Advertisement

ಜಿಎಸ್‌ಟಿ ಹಿಂಪಡೆಯಲು ಆಗ್ರಹಿಸಿ ಎಸ್‌ಡಿಪಿಐ ನಿರಶನ

06:05 PM Jul 22, 2022 | Team Udayavani |

ರಾಯಚೂರು: ಅಗತ್ಯ ವಸ್ತುಗಳ ಮೇಲೆ ಯೂ ಕೇಂದ್ರ ಸರ್ಕಾರ ವಿಧಿಸಿರುವ ಜಿಎಸ್‌ ಟಿಯನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ಈ ಕುರಿತು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರ ಪತಿಗಳಿಗೆ ಮನವಿ ಸಲ್ಲಿಸಿದರು. ಸಾಮಾನ್ಯ ಜನರು ದಿನನಿತ್ಯ ಬಳಸುವ ಹಾಲು, ಮೊಸರು, ಮಜ್ಜಿಗೆಯಂಥ ಅಗತ್ಯ ಪದಾರ್ಥಗಳ ಮೇಲೆ ಜಿಎಸ್‌ಟಿ ವಿಧಿಸಿರುವುದು ಖಂಡನೀಯ. ಕೇಂದ್ರ ಸರ್ಕಾರದ ನೀತಿ ಬಡವರ ಅನ್ನಕ್ಕೂ ಕಲ್ಲು ಹಾಕುವಂತಿದೆ. ಪೆಟ್ರೋಲ್‌, ಡೀಸೆಲ್‌, ಸಿಲಿಂಡರ್‌, ಯಂತ್ರೋಪಕರಣಗಳ ಮೇಲಿನ ಜಿಎಸ್‌ಟಿಯಿಂದ ಬೆಲೆಗಳು ಗಗನಕ್ಕೇರಿವೆ. ದೇಶದಲ್ಲಿ ಬಡವರು ಬದುಕಲೇಬಾರದು ಎನ್ನುವ ಸ್ಥಿತಿ ಏರ್ಪಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕಾರಕ್ಕೆ ಬರುವ ಮುನ್ನ ನನ್ನ ಸರ್ಕಾರ ಯಾವುದೇ ಕಾರಣಕ್ಕೂ ಅಕ್ಕಿ-ಹಾಲಿನ ಮೇಲೆ ಜಿಎಸ್‌ಟಿ ಪಡೆಯುವುದಿಲ್ಲ ಎನ್ನುತ್ತಿತ್ತು. ಆದರೆ, ಇಂದು ಅವರದ್ದೇ ಸರ್ಕಾರ ಜನರನ್ನು ದೋಚುತ್ತಿದೆ. ಕಾರ್ಪೋರೇಟ್‌ ಕಂಪನಿಗಳು ಹಾಗೂ ಶ್ರೀಮಂತ ಉದ್ಯಮಿಗಳಿಗೆ ತೆರಿಗೆ ವಿನಾಯಿತಿ ನೀಡಿದರೆ, ಬಡವರು ಮಾತ್ರ ಸಣ್ಣ ವಸ್ತುವಿಗೂ ತೆರಿಗೆ ಕಟ್ಟೆಬೇಕಿದೆ. ಇದಕ್ಕಿಂಥ ಕೆಟ್ಟ ದಿನಗಳು ಬರಲಿಕ್ಕಿಲ್ಲ. ಕೂಡಲೇ ದಿನಬಳಕೆ ಆಹಾರದ ವಸ್ತುಗಳ ಮೇಲೆ ವಿಧಿಸಿರುವ ಜಿಎಸ್‌ಟಿ ಹಿಂಪಡೆಯಬೇಕು. ಇಲ್ಲದಿದ್ದಕ್ಕೆ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ಜನ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಆಗ್ರಹಿಸಿದರು.

ಎಸ್‌ಡಿಪಿಐನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿಲಾನಿ ಪಾಷಾ, ಪದಾಧಿಕಾರಿ ಮಹ್ಮದ್‌ ಶಫಿ, ಎಂ.ಎ.ಅನ್ಸಾರಿ, ಅಹ್ಮದ್‌, ಸೈಯದ್‌ ಇರ್ಫಾನ್‌, ಬಷೀರ್‌ ಅಹ್ಮದ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next