Advertisement

ಉತ್ತರಾಖಂಡ ದುರಂತ: ಕಂದಮ್ಮಗಳ ಹುಡುಕಾಟದಲ್ಲಿರುವ ತಾಯಿ ಕರುಳಿನ ವ್ಯಥೆ

07:53 PM Feb 14, 2021 | Team Udayavani |

ನವದೆಹಲಿ: ಉತ್ತರಾಖಂಡದ ಚಮೋಲಿಯಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸಿಲುಕಿದ 46 ಮಂದಿಯ ಮೃತದೇಹಗಳು ದೊರೆತಿದ್ದು, 158 ಮಂದಿ ನಾಪತ್ತೆಯಾಗಿದ್ದಾರೆ. ಹೀಗೆ ನಾಪತ್ತೆಯಾದವರ ರಕ್ಷಣಾ ಕಾರ್ಯ  ಭರದಿಂದ ಸಾಗಿದೆ.. ಹೀಗಿರುವಾಗ ಇದೇ ಪ್ರದೇಶದಲ್ಲಿ ಮಣ್ಣಿನೊಳಗೆ ಸಿಲುಕಿಕೊಂಡಿರುವ ತನ್ನ ಕಂದಮ್ಮಗಳಿಗಾಗಿ ಶ್ವಾನವೊಂದು ಹಗಲಿರುಳು ಪರಿತಪಿಸುತ್ತಿದೆ.

Advertisement

ಪ್ರವಾಹ ಸಂಭವಿಸಿದ ದಿನದಿಂದ (ಫೆ.7) ಈ ಶ್ವಾನ ತಪೋವನ್ ಸುರಂಗದ ಬಳಿಯೇ ಇದ್ದು, ಮಣ್ಣಿನಲ್ಲಿ ಸಿಲುಕಿಕೊಂಡಿರುವ ತನ್ನ ಮೂರು ಮರಿಗಳಿದಾಗಿ ಹಗಲು ರಾತ್ರಿ ಎನ್ನದೆ  ನಿರಂತರವಾಗಿ ಕಾಯುತ್ತಿದೆ. ಒಂದರೆಗಳಿಗೆಯೂ ಈ ಜಾಗದಿಂದ ದೂರ ಸರಿದಿಲ್ಲ  ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಮಣ್ಣಿನೊಳಗೆ ಸಿಲುಕಿಕೊಂಡಿರುವ ತನ್ನ ಕೂಸುಗಳನ್ನು ಮತ್ತೆ ಜೀವಂತವಾಗಿ ನೋಡಬೇಕೆಂಬ ಹಂಬಲದಿಂದ ರಕ್ಷಣಾ ಕಾರ್ಯ ನಿರತರ ಹಿಂದೆಯೆ ಈ ಶ್ವಾನವು ಸುತ್ತುತ್ತಿದೆ ಎನ್ನಲಾಗಿದೆ.

Advertisement

ಸ್ಮಾರ್ಟ್‌ ಕ್ಲಿನಿಕ್‌, ಡಿಜಿಟಲ್‌ ಕನ್ಸಲ್‌ಟೇಶನ್‌ ಗೆ ವಿಪುಲ ಅವಕಾಶ: DCM‌ ಅಶ್ವತ್ಥನಾರಾಯಣ

ಫೆ. 7 ರಂದು ಉತ್ತರಾಖಂಡದ ಚಮೋಲಿ ಜಿಲ್ಲೆಯ ತಪೋವನ -ರೈನಿ  ಪ್ರದೇಶದಲ್ಲಿ ನೀರ್ಗಲ್ಲು  ಕುಸಿತದ ಪರಿಣಾಮದಿಂದ ಧೌಲಿಗಂಗಾ ಹಾಗೂ ಅಲಂಕಾನಂದ ನದಿಗಳಲ್ಲಿ ದಿಢೀರ್ ಪ್ರವಾಹ ಉಂಟಾಗಿದ್ದು, ಪ್ರವಾಹದ ತೀವ್ರತೆಗೆ ರಿಷಿಗಂಗಾ ವಿದ್ಯುತ್ ಯೋಜನೆ ನಾಶವಾಗಿತ್ತು. ಈ ಪ್ರದೇಶದಲ್ಲಿದ್ದ ನೂರಕ್ಕೂ ಅಧಿಕ ಕಾರ್ಮಿಕರ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next