Advertisement

ಎರಡನೇ ಸುತ್ತಿನ ಸೀಟ್‌ ಮ್ಯಾಟ್ರಿಕ್ಸ್‌ ಬಿಡುಗಡೆ

12:13 PM Aug 10, 2018 | Team Udayavani |

ಬೆಂಗಳೂರು: ವೃತ್ತಿಪರ ಕೋರ್ಸ್‌ಗಳಾದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪ್ರವೇಶಕ್ಕೆ ಭಾರತೀಯ ವಿಜ್ಞಾನ ಪರಿಷತ್ತು ಎರಡನೇ ಸುತ್ತಿನ ಸೀಟ್‌ ಮ್ಯಾಟ್ರಿಕ್ಸ್‌ ಬಿಡುಗಡೆ ಮಾಡಿದೆ.

Advertisement

ಎರಡನೇ ಸುತ್ತಿನಲ್ಲಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟುಗಳನ್ನು ಆಯ್ಕೆ ಮಾಡಿಕೊಳ್ಳುವ ಅಭ್ಯರ್ಥಿಗಳನ್ನು ಎಂಜಿನಿಯರಿಂಗ್‌ ಸೇರಿ ಇನ್ನಿತರೆ ಕೋರ್ಸ್‌ಗಳಿಗೆ ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಪ್ರಾಧಿಕಾರ, 84 ವೈದ್ಯಕೀಯ ಮತ್ತು 13 ದಂತ ವೈದ್ಯಕೀಯ ಕಾಲೇಜುಗಳ ಸೀಟ್‌ ಮ್ಯಾಟ್ರಿಕ್ಸ್‌ ಅನ್ನು ಕಾಲೇಜುವಾರು, ಕೋರ್ಸ್‌ವಾರು ಮತ್ತು ವರ್ಗವಾರು ಲಭ್ಯವಿರುವ ಸೀಟುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಅಖೀಲ ಭಾರತ ಕೋಟಾ ಸೀಟುಗಳ ಜತೆಗೆ ಮೊದಲ ಸುತ್ತಿನಲ್ಲಿ ರದ್ದುಗೊಂಡಿರುವ ಸೀಟುಗಳನ್ನು ಸೇರಿಸಿ ಹಂಚಿಕೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಆ.10ರ ಸಂಜೆ 7 ಗಂಟೆಯೊಳಗೆ ಅಭ್ಯರ್ಥಿಗಳು ಆಯ್ಕೆ ಮತ್ತು ಇಚ್ಛೆಯನ್ನು ದಾಖಲಿಸಬೇಕು. ವಿವರಕ್ಕೆ ವೆಬ್‌ಸೈಟ್‌ ಜ//kea.kar.nic.in ಸಂಪರ್ಕಿಸಬಹುದು. 

Advertisement

Udayavani is now on Telegram. Click here to join our channel and stay updated with the latest news.

Next