Advertisement

ಪಣಂಬೂರು: ಮೀನು ಬಲು ದುಬಾರಿ

03:20 AM Jul 05, 2018 | Team Udayavani |

ಪಣಂಬೂರು: NMPTಯಿಂದ ನಾಡದೋಣಿ ಮೀನುಗಾರಿಕೆ ಆರಂಭಗೊಂಡಿದೆ. ಮತ್ಸಪ್ರಿಯರು ತಾಜಾ ಮೀನು ಖರೀದಿಗಾಗಿ ಪಣಂಬೂರು ಬೀಚ್‌ ಬಳಿ ದಾಂಗುಡಿಯಿಡುತ್ತಿದ್ದಾರೆ. ಭಾರೀ ದರಕ್ಕೆ ಮೀನು ಏಲಂ ಆಗುತ್ತಿದ್ದು ಪ್ರಥಮ ದಿನ ನಾಡದೋಣಿಯವರಿಗೆ ಬಂಗುಡೆ ಮೀನು ಸಿಕ್ಕಿದೆ. ಈ ಬಾರಿ ನೂರು ಇನ್ನೂರರ ಮಾತೇ ಇಲ್ಲ ಏನಿದ್ದರೂ ನಾಲ್ಕು ನೂರು ರೂ.ನಿಂದ ಎಂಟುನೂರು ರೂ. ವರೆಗೆ ದರ ಇದೆ. ಮೀನುಗಾರಿಕೆ ನಿಷೇಧವಿರುವ ಕಾರಣ ನಾಡದೋಣಿ ಮೀನುಗಾರಿಕೆಯಿಂದ ಬರುವ ತಾಜಾ ಮೀನುಗಳಿಗೆ ಬೇಡಿಕೆಯಿದೆ.

Advertisement

ಜಾಗದ ಕೊರತೆ
ಕೋಸ್ಟ್‌ ಗಾರ್ಡ್‌ ಯಾರ್ಡ್‌ ಬಳಿ ಕಳೆದ ವರ್ಷದವರೆಗೆ ಮೀನು ಮಾರಾಟ, ಏಲಂ ನಡೆಯುತ್ತಿತ್ತು. ಈ ಬಾರಿ ಪಣಂಬೂರು ಬೀಚ್‌ ಮುಂಭಾಗ ಮೀನು ಮಾರಾಟ ನಡೆಯುತ್ತಿದೆ. ಫ‌ುಟ್‌ ಪಾತ್‌ ಗಳಲ್ಲಿ ಮೀನು ಮಾರುವ ಸ್ಥಿತಿ ನಿರ್ಮಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next