ತರಗತಿಯನ್ನು ಆರಂಭಿಸಿದೆ.ಅದರಂತೆ ಬಹುತೇಕ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕರು ಕಾಲೇಜಿಗೆ ಹೋಗಿದ್ದರೂ ತರಗತಿಗಳನ್ನು ತೆಗೆದುಕೊಂಡಿಲ್ಲ.
Advertisement
ಉಪನ್ಯಾಸಕರ ರಜೆಯ ಹಕ್ಕನ್ನು ಇಲಾಖೆ ಕಸಿದುಕೊಂಡಿದೆ. ಹೀಗಾಗಿ ಪಿಯು ಇಲಾಖೆಯನ್ನು ರಜೆ ರಹಿತ ಇಲಾಖೆಯಾಗಿ ಘೋಷಣೆ ಮಾಡಬೇಕು ಎಂದು ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಹೇಳಿದ್ದಾರೆ.
ಸಾಲಿನ ಆಡಳಿತಾತ್ಮಕ ಕೆಲಸ ಇನ್ನೂ ಮುಗಿದಿಲ್ಲ. ಈ ಮಧ್ಯೆ 2018-19ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭಿಸಿದ್ದಾರೆ. ಉಪನ್ಯಾಸಕರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೂ, ಇಲಾಖೆ ತನ್ನ ನಿಲುವು ಸಡಿಲಿಸಿಲ್ಲ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದಲಾದರೂ ಇಲಾಖೆ ತನ್ನ ನಿರ್ಧಾರದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಭಾನುವಾರದ ತರಗತಿ, ವಿಶೇಷ ತರಗತಿ ಹೀಗೆ ಅನೇಕ ಕಾರಣದಿಂದ ಪಿಯು ಕಾಲೇಜಿನ ಉಪನ್ಯಾಸಕರಿಗೆ 2017-18ನೇ ಸಾಲಿನಲ್ಲಿ ಸರಿಯಾಗಿ ರಜೆ ನೀಡಿಲ್ಲ. ಬೇಸಿಗೆ ರಜೆಯನ್ನೂ ಕಸಿದುಕೊಳ್ಳುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ.