Advertisement

ಉಜಿರೆ ಎಸ್‌ಡಿಎಂ: ಕ್ರೀಡಾ ಸಂಘ ಉದ್ಘಾಟನೆ

10:30 AM Jul 27, 2017 | Team Udayavani |

ಬೆಳ್ತಂಗಡಿ: ಯಶಸ್ಸು ಎನ್ನುವುದು ಸುಲಭವಲ್ಲ, ಅವಕಾಶಗಳ ಸದುಪಯೋಗದೊಂದಿಗೆ ಛಲದಿಂದ ಯಾವುದೇ ಕೆಲಸಗಳನ್ನು ಮಾಡಿದರೆ ಮಾತ್ರ ಗೆಲುವು ದಕ್ಕುತ್ತದೆ ಎಂದು ಉಜಿರೆ ಎಸ್‌ಡಿಎಂ ಕಾಲೇಜಿನ ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಶಕುಂತಲಾ ಹೇಳಿದರು. ಅವರು ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ನಡೆದ ಕ್ರೀಡಾ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಜೀವನದಲ್ಲಿ ಗುರಿಯೆಡೆಗೆ ಗಮನವಿರಲಿ. ಆ ದಾರಿಯಲ್ಲಿ ಸಾಗುವಾಗ ಏನೇ ಅಡೆತಡೆಗಳು ಬಂದರೂ, ಎದುರಿಸಿ ಮುಂದೆ ಹೋಗಬೇಕು. ಆಗ ವಿದ್ಯಾರ್ಥಿ ಜೀವನಕ್ಕೆ ಒಂದು ಅರ್ಥ ಸಿಗುತ್ತದೆ ಎಂದರು.

Advertisement

ಕ್ರೀಡಾ ಸಹಾಯಕ ನಿರ್ದೇಶಕ ಸುದೀನ್‌ ಅವರು ಕ್ರೀಡಾ ಸಂಘದ ಪದಾಧಿಕಾರಿಗಳ ಪಟ್ಟಿ ಮಂಡಿಸಿದರು. ಕ್ರೀಡಾ ಸಂಘದ ಪದಾಧಿಕಾರಿಗಳಾಗಿ ತೃಪ್ತಿ ಪಿ. ಜಿ., ಸ್ನೇಹಾ ಎಸ್‌., ನಿಶ್ಮಿತಾ ಶೆಟ್ಟಿ, ಸಂಜನಾ ಮುತ್ತಮ್ಮ, ಸಚಿನ್‌, ವರುಣ್‌, ಸಾಯೆಶ್‌, ದೀಪು ಕುಮಾರ್‌ ಆಯ್ಕೆಯಾದರು. ನೂತನ ಕ್ರೀಡಾ ತರಬೇತಿದಾರರಾಗಿ ಕೇರಳದ ಅಖೀಲಾ ಜೋಸೆಫ್‌ ಆಯ್ಕೆಯಾದರು. ಪ್ರಸಕ್ತ ಶೆ„ಕ್ಷಣಿಕ ವರ್ಷದ ಮೊದಲ ಕ್ರೀಡಾ ಭಿತ್ತಿ ಪತ್ರಿಕೆಯನ್ನು ಶಕುಂತಲಾ ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಕ್ರೀಡಾ ನಿರ್ದೇಶಕ ರಮೇಶ್‌ಎಚ್‌. ಉಪಸ್ಥಿತರಿದ್ದರು. ಸ್ನೇಹಾ ಎಸ್‌. ಕಾರ್ಯಕ್ರಮ ನಿರೂಪಿಸಿ, ಅಕ್ಷತಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next