Advertisement

ಶಿವಮೊಗ್ಗದಲ್ಲಿ ಕಾಂಗ್ರೆಸ್‌ ಬೆಂಬಲದಿಂದ ಎಸ್‌ಡಿಪಿಐ ದುಷ್ಕೃತ್ಯ: ನಳಿನ್‌

09:55 PM Aug 15, 2022 | Team Udayavani |

ಬೆಂಗಳೂರು: ಶಿವಮೊಗ್ಗದಲ್ಲಿ ದೇಶಭಕ್ತರ ಫ್ಲೆಕ್ಸ್‌ ತೆರವು ಮಾಡಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಎಸ್‌ಡಿಪಿಐ ಕೃತ್ಯ ಹಾಗೂ ಯುವಕನ ಮೇಲೆ ಚೂರಿ ಇರಿತವನ್ನು ಖಂಡಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲು ಹೇಳಿದರು.

Advertisement

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೇಷ್ಠ ರಾಷ್ಟ್ರಭಕ್ತ ಸಾವರ್ಕರ್‌ ಬಗ್ಗೆ ಕಾಂಗ್ರೆಸ್‌ ಟೀಕಿಸುತ್ತಿತ್ತು. ಇದೇ ಕಾಂಗ್ರೆಸ್‌ನವರ ಬೆಂಬಲದಿಂದ ಎಸ್‌ಡಿಪಿಐ ಪಕ್ಷದವರು ಇವತ್ತು ಶಿವಮೊಗ್ಗದಲ್ಲಿ ಅವರ ಭಾವಚಿತ್ರದ ಫ್ಲೆಕ್ಸ್‌ ತೆರವುಗೊಳಿಸಿದ್ದಲ್ಲದೆ, ರಾಷ್ಟ್ರಧ್ವಜವನ್ನು ಕೆಳಗೆ ಹಾಕಿದ್ದಾರೆ. ಇದೊಂದು ರಾಷ್ಟ್ರವಿರೋಧಿ ಕೃತ್ಯ. ಈ ದುಷ್ಕೃತ್ಯದಲ್ಲಿ ಭಾಗವಹಿಸಿದವರನ್ನು ರಾಷ್ಟ್ರವಿರೋಧಿಗಳು ಮತ್ತು ಭಯೋತ್ಪಾದಕರೆಂದು ಸರಕಾರ ಗುರುತಿಸಿ ಕೂಡಲೇ ಬಂಧಿಸಿ ಶಿಕ್ಷೆಗೆ ಒಳಪಡಿಸಲು ಆಗ್ರಹಿಸಿದರು.

ಆರೆಸ್ಸೆಸ್‌ನಲ್ಲಿರುವ ಪ್ರತಿಯೊಬ್ಬರೂ ದೇಶವನ್ನು ಭಾರತಮಾತೆ ಎಂದು ಪೂಜಿಸುತ್ತಾರೆ. ಅಧಿಕಾರ, ಲಾಭಕ್ಕಾಗಿ ಕಾಂಗ್ರೆಸ್‌ ಸೇರಿದ ಹಾಗೂ ಹಿರಿಯ ಕಾಂಗ್ರೆಸ್ಸಿಗರನ್ನು ಮೂಲೆಗುಂಪು ಮಾಡಿದ, ಅಧಿಕಾರವನ್ನು ಹಿಡಿದುಕೊಂಡು ಆಟವಾಡುವ ಸಮಾಜವಾದಿಗಳಿಗೆ ಸೋನಿಯಾ ಮಾತೆ ಆಗಿದ್ದಾರೆ. ಸೋನಿಯಾ ಮಾತೆಯನ್ನು ಆರಾಧಿಸುವವರು ಬೇಕೇ ಅಥವಾ ಭಾರತಮಾತೆಯನ್ನು ಪೂಜಿಸುವವರು ಬೇಕೇ ಎಂದು ಜನರು ತೀರ್ಮಾನ ಮಾಡಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next