Advertisement

ಬೆಳಗಾವಿ ನಗರದಲ್ಲಿ ಸೀಲ್‌ ಡೌನ್‌

11:18 AM Apr 18, 2020 | mahesh |

ಬೆಳಗಾವಿ: ಜಿಲ್ಲೆಯಲ್ಲಿ ಕೋವಿಡ್ -19 ಕಬಂಧಬಾಹು ವಿಸ್ತರಿಸುತ್ತಲೇ ಇದ್ದು, ಶುಕ್ರವಾರ ಮತ್ತೆ ಐವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 41ಕ್ಕೇರಿದಂತಾಗಿದ್ದು, ನಗರವನ್ನು ಶುಕ್ರವಾರದಿಂದಲೇ ಸೀಲ್‌ಡೌನ್‌ ಮಾಡಿ ಕಟ್ಟೆಚ್ಚರ ವಹಿಸಲಾಗಿದೆ. ದೆಹಲಿಯ ನಿಜಾಮುದ್ದಿನ್‌ ತಬ್ಲೀಘಿ ಜಮಾತ್‌ ಮರ್ಕಜ್‌ದಿಂದ ವಾಪಸ್ಸಾಗಿದ್ದ ನಗರದ ಕ್ಯಾಂಪ್‌ ಪ್ರದೇಶದ ಕಸಾಯಿ ಗಲ್ಲಿಯ ಸೋಂಕಿತ ಸಂಖ್ಯೆ 127ರ ಸಂಪರ್ಕದಲ್ಲಿದ್ದ ಕ್ರಮವಾಗಿ 34, 17, 46, 37 ಹಾಗೂ 38 ವರ್ಷದ ವ್ಯಕ್ತಿಗಳಿಗೆ ಕೋವಿಡ್ -19 ಪಾಸಿಟಿವ್‌ ಇರುವುದು ಖಚಿತವಾಗಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಗುರುವಾರ ಒಂದೇ ದಿನ 17 ಪಾಸಿಟಿವ್‌ ವರದಿ ಬಂದಿದ್ದರಿಂದ ಜಿಲ್ಲಾದ್ಯಂತ ಪೊಲೀಸರು ಬಿಗಿ ಕ್ರಮ ಕೈಗೊಂಡಿದ್ದಾರೆ. ಶುಕ್ರವಾರ ಬೆಳಗ್ಗೆಯಿಂದಲೇ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ.

Advertisement

ಗುರುವಾರ ರಾತ್ರಿಯಿಂದಲೇ ನಗರದಲ್ಲಿ ಪೊಲೀಸ್‌ ವಾಹನಗಳಲ್ಲಿ ಮೈಕ್‌ ಮೂಲಕ ಅನೌನ್ಸ್‌ ಮಾಡಿ ಜನರಿಗೆ ಎಚ್ಚರಿಕೆ ನೀಡಲಾಗಿತ್ತು. ಅದರಂತೆ
ಶುಕ್ರವಾರ ಹಾಲು ಹಾಗೂ ಔಷಧಿ ಅಂಗಡಿಗಳು ಹೊರತುಪಡಿಸಿದರೆ ಇನ್ನುಳಿದ ದಿನಸಿ, ತರಕಾರಿ ಮಾರಾಟಕ್ಕೆ ಅವಕಾಶ ಇರಲಿಲ್ಲ. ಇಡೀ ನಗರವನ್ನೇ
ಸೀಲ್‌ ಡೌನ್‌ ಮಾಡಿ ಕಟ್ಟೆಚ್ಚರ ವಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next