ದಾವಣಗೆರೆ: ಜಿಲ್ಲೆಯ 10 ಕೇಂದ್ರದಲ್ಲಿ ಜೂ.28 ರಿಂದ ಜು. 8 ರವರೆಗೆ ನಡೆಯುವ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಶಾಂತಿಯುತ ಮತ್ತು ಪಾರದರ್ಶಿಕವಾಗಿ ನಡೆಯಲು ಎಲ್ಲ ಅಗತ್ಯ ಕ್ರಮ ತೆಗೆದು ಕೊಳ್ಳಲಾಗಿದ ಎಂದು ಅಪರ ಜಿಲ್ಲಾಧಿ ಕಾರಿ ಪದ್ಮಾ ಬಸವಂತಪ್ಪ ತಿಳಿಸಿದ್ದಾರೆ.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಾವಣಗೆರೆ ನಗರದಲ್ಲಿ 4,ಹರಪನಹಳ್ಳಿಯಲ್ಲಿ 2 ಕೇಂದ್ರ, ಹರಿಹರ, ಜಗಳೂರು, ಹೊನ್ನಾಳಿ, ಚನ್ನಗಿರಿಯಲ್ಲಿ ತಲಾ 1 ಕೇಂದ್ರ ಸೇರಿದಂತೆ 10 ಕೇಂದ್ರಗಳಲ್ಲಿ 5,128 ಬಾಲಕರು, 4,138ಬಾಲಕಿಯರು ಒಳಗೊಂಡಂತೆ ಒಟ್ಟು ಒಟ್ಟು 9,266 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.
ಕಲಾ ವಿಭಾಗದಲ್ಲಿ 3,619, ವಾಣಿಜ್ಯ ವಿಭಾಗದಲ್ಲಿ 2,320, ವಿಜ್ಞಾನ ವಿಭಾಗದಲ್ಲಿ 3,327 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಕೊಠಡಿಗೆ ಮೊಬೈಲ್, ಸ್ಮಾರ್ಟ್ ವಾಚ್ ತರುವಂತಿಲ್ಲ. ವಿಜ್ಞಾನ ವಿದ್ಯಾರ್ಥಿಗಳಿಗೆ ಸರಳ ಕ್ಯಾಲುಕೇಲೇಟರ್‌ಗೆ ಮಾತ್ರ ಅವಕಾಶವಿದೆ ಎಂದು ತಿಳಿಸಿದರು.
ಸಿಆರ್‌ಪಿಸಿ ಸೆಕ್ಷನ್ 144 ರ ಪ್ರಕಾರ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಪ್ರವೇಶಕ್ಕೆ ನಿಷೇಧ ಘೋಷಿಸಲಾಗಿದೆ. ಕೇಂದ್ರಗಳ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಪರೀಕ್ಷಾ ಅವಧಿಯಲ್ಲಿ ಮುಚ್ಚಿಸಲು ಜಿಲ್ಲಾ ಅಧೀಕ್ಷಕರು ಅಗತ್ಯ ಕ್ರಮ ತೆಗೆದುಕೊಳ್ಳಬೇಕು.
ರೂಟ್ ಆಫಿಸರ್ ಜವಾಬ್ದಾರಿ ಹೆಚ್ಚಿದ್ದು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚಿಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಿ.ಆರ್. ವಿಜಯಾನಂದ ಮಾತನಾಡಿ, ಕ್ಷೇತ್ರ ಶಿಕ್ಷಣಾಧಿಕಾರಿ, ತಹಶೀಲ್ದಾರ್ ಮತ್ತು ಪ್ರಾಂಶುಪಾಲರು ರೂಟ್ ಆಫಿಸರ್ ಗಳಾಗಿದ್ದಾರೆ.
ಬೆಳಗ್ಗೆ ಖಜಾನೆಯಿಂದ ಪ್ರಶ್ನೆಪತ್ರಿಕೆ ಪಡೆದಾಗಿನಿಂದ ಪರೀಕ್ಷೆ ನಡೆಸುವ, ಬಂಡಲ್ ಕಟ್ಟಿ ಸೀಲು ಮಾಡಿ ಮುಖ್ಯ ಅಂಚೆ ಕಚೇರಿಗೆ ತಲುಪಿಸುವವರೆಗೆ ನಿಯೋಜಿತ ಅ ಧಿಕಾರಿ, ಸಿಬ್ಬಂದಿಗಳು ಗಮನ ನೀಡಬೇಕಾಗುತ್ತದೆ ಎಂದು ತಿಳಿಸಿದರು. ವಿವಿಧ ಅಧಿಕಾರಿಗಳು ಇದ್ದರು.