Advertisement

ಎಳ್ಳಮವಾಸ್ಯೆ: ಕರಾವಳಿಯಲ್ಲಿ ಭಕ್ತಿಯ ಸಮುದ್ರ ಸ್ನಾನ

08:57 AM Jan 13, 2021 | Team Udayavani |

ಕಟಪಾಡಿ: ಎಳ್ಳಮವಾಸ್ಯೆಯ ಪ್ರಯುಕ್ತ ಇಲ್ಲಿನ ಮಟ್ಟು ಸಮುದ್ರ ಕಿನಾರೆ ಬಳಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರ ದಂಡು ಆಗಮಿಸಿದ್ದು, ಕಡಲ ಅಲೆಗಳಿಗೆ ತಲೆಯೊಡ್ಡಿ ಸಮುದ್ರ ಸ್ನಾನವನ್ನು ಪೂರೈಸುತ್ತಿದ್ದಾರೆ.

Advertisement

ವಿಶೇಷವಾಗಿ ಗತಿಸಿದ ತಮ್ಮ ಹಿರಿಯರ ನೆನಪಿಸಿಕೊಂಡು ತಿಲ ತರ್ಪಣಾಧಿಗಳನ್ನು ನಡೆಸಿಕೊಂಡು ಭಕ್ತಿಭಾವನೆಯ ಸಮುದ್ರ ಸ್ನಾನವನ್ನು ಪೂರೈಸಿ ಕೊಳ್ಳುತ್ತಿರುವ ದೃಶ್ಯವು ಕಂಡುಬರುತ್ತಿದೆ.

ಮುಂಜಾನೆಯಿಂದಲೇ ಬಹುತೇಕ ಮಂದಿ ಕಡಲ ಕಿನಾರೆಗೆ ಆಗಮಿಸಿದ್ದಾರೆ. ಹಲವರು ಕುಟುಂಬ ಸಮೇತವಾಗಿ ಸಮುದ್ರ ಸ್ನಾನವನ್ನು ಪೂರೈಸುತ್ತಿದ್ದರೆ, ಇನ್ನೂ ಹಲವರು  ಸ್ನೇಹಿತರೊಂದಿಗೆ ಆಗಮಿಸಿದ್ದಾರೆ.

ಇದನ್ನೂ ಓದಿ:ಬಿಎಸ್ ವೈ ಗೆ ಸಂಪುಟ ಸಂಕಟ: ಮುನಿರತ್ನ ಸೇರ್ಪಡೆಗೆ ಕಸರತ್ತು, ನಾಗೇಶ್ ಗೆ ಕೊಕ್?

Advertisement
Advertisement

Udayavani is now on Telegram. Click here to join our channel and stay updated with the latest news.

Next