ 10-0-65-0
ವನಿಂದು ಹಸರಂಗ 10-0-37-3
ಲಕ್ಷಣ ಸಂದಕನ್‌ 10-0-71-1
ಚಮಿಕ ಕರುಣರತ್ನೆ 6-1-26-0
ದಸುನ್‌ ಸಣಕ 3-0-10-1
ಧನಂಜಯ ಡಿ ಸಿಲ್ವ 3-0-10-0

Advertisement

Udayavani is now on Telegram. Click here to join our channel and stay updated with the latest news.

Next