Advertisement

ಸಮುದ್ರದಿಂದ ಬದುಕಿನ ಪಾಠ: ಗುರುದೇವಾನಂದ ಸ್ವಾಮೀಜಿ

03:45 AM Jan 24, 2017 | Team Udayavani |

ಮಲ್ಪೆ: ಸಮುದ್ರ ಒಳ್ಳೆಯದನ್ನು ಮಾತ್ರ ತನ್ನ ಗರ್ಭಕ್ಕೆ ತೆಗೆದುಕೊಂಡು ತ್ಯಾಜ್ಯವನ್ನೆಲ್ಲ ಹೊರ ಹಾಕುತ್ತದೆ. ಸ್ವತ್ಛತೆಯನ್ನು ನಾವು ಸಮುದ್ರದಲ್ಲಿ ನೋಡಲು ಸಾಧ್ಯ ಇದೆ. ಸಮುದ್ರದ ಈ ಪಾಠವನ್ನು ನಮ್ಮ ಬದುಕಿನಲ್ಲಿ ನಾವು ಅಳವಡಿಸಿಕೊಂಡಲ್ಲಿ ನಮ್ಮ ಜೀವನ ಪಾವನವಾಗುತ್ತದೆ ಎಂದು ಶ್ರೀ ಕ್ಷೇತ್ರ ಒಡಿಯೂರು ಶ್ರೀ ಗುರುದೇವಾನಂದ ದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.

Advertisement

ಅವರು ರವಿವಾರ ಕೋಡಿ ಬೆಂಗ್ರೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪುನರ್‌ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ನಮ್ಮ ಉನ್ನತಿ ಅವನತಿ ನಮ್ಮ ಕೈಯಲ್ಲಿದೆ. ಆಧ್ಯಾತ್ಮಿಕ ಚಿಂತನೆ ನಮ್ಮಲ್ಲಿರುವ ಕೆಡುಕುಗಳನ್ನು ಕಡಿಮೆಗೊಳಿಸಿ ಬೆಳಕು ನೀಡುತ್ತದೆ. ನಮ್ಮ ಆಲೋಚನೆ ವೃದ್ಧಿಸುತ್ತದೆ. ಭಾವಶುದ್ಧಿ, ಹೃದಯಶುದ್ಧಿ ಯಾಗುತ್ತದೆ. ಇದಕ್ಕೆ ಪೂರಕ ಎಂಬಂತೆ ಇಂತಹ ಶ್ರದ್ಧಾಕೇಂದ್ರಗಳು ಸುಂದರ ಬದುಕು ಕಲ್ಪಿಸುವ ಆಶ್ರಯ ತಾಣವಾಗಿ ಬೆಳಗಲಿ ಎಂದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಅಂಬಲ ಪಾಡಿ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಡಾ| ಜಿ. ಶಂಕರ್‌ ಮಾತನಾಡಿ, ಕೋಡಿ ಬೆಂಗ್ರೆ ಕ್ಷೇತ್ರ ಧಾರ್ಮಿಕವಾಗಿ ಮಾತ್ರವಲ್ಲದೆ ಪ್ರವಾಸೋದ್ಯಮ ವಾಗಿಯೂ ಅಭಿವೃದ್ಧಿ ಹೊಂದಬೇಕಾಗಿದೆ. ಈ ನಿಟ್ಟಿನಲ್ಲಿ ಇಲ್ಲಿನ ಯುವಕರು ಮುಂದಾಗಬೇಕು ಎಂದರು.

ಶ್ರೀ ಕ್ಷೇತ್ರದ ನವೀಕರಣ ಸಮಿತಿ ಅಧ್ಯಕ್ಷ ಬಿ. ಕೇಶವ ಕುಂದರ್‌ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಕೋಟ ಗೀತಾನಂದ ಫೌಂಡೇಶನ್‌ ಪ್ರವರ್ತಕ ಆನಂದ್‌ ಸಿ. ಕುಂದರ್‌, ದ.ಕ. ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಮಹಾಮಂಡಲದ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ಪಡುಬಿದ್ರೆ ಆದಾನಿ ಪವರ್‌ ಕಾರ್ಪೊರೇಶನ್‌ನ ಉಪಾಧ್ಯಕ್ಷ ಕಿಶೋರ್‌ ಆಳ್ವ, ವಾಸ್ತುತಜ್ಞ ಅವಧಾನಿ ಸುಬ್ರಹ್ಮಣ್ಯ ಭಟ್‌, ಮಲ್ಪೆ ಉದ್ಯಮಿ ಹರಿಯಪ್ಪ ಕೋಟ್ಯಾನ್‌, ಬೆಂಗ್ರೆ ಪಡುತೋನ್ಸೆ ಸಿವಿಲ್‌ ಎಂಜಿನಿಯರ್‌ ಭಾಸ್ಕರ್‌ ಕೆ. ಜತ್ತನ್‌, ಕೆಮ್ಮಣ್ಣು ಚರ್ಚ್‌ನ ಧರ್ಮಗುರು ಹೆರಾಲ್ಡ್‌, ನವೀಕರಣ ಸಮಿತಿ ಗೌರವಾಧ್ಯಕ್ಷ ಬಿ. ಮಹಾಬಲ ತೋಳಾರ್‌, ಕಾರ್ಯಾಧ್ಯಕ್ಷ ಬಿ.ಬಿ. ಕಾಂಚನ್‌, ಪ್ರಧಾನ ಕಾರ್ಯದರ್ಶಿ ಕೃಷ್ಣ ಎಸ್‌. ಸುವರ್ಣ, ಆಡಳಿತ ಸಮಿತಿ ಅಧ್ಯಕ್ಷ ನಾಗರಾಜ್‌ ಬಿ. ಕುಂದರ್‌, ಮಹಿಳಾ ಸಮಿತಿ ಅಧ್ಯಕ್ಷೆ ಸುಲೋಚನಾ ಕುಂದರ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

ಸಮ್ಮಾನ: ದೇಗುಲದ ನಿರ್ಮಾಣ ಕಾರ್ಯ ದಲ್ಲಿ ವಿವಿಧ ರೀತಿಯಲ್ಲಿ ಸಹಕಾರ ನೀಡಿದ ವೇ| ಮೂ| ಕುತ್ಯಾರು ಕೇಂಜ ಶ್ರೀಧರ ತಂತ್ರಿ, ವಾಸ್ತು ತಜ್ಞ ಅವಧಾನಿ ಸುಬ್ರಹ್ಮಣ್ಯ ಭಟ್‌, ಗಣೇಶ್‌ ಶಿಲ್ಪಿ, ಶಿವ ಟಿ. ಅಮೀನ್‌, ಬಿ. ಮಹಾಬಲ ತೋಳಾರ್‌, ರಾಮ ದೇವಾಡಿಗ ಸಾಲಿಗ್ರಾಮ, ದಿ. ಶೀನಪ್ಪ ತಲ್ವಾರ್‌ ಸ್ಮರಣಾರ್ಥ ಶಿವರಾಜ್‌ ಪೂಜಾರಿ, ದೇವಸ್ಥಾನದ ಸಮಿತಿ ಅಧ್ಯಕ್ಷರಾಗಿ ಈ ಹಿಂದೆ ಸೇವೆ ಸಲ್ಲಿಸಿರುವ ಸಂಜೀವ ಮೆಂಡನ್‌, ಶಂಕರ್‌ ಎಂ. ಸುವರ್ಣ, ಬಿ. ಕೇಶವ ಕುಂದರ್‌, ಗಣೇಶ್‌ ಎಂ. ಕೋಟ್ಯಾನ್‌, ವಾಸುದೇವ ಕೋಟ್ಯಾನ್‌, ತಿಲಕ್‌ರಾಜ್‌, ಚಂದಯ್ಯ ಬಂಗೇರ ಸ್ಮರಣಾರ್ಥ ವಿಶ್ವನಾಥ ತಿಂಗಳಾಯ, ರಮೇಶ್‌ ಪುತ್ರನ್‌ ಪರವಾಗಿ ಸಂಜೀವ ಪುತ್ರನ್‌, ಮಾಧವ ಎ. ಕುಂದರ್‌, ರವಿ. ಎಸ್‌. ಕರ್ಕೇರ, ದಿನ ರಾಜ್‌ ಕೋಟ್ಯಾನ್‌, ಪ್ರಕಾಶ್‌ ಜಿ. ಕುಂದರ್‌, ನಾಗರಾಜ್‌ ಬಿ. ಕುಂದರ್‌, ಸುಲೋಚನಾ ಕುಂದರ್‌, ಕೃಷ್ಣ ಎಸ್‌. ಸುವರ್ಣ ಹಾಗೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಯೋಧ ರಾಮದಾಸ್‌ ಎ. ಜತ್ತನ್‌ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.ರಮೇಶ್‌ ತಿಂಗಳಾಯ ಸ್ವಾಗತಿಸಿದರು. ಚಂದ್ರೇಶ್‌ ಪಿತ್ರೋಡಿ ಕಾರ್ಯಕ್ರಮ ನಿರೂಪಿಸಿದರು. ರಮೇಶ್‌ ಕೋಟ್ಯಾನ್‌ ವಂದಿಸಿದರು.

ಇಂಟರ್‌ನೆಟ್‌-ಇನ್ನರ್‌ನೆಟ್‌
ನಾವು ಇಂದು ಇಂಟರ್‌ನೆಟ್‌ ಯುಗದಲ್ಲಿ ಇದ್ದೇವೆ. ತಂತ್ರಜ್ಞಾನದಲ್ಲಿ ಬಹಳ ಮುಂದುವರಿ ದಿದ್ದೇವೆ. ಆದರೆ ಸಮಾಜದಲ್ಲಾಗುವ ಗೊಂದಲ ನೋಡಿದರೆ ನಮ್ಮನ್ನು ನಾವು ತಿಳಿದುಕೊಳ್ಳುವುದರಲ್ಲಿ ಮಾತ್ರ ಹಿಂದೆ ಬಿದ್ದಿದ್ದೇವೆ ಎಂದು ಕಾಣುತ್ತದೆ. ಪ್ರೀತಿಯ ಜಾಗದಲ್ಲಿ ದ್ವೇಷ ತುಂಬಿಕೊಂಡರೆ ಮನಸ್ಸು ಅಲ್ಲೋಲ ಕಲ್ಲೋಲವಾಗುತ್ತದೆ. ಮೊದಲು ನಮ್ಮ ಇನ್ನರ್‌ನೆಟ್‌ (ಅಂತರಂಗ)ನ್ನು ಓಪನ್‌ ಮಾಡಬೇಕಾಗಿದೆ. ಅಂತರಂಗ ಶುದ್ಧಿಯಿಂದ ಮಾತ್ರ ವ್ಯಕ್ತಿಯಬೆಳವಣಿಗೆ ಮತ್ತು ಅಧ್ಯಾತ್ಮದ ಬೆಳಕು ಒಡಮೂಡಲು ಸಾಧ್ಯ ಎಂದು ಗುರುದೇವಾನಂದ ಸ್ವಾಮೀಜಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next