Advertisement
ನಾಯಕ ರೋಹಿತ್ ಶರ್ಮ ಮರಳಿರುವುದು ಭಾರತಕ್ಕೆ ಹೆಚ್ಚಿನ ಬಲ ಮೂಡಿಸಿದೆ. ಇವರಿಗಾಗಿ ಇಶಾನ್ ಕಿಶನ್ ಜಾಗ ಬಿಡಬೇಕಾಗುತ್ತದೆ. ರೋಹಿತ್ – ಗಿಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಅಲ್ಲದೆ ಶಾರ್ದೂಲ್ ಠಾಕೂರ್ ಬದಲಿಗೆ ಅಕ್ಷರ್ ಪಟೇಲ್ ತಂಡಕ್ಕೆ ಮರಳಿದ್ದಾರೆ.
Related Articles
Advertisement
ಭಾರತ-ಆಸ್ಟ್ರೇಲಿಯ ವಿಶಾಖ ಪಟ್ಟಣದಲ್ಲಿ ಎದುರಾಗುತ್ತಿರುವುದು ಇದು 2ನೇ ಸಲ. ಮೊದಲ ಪಂದ್ಯ ನಡೆದದ್ದು 2010ರಷ್ಟು ಹಿಂದೆ. ಆಗ ಧೋನಿ ಮತ್ತು ಮೈಕಲ್ ಕ್ಲಾರ್ಕ್ ನಾಯಕರಾಗಿದ್ದರು. ಭಾರತ 5 ವಿಕೆಟ್‌ಗಳ ಜಯ ಸಾಧಿಸಿತ್ತು. 290 ರನ್ ಚೇಸಿಂಗ್ ವೇಳೆ ಕೊಹ್ಲಿ 118 ರನ್ ಬಾರಿಸಿದ್ದರು.
ತಂಡಗಳು
ಭಾರತ: ರೋಹಿತ್ ಶರ್ಮಾ (ನಾ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿ.ಕೀ), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ.
ಆಸ್ಟ್ರೇಲಿಯಾ: ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್ (ನಾ), ಮಾರ್ನಸ್ ಲಬುಶೇನ್, ಅಲೆಕ್ಸ್ ಕ್ಯಾರಿ (ವಿ.ಕೀ), ಕ್ಯಾಮರೂನ್ ಗ್ರೀನ್, ಮಾರ್ಕಸ್ ಸ್ಟೊಯಿನಿಸ್, ಸೀನ್ ಅಬಾಟ್, ನಾಥನ್ ಎಲ್ಲಿಸ್, ಮಿಚೆಲ್ ಸ್ಟಾರ್ಕ್, ಆಡಮ್ ಝಂಪಾ