Advertisement
‘ಈ ರೆಸಾರ್ಟ್ಸ್ ಅವಳಿ ನಗರದ ಹೃದಯ ಭಾಗದಲ್ಲೇ ಪ್ರಥಮವಾಗಿ 5.5 ಎಕರೆಯಷ್ಟು ವಿಸ್ತಾರವಾದ ಜಮೀನಿನಲ್ಲಿ ನಿರ್ಮಾಣವಾಗಿದೆ. ಇಲ್ಲಿ ನಿಸರ್ಗ ಸೌಂದರ್ಯವನ್ನು ಸ್ಥಳೀಯ ಸಂಸ್ಕೃತಿಯ ಜತೆ ಬೆಸೆಯಲಾಗಿದೆ. ಅತಿಥಿಗಳಿಗೆ ಲಕ್ಸುರಿ ಮತ್ತು ಆರೋಗ್ಯಪೂರ್ಣ ಸೇವೆ ನೀಡಲಾಗುತ್ತದೆ’ ಎಂದು ಶ್ರೀಕೃಷ್ಣ ಮಿಲ್ಕ್ ಪ್ರೈ. ಲಿ. ಸಂಸ್ಥೆಯ ಅಧ್ಯಕ್ಷ ದಿನೇಶ್ ಆರ್. ಪೈ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಈ ರೆಸಾರ್ಟ್‌ನಲ್ಲಿ 32 ಕಾಟೇಜ್‌ಗಳು, ಸ್ಯೂಟ್‌ಗಳು, ಪ್ರೀಮಿಯಂ ರೂಮ್ಸ್, ಫ್ಯಾಮಿಲಿ ರೂಮ್ಸ್, ಸ್ಟಾಂಡರ್ಡ್ ರೂಮ್ಸ್ ಇದೆ. ಶುಭ ಸಮಾರಂಭ- ಸಭೆಗಳಿಗಾಗಿ ಹುಬ್ಬಳ್ಳಿಯು ಈ ಮೂಲಕ ಆಕರ್ಷಕ ಲಾನ್ ಸೌಲಭ್ಯ ಹೊಂದಲಿದೆ’ ಎಂದು ಓಶಿಯನ್ ಪರ್ಲ್ನ ಉಪಾಧ್ಯಕ್ಷ ಬಿ.ಎನ್. ಗಿರೀಶ್ ಹೇಳಿದರು.
Related Articles
Advertisement
ಉದ್ಘಾಟನಾ ಸಮಾರಂಭದಲ್ಲಿ ಡಾ| ವಿಜಯ್ ಸಂಕೇಶ್ವರ, ಅರವಿಂದ ಬೆಲ್ಲದ್, ಪ್ರದೀಪ್ ಶೆಟ್ಟರ್, ರಾಮ್‌ದಾಸ್ ಕಾಮತ್, ಜಯರಾಮ್ ಬನಾನ್, ಆರ್.ಆರ್. ಕಾಮತ್, ಫಯಾಜ್ ಅಹ್ಮದ್ ಭಲ್ಲಿ, ಹರ್ಷಿಕಾ ಪೂಣಚ್ಚ ಮುಖ್ಯ ಅತಿಥಿಗಳಾಗಿರುತ್ತಾರೆ.
ಶ್ರೀಕೃಷ್ಣ ಗ್ರೂಪ್ ಕರ್ನಾಟಕದ ಡೈರಿ ಕ್ಷೇತ್ರದಲ್ಲಿ ಮುಂಚೂಣಿಯ ಸಂಸ್ಥೆಯಾಗಿದೆ. ಅದರ ಹಾಂಗ್ಯೋ ಐಸ್‌ಕ್ರೀಮ್ಸ್ ಏಳು ರಾಜ್ಯಗಳಲ್ಲಿ ಜನಪ್ರಿಯ ಅಸ್ತಿತ್ವ ಹೊಂದಿದೆ. ಓಶಿಯನ್ ಪರ್ಲ್ ಗ್ರೂಪ್ ದಿಲ್ಲಿ ಸಹಿತ ಉತ್ತರ ಭಾರತದಲ್ಲಿ ಅಪಾರ ಜನಪ್ರಿಯವಾಗಿದ್ದು, ಕರ್ನಾಟಕ ಕರಾವಳಿಯ ಮಂಗಳೂರು, ಉಡುಪಿಗಳಲ್ಲೂ ಯಶಸ್ವಿಯಾಗಿ ಕಾರ್ಯನಿರತವಾಗಿದೆ.