Advertisement

ವಿದೇಶಕ್ಕೆ ತೆರಳುವವರಿಗೆ ಈ ದಾಖಲೆಗಳನ್ನು ನೀಡಿದರೆ 28 ದಿನಕ್ಕೆ  2ನೇ ಡೋಸ್‌ ಲಸಿಕೆ

08:01 AM Jun 16, 2021 | Team Udayavani |

ಬೆಂಗಳೂರು: ವಿದ್ಯಾಭ್ಯಾಸ, ನೌಕರಿ, ಒಲಿಂಪಿಕ್ಸ್‌ಗಾಗಿ ತೆರಳುವವರಿಗೆ ಕೋವಿಡ್ ಲಸಿಕೆ ಮೊದಲ ಡೋಸ್‌ ಪಡೆದ 28 ದಿನಗಳ ನಂತರ ಎರಡನೇ ಡೋಸ್‌ ನೀಡಲು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

Advertisement

ಸದ್ಯ ಕೋವಿಶೀಲ್ಡ್‌ ಕೊರೊನಾ ಲಸಿಕೆ ಮೊದಲ ಡೋಸ್‌ ಪಡೆದವರು 84 ದಿನಗಳ ನಂತರ ಎರಡನೇ ಡೋಸ್‌ ಪಡೆಯಬೇಕೆಂಬ ನಿಯಮವಿದೆ. ಇದರಿಂದ ವಿದೇಶಕ್ಕೆ ತೆರಳುವವರಿಗೆ ಸಮಸ್ಯೆಯಾಗಿತ್ತು. ಸದ್ಯ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ವಿದ್ಯಾಭ್ಯಾಸಕ್ಕಾಗಿ, ನೌಕರಿಗಾಗಿ ಹಾಗೂ ಟೋಕಿಯೊದಲ್ಲಿ ನಡೆಯುವ ಒಲಿಂಪಿಕ್ಸ್‌ಗಾಗಿ ತೆರಳುವವರಿಗೆ ಮೊದಲ ಡೋಸ್‌ ಪಡೆದ 28 ದಿನಗಳ ನಂತರ ಎರಡನೇ ಡೋಸ್‌ನೀಡಬಹುದು.  ಈ ಕುರಿತು ಸೂಕ್ತ ಕ್ರಮಕೈಗೊಳ್ಳವಂತೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ ಅರುಂಧತಿ ಚಂದ್ರಶೇಖರ್‌ ಅವರು ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ:ಮೂಲ ವರ್ಸಸ್‌ ವಲಸಿಗ : ಬಿಜೆಪಿಯ ನಾಯಕತ್ವ ಬದಲಾವಣೆ ವಿಚಾರದಲ್ಲಿ ಮತ್ತೊಂದು ತಿರುವು

ಸ್ವಯಂ ಘೋಷಣಾ ಪ್ರಮಾಣ ಪತ್ರದಲ್ಲಿ ಅಭ್ಯರ್ಥಿಯು ನೀಡುವ ಮಾಹಿತಿಯನ್ನು ಪಡೆದು, ದಾಖಲೆಗಳನ್ನು ಪರಿಶೀಲಿಸಿ, ದೃಢೀಕರಣ ಪತ್ರವನ್ನು ನೀಡಬೇಕು. ಈ ಪತ್ರವನ್ನು ಕೋವಿನ್‌ ಪೋರ್ಟಲ್‌ನಲ್ಲಿ ಅಪ್‌ಡೇಟ್‌ ಮಾಡಬೇಕು.

ಇನ್ನು ವಿದೇಶಕ್ಕೆ ತೆರಳುವವರು ಮೊದಲ ಡೋಸ್‌ ಲಸಿಕೆ ಪಡೆಯುವಾಗ ನೋಂದಣಿಗಾಗಿ ಪಾಸ್‌ ಪೋರ್ಟ್‌ ನಂಬರ್‌ ನೀಡಿರದಿದ್ದರೆ, ಎರಡನೇ ಡೋಸ್‌ ಪಡೆಯುವ ಸಂದರ್ಭದಲ್ಲಿ ಕಡ್ಡಾಯವಾಗಿ ಲಸಿಕೆ ಪ್ರಮಾಣಪತ್ರವನ್ನು ಒದಗಿಸಬೇಕು ಎಂದು ಸೂಚಿಸಿದ್ದಾರೆ.

Advertisement

ಇದನ್ನೂ ಓದಿ: ಅಣ್ವಸ್ತ್ರ ಬಲ ವೃದ್ಧಿಯತ್ತ ಭಾರತ : ಸದ್ಯ ನಮ್ಮ ಬಳಿ ಇರುವುದು 156 ಪರಮಾಣು ಅಸ್ತ್ರ 

Advertisement

Udayavani is now on Telegram. Click here to join our channel and stay updated with the latest news.

Next