ಉಳ್ಳಾಲ: ಭಾರತವನ್ನು ಹಿಂದೂ ಫ್ಯಾಸಿಸ್ಟ್ ರಾಷ್ಟ್ರವನ್ನಾಗಿ ಮಾಡುವ ಸಂಘ ಪರಿವಾರ ಸಹಿತ ಹಿಂದೂ ಸಂಘಟನೆಗಳ ಒಂದು ಅಜೆಂಡಾದ ಭಾಗವೇ ಈ ಗುಂಪು ಹಿಂಸಾ ಹತ್ಯೆಯಾಗಿದ್ದು, ಇದರ ವಿರುದ್ಧ ಆ. 25ರಂದು “ಮನೆಯಿಂದ ಹೊರಗೆ ಬನ್ನಿ’ ಆಂದೋಲನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಹಮ್ಮಿಕೊಂಡಿದ್ದು ಇದಕ್ಕೆ ಎಲ್ಲರ ಬೆಂಬಲ ಅಗತ್ಯ ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯ ದರ್ಶಿ ಅಬ್ದುಲ್ ಲತೀಫ್ ಪುತ್ತೂರು ಅಭಿಪ್ರಾಯಪಟ್ಟರು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜನತೆಯ ಅಭಿಯಾನದ ಅಂಗವಾಗಿ ಆ.1ರಿಂದ ಆ.25ರವರೆಗೆ “ಭಾರತದ ಗುಂಪು ಹಿಂಸಾ ಹತ್ಯೆಯನ್ನು ಪ್ರತಿರೋಧಿಸೋಣ’, “ಭಾರತದ ನೋವು ಭರಿತ ರಕ್ತ ಸುರಿ ಯುತ್ತಿದೆ’ ರಾಷ್ಟ್ರೀಯ ಅಭಿಯಾನದ ಪ್ರಯುಕ್ತ ತೊಕ್ಕೊಟ್ಟು ಜಂಕ್ಷನ್ ಬಸ್ ನಿಲ್ದಾಣ ಬಳಿ ಹಮ್ಮಿಕೊಂಡಿದ್ದ ಸಾರ್ವ ಜನಿಕ ಸಭೆ ಹಾಗೂ ರ್ಯಾಲಿಯಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸಮಿತಿ ಸದಸ್ಯ ಶಾಫಿ ಬೆಳ್ಳಾರೆ, ದಲಿತ ಸಂಘರ್ಷ ಸಮಿತಿ ಪುತ್ತೂರು ಇದರ ಅಧ್ಯಕ್ಷ ಆನಂದ ಮಿತ್ತಬೈಲ್ ಮಾತನಾಡಿದರು.
ಎಸ್‌ಡಿಪಿಐ ಮಂಗಳೂರು ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಅಬ್ಟಾಸ್ ಕಿನ್ಯ ಅದ್ಯಕ್ಷತೆ ವಹಿಸಿದ್ದರು. ಪಿಎಫ್ಐ ಜಿಲ್ಲಾ ಸಮಿತಿ ಸದಸ್ಯ ಸಿರಾಜ್ ಕಾವೂರು, ಉಳ್ಳಾಲ ವಲಯಾಧ್ಯಕ್ಷ ಸಿದ್ದಿಕ್ ಯು.ಬಿ., ಮುಖಂಡರಾದ ರವೂಫ್ ಉಳ್ಳಾಲ್, ಬಶೀರ್ ಅಜ್ಜಿನಡ್ಕ, ಸಿದ್ದಿಕ್ ಪಜೀರು, ಎಸ್‌ಡಿಪಿಐ ಉಳ್ಳಾಲ ನಗರಸಭಾ ಅಧ್ಯಕ್ಷ ಎ.ಆರ್. ಅಬ್ಟಾಸ್, ಮಂಗಳೂರು ಉತ್ತರ ವಿಧಾನ ಸಭಾ ಅಧ್ಯಕ್ಷ ಮುನೀಬ್ ಬೆಂಗ್ರೆ ಉಪಸ್ಥಿತರಿದ್ದರು.
ಎಸ್‌ಡಿಪಿಐ ಮಂಗಳೂರು ವಿಧಾನ ಸಭಾ ಕ್ಷೇತ್ರ ಕಾರ್ಯದರ್ಶಿ ಹ್ಯಾರಿಸ್ ಮಲಾರ್ ಸ್ವಾಗತಿಸಿ, ಸಿದ್ದಿಕ್ ಕುಂಪಲ ವಂದಿಸಿ, ಝಾಹೀದ್ ಮಲಾರ್ ಮತ್ತು ಝೈನ್ ಹರೇಕಳ ನಿರ್ವಹಿಸಿದರು.