ದುಬೈ: ಸೌದಿ ಅರೇಬಿಯಾದ ರಾಜಕುಮಾರ ಮನ್ಸೂರ್ ಬಿನ್ ಮುಕ್ವಿನ್ ಅವರು ಭಾನುವಾರ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟ ಬೆನ್ನಲ್ಲೇ, ಮತ್ತೂಬ್ಬ ರಾಜಕುಮಾರ ಅಬ್ದುಲ್ ಅಜೀಜ್ (44) ಕೂಡ ಮೃತಪಟ್ಟಿದ್ದು, ಅಲ್ಲಿನ ರಾಜಮನೆತನ ಕೇವಲ 24 ಗಂಟೆಗಳಲ್ಲಿ ಇಬ್ಬರು
ರಾಜಕುಮಾರರನ್ನು ಕಳೆದುಕೊಂಡು ಶೋಕ ಸಾಗರದಲ್ಲಿ ಮುಳುಗಿದೆ.
ಭಾನುವಾರ ಮಧ್ಯಾಹ್ನವಷ್ಟೇ, ಸೌದಿ ಅರೇಬಿಯಾದ ಮನ್ಸೂರ್ ಬಿನ್ ಮುಕ್ವಿನ್ ಅವರು, ದಕ್ಷಿಣ ಅರೇಬಿಯಾ ಪ್ರಾಂತ್ಯದಲ್ಲಿ ತಮ್ಮ ಖಾಸಗಿ ಹೆಲಿಕಾಪ್ಟರ್ ಪತನಗೊಂಡ ಹಿನ್ನೆಲೆಯಲ್ಲಿ ಮೃತಪಟ್ಟಿದ್ದರು. ಘಟನೆಯಲ್ಲಿ ರಾಜಕುಮಾರ ಜತೆ 8 ಮಂದಿ ಮೃತಪಟ್ಟಿದ್ದಾರೆ. ರಾಜಕುಮಾರ
ಮತ್ತಿತರರು ಯೆಮನ್ ಗಡಿಗೆ 160 ಕಿಮೀ ದೂರದಲ್ಲಿರುವ ಪ್ರದೇಶದ ಕಾಮಗಾರಿಗಳ ಪರಿಶೀಲನೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿತ್ತು.
ಸೋಮವಾರ ಮೃತಪಟ್ಟ ಅಜೀಜ್ ಅವರ ಸಾವಿನ ಬಗ್ಗೆ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಆದರೆ, ಕೆಲವು ಗಾಳಿ ಸುದ್ದಿಗಳ ಪ್ರಕಾರ, ತಮ್ಮನ್ನು ಬಂಧಿಸಲು ಬಂದಿದ್ದ ಸೌದಿ ಅಧಿಕಾರಿಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗ ನಡೆದ ಗುಂಡಿನ ದಾಳಿಯಲ್ಲಿ ಅಜೀಜ್ ಮೃತಪಟ್ಟಿದ್ದಾರೆಂದು ಹೇಳಲಾಗಿದೆ.