Advertisement

ರಾಮನಗರ: ಕೊವ್ಯಾ ಕ್ಸಿನ್‌ ಎರಡನೇ ಡೋಸ್‌ಗೆ ಪರದಾಟ

01:53 PM May 14, 2021 | Team Udayavani |

ರಾಮನಗರ: ಮೇ 14ರ ಶುಕ್ರವಾರದಿಂದ 18 ರಿಂದ 44 ವರ್ಷ ವಯೋಮಾನದವರಿಗೆ ಕೋವಿಡ್‌ ಲಸಿಕೆ ನೀಡುವುದನ್ನು ನಿಲ್ಲಿ ಸಲಾ ಗುತ್ತದೆ. 45 ವರ್ಷ ಮೇಲ್ಪಟ್ಟವರಿಗೂ ಮೊದಲನೆ ಡೋಸ್‌ ಲಸಿಕೆ ಕೊಡುವುದಿಲ್ಲ ಎಂಬ ಸರ್ಕಾರದ ನಿರ್ಧಾರದ ಹಿನ್ನೆಲೆಯಲ್ಲಿ ಗುರು ವಾರ ಲಸಿಕೆ ಪಡೆಯಲು ನಾಗರಿಕರು ವ್ಯಕ್ತಿಗತ ಅಂತರ ಮೆರೆತು ಮುಗಿಬಿದ್ದ ಪ್ರಸಂಗ ನಡೆದಿದೆ. ಜಿಲ್ಲಾಸ್ಪತ್ರೆ ಸೇರಿದಂತೆ ಜಿಲ್ಲೆಯ ತಾಲೂಕು ಆಸ್ಪತ್ರೆಗಳಲ್ಲೂ ಇದೇ ಪರಿಸ್ಥಿತಿ ಗುರುವಾರ ಬೆಳಗ್ಗೆ ಕಂಡು ಬಂದಿದೆ.

Advertisement

ಸ್ಥಳೀಯರು ಮತ್ತು ಬೆಂಗಳೂರು ನಗರ ನಿವಾಸಿಗಳು ಸೇರಿ ದಂತೆ 45 ವರ್ಷ ಮೇಲ್ಪಟ್ಟ ನಾಗರಿಕರು ಎರಡನೇ ಡೋಸ್‌ಗೆ ಮುಗಿಬಿದ್ದರೆ, 18 ರಿಂದ 44 ವರ್ಷ ವಯೋಮಾನದವರು ಹೇಗಾದರು ಮಾಡಿ ಮೊದಲ ಡೋಸ್‌ ಲಸಿಕೆ ಪಡೆದುಕೊಳ್ಳೋಣ ಎಂದು ಆಸ್ಪತ್ರೆಗಳಿಗೆ ಧಾವಿಸಿದ್ದರು.

ವ್ಯಕ್ತಿಗತ ಅಂತರ ಮರೆತ ನಾಗರಿಕರು:

ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ, ಬುಧವಾರ ನಾಗರಿಕರು ಸರದಿ ಸಾಲಿನಲ್ಲಿ ನಿಂತು ಲಸಿಕೆ ಪಡೆ ದಿದ್ದರು. ಆದರೆ ಗುರುವಾರ ಆಗಮಿಸಿದ್ದ ನಾಗರಿಕರು ತಾಳ್ಮೆ ಕಳೆದುಕೊಂಡಂತೆ ಕಂಡು ಬಂತು. ನಾ ಮುಂದು, ತಾ ಮುಂದು ಎಂದು ಮುಗಿಬಿದ್ದ ನಾಗರಿಕರು ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಲಿಲ್ಲ. ಆಸ್ಪತ್ರೆಯ ಸಿಬ್ಬಂದಿ ತಿಳಿಹೇಳಿ ಹೈರಾಣಾಗಿದ್ದರು. ಅಲ್ಲಿ ಪೊಲೀ ಸರು ಸಹ ಕಾಣಲಿಲ್ಲ. ಮೊದಲ ನೂರು ಮಂದಿಗೆ ಲಸಿಕೆ ಕೊಟ್ಟ ನಂತರ ಉಳಿದವರನ್ನು ಸಿಬ್ಬಂದಿ ವಾಪಸ್ಸು ಕಳುಹಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಕೊವ್ಯಾ ಕ್ಸಿನ್‌ ಎರಡನೇ ಡೋಸ್‌ಗೆ ಪರದಾಟ:

Advertisement

ಮೊದಲ ಡೋಸ್‌ ಕೋವ್ಯಾಕ್ಸಿನ್‌ ಲಸಿಕೆ ಪಡೆದ ನಾಗರಿಕರು ಎರಡನೇ ಡೋಸ್‌ಗಾಗಿ ಪರದಾಡುತ್ತಿದ್ದಾರೆ. ಮೊದಲ ಡೋಸ್‌ ಪಡೆದ ನಂತರ 60 ದಿನಗಳ ಒಳಗೆ ಎರಡನೇ ಡೋಸ್‌ ಪಡೆಯ ಬೇಕು ಎಂದು ವೈದ್ಯರು ಹೇಳಿದ್ದಾರೆ. ಆದರೆ ಜಿಲ್ಲೆಯಲ್ಲಿ ಕೊವ್ಯಾಕ್ಸಿನ್‌ ಸ್ಟಾಕ್‌ ಇಲ್ಲ ಎಂಬ ಬೋರ್ಡು ನೇತಾಡುತ್ತಿದೆ. ಅವಧಿ ಮುಗಿಯುವ ವೇಳೆಗೆ ಕೊವ್ಯಾಕ್ಸಿನ್‌ ಲಸಿಕೆ ಬರದಿದ್ದರೆ ತಮ್ಮ ಪಾಡೇನು ಎಂದು ಕೆಲ ವು ಹಿರಿಯ ನಾಗರಿಕರು ಆತಂಕ ವ್ಯಕ್ತಪಡಿಸಿದರು. ಕೊವ್ಯಾ ಕ್ಸಿನ್‌ ಏಕೆ ಕೊಟ್ಟಿರು ಎಂದು ಸರ್ಕಾ ರದ ವಿರುದ್ಧ ಹರಿಹಾಯ್ದರು.

ವಿಡಿಯೊ ಕಾನ್ಪರೆನ್ಸುಗಳಲ್ಲೇ ಮುಳುಗಿರುವ ಅಧಿಕಾರಿಗಳು!:

ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಿ ರಂಜನ್‌, ಆರ್‌. ಸಿ. ಎಚ್‌ ಅಧಿಕಾರಿ ಡಾ.ಪದ್ಮಾ ಸದಾ ಬ್ಯುಸಿ. ಲಸಿಕೆಯ ಬಗ್ಗೆ ಮಾಹಿತಿ ಪಡೆಯಲು ಕರೆ ಮಾಡಿದಾಗಲೆಲ್ಲ ಬ್ಯುಸಿ ಕರೆ ಗಳು ಇಲ್ಲವೇ ತಾವು ವಿ.ಸಿ.ಯಲ್ಲಿರುವುದಾಗಿ (ವಿಡಿಯೊ ಕಾನ್ಫರೆನ್ಸ್‌) ಹೇಳಿ ಕರೆ ಕಟ್‌ ಮಾಡು ವುದು, ಮೆಸೇಜ್‌ ಕಳುಹಿಸುವುದು ಮಾಡುತ್ತಿದ್ದಾರೆ ಎಂದು ಚುನಾಯಿತ ಪ್ರತಿನಿಧಿಗಳು ದೂರಿದ್ದಾರೆ. ಮಾಧ್ಯಮ ಪ್ರತಿನಿಧಿಗಳಿಗೂ ಇದೇ ಆನುಭವ ಆಗಿದೆ. ಅತ್ತ ಮುಖ್ಯ ಮಂತ್ರಿಗಳು ಮತ್ತು ಸಚಿವರು ಸದಾ ಒಂದಿಲ್ಲೊಂದು ಸಭೆಯಲ್ಲೇ ಮುಳುಗಿರುತ್ತಾರೆ. ಇತ್ತ ಅಧಿಕಾರಿ ಗಳು ವಿಡಿಯೊ ಕಾನ್ಫರೆ ನ್ಸ್‌ಗಳಲ್ಲಿ ತಲ್ಲೀನರಾಗಿರುತ್ತಾರೆ ಎಂದು ಕೆಲವು ಚುನಾಯಿತ ಪ್ರತಿನಿಧಿಗಳು ಕಿಡಿಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next