ಬ್ರುಸೆಲ್ಸ್: ಬೆಲ್ಜಿಯಂನಲ್ಲಿ 433 ದಂಪತಿಗಳು ಸೇರಿ ವಿಶೇಷ ಗಿನ್ನೆಸ್ ದಾಖಲೆಯೊಂದನ್ನು ಬರೆದಿದ್ದಾರೆ.
ಏಕಕಾಲಕ್ಕೆ ಈ ದಂಪತಿಗಳು ಸ್ಪಾಘೆಟ್ಟಿ (ನೂಡಲ್ಸ್‌ನಂಥ ತಿನಿಸು)ಯ ಒಂದೊಂದು ಎಳೆಯನ್ನು ತಮ್ಮ ಸಂಗಾತಿಯೊಂದಿಗೆ ತಿನ್ನುವ ಮೂಲಕ ವಿನೂತನ ದಾಖಲೆ ಸೃಷ್ಟಿಸಿದ್ದಾರೆ.
ಬೆಲ್ಜಿಯಂನ ಘೆಂಟ್ ಅಪ್‌ಗ್ರೇಡ್ ಎಸ್ಟೇಟ್‌ನಲ್ಲಿ ಈ ಕಾರ್ಯಕ್ರಮ ನಡೆದಿದೆ. “ಲೇಡಿ ಆ್ಯಂಡ್ ದಿ ಟ್ರ್ಯಾಂಪ್’ ಸಿನಿಮಾದಲ್ಲಿ ಬರುವ ಇಟಾಲಿಯನ್ ಕಿಸ್ ಹಂತಕ್ಕೆ ತಲುಪುವವರೆಗೂ, ಒಂದು ಎಳೆ ನೂಡಲ್ಸ್‌ನ ಒಂದು ಬದಿಯನ್ನು ಪತಿ, ಮತ್ತೊಂದು ಬದಿಯನ್ನು ಪತ್ನಿ ತಿನ್ನುತ್ತಾ ಬರುತ್ತಾರೆ.
ವಾಸ್ತವದಲ್ಲಿ ಇದೊಂದು ಸವಾಲಿನ ಕೆಲಸ. ಏಕೆಂದರೆ, ಸ್ಪಾಘೆಟ್ಟಿಯ ಎಳೆ ಅತ್ಯಂತ ಮೆದುವಿರುವ ಕಾರಣ, ಅದು ಬೇಗನೆ ತುಂಡಾಗಿಬಿಡುತ್ತದೆ. ಆದರೆ, ಗಿನ್ನೆಸ್ ದಾಖಲೆ ಆಗಬೇಕೆಂದರೆ, ಒಬ್ಬ ದಂಪತಿಯ ಬಾಯಲ್ಲಿರುವ ನೂಡಲ್ಸ್‌ನ ಎಳೆಯೂ ಕಟ್ ಆಗುವಂತಿಲ್ಲ!
ಇದನ್ನೂ ಓದಿ:ವೀಕೇಂಡ್ : ದಕ್ಷಿಣಕಾಶಿ ಖ್ಯಾತಿಯ ಹಂಪಿಗೆ ಪ್ರವಾಸಿಗರ ದಂಡು, ದೇವರ ದರ್ಶನ ಪಡೆದ ಭಕ್ತರು
ಆದರೆ, ಇಲ್ಲಿ ಏಕಕಾಲಕ್ಕೆ 433 ದಂಪತಿಗಳು ಈ ರೀತಿ ಪರಸ್ಪರರಿಗೆ ಸ್ಪಾಘೆಟ್ಟಿ ತಿನ್ನಿಸಿ, ತುಟಿಯನ್ನು ಚುಂಬಿಸುವುದರೊಂದಿಗೆ ಈ “ದಾಖಲೆ’ ಸೃಷ್ಟಿಯಾಗಿದೆ. ಈ ಮೂಲಕ ಈ ಹಿಂದೆ 125 ದಂಪತಿಗಳು ಬರೆದಿದ್ದ ದಾಖಲೆಯನ್ನು ಸರಿಗಟ್ಟಲಾಗಿದೆ.