Advertisement

ನಾರಿನಾಳದಲ್ಲಿ ಚಿನ್ನದ ನಿಕ್ಷೇಪಕ್ಕೆ ಶೋಧ

11:27 AM Oct 15, 2021 | Team Udayavani |

ತಾವರಗೇರಾ: ಹೇರಳವಾದ ಖನಿಜ ಸಂಪತ್ತನ್ನು ಒಡಲಾಳದಲ್ಲಿ ಇಟ್ಟುಕೊಂಡಿರುವ ತಾವರಗೇರಾ ಹೋಬಳಿ ಸುತ್ತಲಿನ ಗ್ರಾಮದಲ್ಲಿ ಈಗ ಚಿನ್ನದ ಅದಿರಿನ ಸಂಚಲನ ಉಂಟಾಗಿದೆ. ಸಮೀಪದ ನಾರಿನಾಳ ಗ್ರಾಮದಲ್ಲಿ ಚಿನ್ನದ ಅದಿರು ಪತ್ತೆಗಾಗಿ ಭೂಗರ್ಭ ಶಾಸ್ತ್ರಜ್ಞರ ತಂಡ ಬೀಡುಬಿಟ್ಟಿದ್ದು, ಅದಿರು ಸಮೀಕ್ಷೆಗಾಗಿ ಡಿಗ್ಗಿಂಗ್‌ ಮೂಲಕ ಪರಿಶೀಲನೆ ಕೈಗೊಂಡಿದೆ.

Advertisement

ಕೇಂದ್ರ ಸರ್ಕಾರದ ಜಿಯೋಲಾಜಿಕಲ್‌ ಸರ್ವೇ ಆಫ್‌ ಇಂಡಿಯಾ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳ ತಂಡ ಕಳೆದ ಕೆಲ ದಿನಗಳಿಂದ ನಾರಿನಾಳ ಗ್ರಾಮದ ಸಮೀಪದ ಜಮೀನಿನಲ್ಲಿ ಚಿನ್ನದ ಅದಿರು ಪತ್ತೆಗಾಗಿ ಸಮೀಕ್ಷೆ ಕೈಗೊಂಡಿದೆ. ಶೋಧನೆಗಾಗಿ 113 ಮೀಟರ್‌ ಆಳ ಭೂಮಿ ಕೊರೆಯಲಾಗಿದ್ದು, ಭೂಗರ್ಭದಲ್ಲಿನ ಬಹುತೇಕ ಖನಿಜಯುಕ್ತ ಕಲ್ಲುಗಳನ್ನು ಸಂಗ್ರಹಿಸಿದೆ. ಸಂಗ್ರಹಿಸಿರುವ ಖನಿಜಯುಕ್ತ ಕಲ್ಲುಗಳನ್ನು ಪರೀಕ್ಷೆ ನಡೆಸಿ ಚಿನ್ನ ಹಾಗೂ ಇತರೆ ನೈಸರ್ಗಿಕ ಸಂಪತ್ತಿನ ಲಭ್ಯತೆ ಬಗ್ಗೆ ನಿಖರ ಮಾಹಿತಿ ನೀಡಲಿದೆ.

ಇದನ್ನೂ ಓದಿ: ನಾಟಿ ಕೋಳಿ ಬೆಲೆ ಕುಸಿತ

ಇದಲ್ಲದೇ ಸಮೀಪದಲ್ಲೇ ಇರುವ ಮ್ಯಾದರಡೊಕ್ಕಿ ಗ್ರಾಮದ ಜಮೀನಿನಲ್ಲಿ ಈ ಹಿಂದೆ ಮ್ಯಾಂಗನೀಸ್‌ ಪತ್ತೆಯಾಗಿತ್ತು. ಈಗ ನಾರಿನಾಳ ಸೇರಿದಂತೆ ತಾವರಗೇರಾ ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಚಿನ್ನದ ಅದಿರಿಗಾಗಿ ಶೋಧ ನಡೆದಿದೆ. 2017ರಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಜಿಯೋ ಇಂಡಿಯಾ ಲಿಮಿಟೆಡ್‌ ಎಂಬ ಸಂಸ್ಥೆಯು ಈ ಭಾಗದ ಭೂಗರ್ಭದಲ್ಲಿ ಖನಿಜ ಸೇರಿದಂತೆ ಬೆಲೆ ಬಾಳುವ ತೈಲ ನಿಕ್ಷೇಪ ಇರುವ ಕುರಿತು ವೈಮಾನಿಕ ಸಮೀಕ್ಷೆ ನಡೆಸಿತ್ತು. ಒಂದು ವೇಳೆ ಚಿನ್ನದ ಅದಿರಿನ ನಿಕ್ಷೇಪ ಇರುವುದು ಖಚಿತವಾದರೆ ಈ ಭಾಗದ ಚಿತ್ರಣವೇ ಬದಲಾಗಲಿದೆ.

-ಎನ್‌. ಶಾಮೀದ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next