Advertisement

ಬಚ್ಚಲಿಗೆ ಬಂದ ಬೀಚ್‌! ಸಮುದ್ರ- ಬೀಚ್‌ ಮಾದರಿಯ ಬಾತ್‌ರೂಮ್‌

01:04 PM May 22, 2017 | Harsha Rao |

ಅಲ್ಲೊಂದು ಸೂರ್ಯ ಮುಳುಗಿದಂತೆ, ಕೆಳಗೆ ಮರಳು ಪಾದಕ್ಕೆ ಕಚಗುಳಿ ಇಟ್ಟಂತೆ, ಪಕ್ಕದಲ್ಲೊಂದು ಕಲ್ಲು ಬಂಡೆ “ಹಾಯ್‌’ ಎಂದಂತೆ, ಮೇಲೆ ಸುರಿಯುವ ನೀರು ಕೂಡ ಅಲೆಯಂತೆ ಮೈಮೇಲೆ ಎಗರಿ ಬಂದರೆ, ಮನಸ್ಸು ಹೇಗೆಲ್ಲ ಪುಳಕಗೊಂಡೀತು! ಅಂಥ ಸಾಧ್ಯತೆ ಕೂಡ ಬಾತ್‌ರೂಮ್‌ನ ಹೊಸ ಟ್ರೆಂಡುಗಳಲ್ಲಿ ಜಾಗಪಡೆದುಬಿಟ್ಟಿದೆ…

Advertisement

ಬೀಚ್‌ನಲ್ಲಿ ಸ್ನಾನ ಮಾಡುತ್ತಿದ್ದರೆ, ಇದೇ ದಡದಲ್ಲಿಯೇ ಒಂದು ಮನೆ ಕಟ್ಟಿಕೊಂಡು ಬಿಡೋಣ ಎಂಬ ಆಸೆ ಹುಟ್ಟುತ್ತದೆ. ಮೈಯೆಲ್ಲ ಹಗುರವಾದಂತೆ, ತಾಜಾ ಭಾವ ಉಕ್ಕಿಂದಂತೆ ಮನಸ್ಸು ಉಲ್ಲಾಸಿತವಾಗುತ್ತದೆ. ಹೀಗಾಗಿ, ಸಮುದ್ರ ಸ್ನಾನವನ್ನು ಅನೇಕರು ಇಷ್ಟಪಡುತ್ತಾರೆ.

ಅಂಥದ್ದೇ ಸಮುದ್ರದ ನೋಟ ಮನೆಯೊಳಗೆ ಬಂದರೆ? ಅದರಲ್ಲೂ ಬಾತ್‌ರೂಮ್‌ಗೆ ಬಂದುಬಿಟ್ಟರೆ? ಅಲ್ಲೊಂದು ಸೂರ್ಯ ಮುಳುಗಿದಂತೆ, ಕೆಳಗೆ ಮರಳು ಪಾದಕ್ಕೆ ಕಚಗುಳಿ ಇಟ್ಟಂತೆ, ಪಕ್ಕದಲ್ಲೊಂದು ಕಲ್ಲು ಬಂಡೆ “ಹಾಯ್‌’ ಎಂದಂತೆ, ಮೇಲೆ ಸುರಿಯುವ ನೀರು ಕೂಡ ಅಲೆಯಂತೆ ಮೈಮೇಲೆ ಎಗರಿ ಬಂದರೆ, ಮನಸ್ಸು ಹೇಗೆಲ್ಲ ಪುಳಕಗೊಂಡೀತು! ಅಂಥ ಸಾಧ್ಯತೆ ಕೂಡ ಬಾತ್‌ರೂಮ್‌ನ ಹೊಸ ಟ್ರೆಂಡುಗಳಲ್ಲಿ ಜಾಗಪಡೆದುಬಿಟ್ಟಿದೆ. ಬೀಚ್‌ ಬಾತ್‌ರೂಮ್‌ ವಿನ್ಯಾಸ ಈಗ ಎಲ್ಲರ ಆಕರ್ಷಣೆಗೆ ಕಾರಣವಾಗಿದೆ.

ಇಂಥ ಬಾತ್‌ರೂಮ್‌ಗಳಲ್ಲಿ ಡ್ರಿಫ್ಟ್ ವುಡ್‌ಗಳನ್ನು ಬಳಸಿದ ಕಲಾಕೃತಿಗಳು ಇರುತ್ತವೆ. ಅಂಡಮಾನ್‌ನಂಥ ದ್ವೀಪಗಳ ತೀರದಲ್ಲಿ ಹೇಗೆ ಒಣಗಿದ ಮರಗಳು ಆಕರ್ಷಣೆ ತಂದುಕೊಡಬಲ್ಲವೋ ಅಂಥದ್ದೇ ಮಾದರಿಗಳನ್ನು ಇಲ್ಲಿ ಅಳವಡಿಸುತ್ತಾರೆ. ಕೆಳಗೆ ಬಳಸುವ ಟೈಲ್ಸ್‌ಗಳು ಮರಳಿನ ಮಾದರಿಯ ಮೇಲ್ಮೆ„ಯನ್ನು ಹೊಂದಿರುತ್ತವೆ. ಈ “ಸ್ಯಾಂಡಿನೆಸ್‌’ ಟೈಲ್ಸ್‌ಗಳು ಬೇರೆಲ್ಲ ಟೈಲ್ಸ್‌ಗಳಿಗಿಂತ ತುಸು ದುಬಾರಿಯೇ ಎನ್ನಬಹುದು.

ಇನ್ನೂ ಕೆಲವರು ಬಾತ್‌ರೂಮಿನ ಕೆಳಹಾಸಿನಲ್ಲಿ ಅಕ್ವೇರಿಯಂ ಅನ್ನೂ ನಿರ್ಮಿಸಿಕೊಂಡಿರುತ್ತಾರೆ. ಓಡಾಡುವ ವೈವಿಧ್ಯ ಮೀನುಗಳನ್ನು ನೋಡಿಕೊಂಡೇ ಸ್ನಾನ ಮುಗಿಸುವುದರಲ್ಲಿ ಇರುವ ಸುಖವೇ ಬೇರೆ. ಶಂಖದಿಂದ ನಿರ್ಮಿಸಿದ ಬ್ರಶ್‌ ಸ್ಟಾಂಡ್‌, ಮೈ ಉಜ್ಜಲು ಬಳಸುವ ವಿಶೇಷ ಕಲ್ಲುಗಳು, ಕಪ್ಪೆಚಿಪ್ಪುಗಳ ಸಣ್ಣ ಮೆಟ್ಟಿಲು- ಈ ಬಾತ್‌ರೂಮಿನ ಪ್ರಮುಖ ಆಕರ್ಷಣೆಗಳು.

Advertisement

ಬೀಚ್‌ ಮಾದರಿಯ ಬಾತ್‌ರೂಮಿನ ಗೋಡೆಗಳಿಗೆ 3ಡಿ ಪೇಂಟಿಂಗ್‌ಗಳನ್ನೂ ಮಾಡಿಸುತ್ತಾರೆ. ಪೆಂಗ್ವಿನ್‌ ಹಾರಿದಂತೆ, ಅಲೆ ಉಕ್ಕಿ ಮೇಲೆ ಬಂದಂತೆ ಭಾವ ಹುಟ್ಟಿಸುವ ಇಂಥ ಬಾತ್‌ರೂಮ್‌ ಅನ್ನು ವಿನ್ಯಾಸಿಸಲು ಹೆಚ್ಚೇನೂ ಖರ್ಚು ಮಾಡಬೇಕಾದ ಅಗತ್ಯವೂ ಇಲ್ಲ. ಸೂರ್ಯ ಹುಟ್ಟುವ, ಮುಳುಗುವ ಪೋಸ್ಟರ್‌ ಅನ್ನೂ ಇಲ್ಲಿನ ಗೋಡೆಗಳಿಗೆ ಅಂಟಿಸಿದರೆ ಇನ್ನಷ್ಟು ಅಂದ ಸಿಗುತ್ತದೆ. ಸಮುದ್ರದಾಳದಲ್ಲಿನ ಹೂವಿನ ಮಾದರಿ, ಹವಳಗಳು, ನಕ್ಷತ್ರ ಮೀನುಗಳ ಕೃತಕ ಮಾದರಿಯೂ ಮಾರುಕಟ್ಟೆಯಲ್ಲಿ ಸಿಗುವುದರಿಂದ ಒಳ್ಳೆಯ ಪ್ಲ್ರಾನ್‌ ಮಾಡಿದರೆ, ಇರುವ ಜಾಗದಲ್ಲಿಯೇ ಸಮುದ್ರವನ್ನು ನಿರ್ಮಿಸಿಬಿಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next