Advertisement

ಹೊಳೆಆಲೂರ ಮೇಘರಾಜ ನಗರ ಪ್ರತಿಬಂಧಕ ಪ್ರದೇಶ

02:05 PM Jun 07, 2020 | Suhan S |

ಹೊಳೆಆಲೂರ: ಗ್ರಾಮದ ಮೇಘರಾಜ ನಗರದ ನಿವಾಸಿ 28 ವರ್ಷದ ವ್ಯಕ್ತಿಗೆ ಶನಿವಾರ ಕೋವಿಡ್ ಸೋಂಕು ದೃಢವಾಗಿದ್ದು, ಅವನ ಕುಟುಂಬದ 5 ಜನರು ಸೇರದಂತೆ 9 ಮಂದಿಯನ್ನು ಕ್ವಾರಂಟೈನ್‌ಗೆ ಕಳುಹಿಸಿರುವುದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

Advertisement

ಸೋಂಕು ದೃಢವಾದ ಸುದ್ದಿ ತಿಳಿಯುತ್ತಿದ್ದಂತೆ ಬಹುತೇಕ ಹಿಂದುಳಿದ ವರ್ಗದವರನ್ನು ಹೂಂದಿರುವ ಮೇಘರಾಜ ಕಾಲೋನಿಯಲ್ಲಿ ಜನರು ಆತಂಕಕ್ಕೆ ಒಳಗಾಗಿದ್ದಾರೆ. ನಿತ್ಯ ದುಡಿದು ತಿನ್ನುವ ನಮ್ಮ ಕಾಲೋನಿ ಶೀಲ್‌ ಡೌನ್‌ ಅದರೆ ಏನು ಗತಿ ಎಂದು ಅಳಲು ತೋಡಿಕೊಂಡಿದ್ದಾರೆ. ಸೋಂಕಿತನ ಸಂಪರ್ಕದಲ್ಲಿ ಇರುವವರಿಗೇನಾದರೂ ಪಾಸಿಟೀವ್‌ ತಗುಲಿದರೆ ಗ್ರಾಮದಲ್ಲಿ ಮಾತ್ರವಲ್ಲ ಗ್ರಾಮೀಣ ಭಾಗದಲ್ಲಿ ಹೆಚ್ಚು ಪ್ರಮಾಣದಲ್ಲಿ ಸೋಂಕು ವ್ಯಾಪಿಸುವ ಲಕ್ಷಣಗಳು ದಟ್ಟವಾಗಿವೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಿಂದ ಶನಿವಾರ ಹೊಳೆಆಲೂರಿಗೆ ಯಾರೂ ಬರಲಿಲ್ಲ.

ಶನಿವಾರ ಸ್ಥಳೀಯ ಗ್ರಾಮ ಪಂಚಾಯತ ಅಧಿಕಾರಿಗಳು ಡಂಗುರ ಸಾರಿ ಎಲ್ಲ ಅಂಗಡಿ ಮುಗ್ಗಟ್ಟುಗಳನ್ನು ಬಂದ್‌ ಮಾಡಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ತಾಲೂಕು ಆರೋಗ್ಯ ಅಧಿಕಾರಿ ಬಿ.ಎಸ್‌. ಬಭಂತ್ರಿ, ಡಾ|ಅರವಿಂದ ಕಂಬಳಿ, ಡಾ| ರಾಘು, ಡಾ| ಕೆ.ಎಸ್‌. ಹಾದಿಮನಿ, ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶಿವಲೀಲಾ ಸಂಗಳದ, ತಾಪಂ ಇಒ ಸಂತೋಷ ಪಾಟೀಲ, ಪಿಡಿಒ ಮಂಜುನಾಥ ಗಣಿ ನೇತೃತ್ವದಲ್ಲಿ ಮೇಘರಾಜ ನಗರದ ಪ್ರತಿ ಮನೆ ಮನೆ ತಪಾಸಣೆ ಆರಂಭಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next