ಬೆಳ್ತಂಗಡಿ: ಯೋಗ ಶಿಕ್ಷ ಣದ ಅಧ್ಯಯನಕ್ಕಾಗಿ ಸೋಮವಾರ ಉಜಿರೆಯ ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಮಹಾವಿದ್ಯಾಲಯಕ್ಕೆ ದಕ್ಷಿಣ ಕೊರಿಯಾದ ವಾಂಕ್‌ವಾಂಗ್ ಡಿಜಿಟಲ್ ವಿಶ್ವವಿದ್ಯಾನಿಲಯದ ತಂಡ ಆಗಮಿಸಿದೆ. ಈ ಅಧ್ಯಯನ ಕಾರ್ಯಕ್ರಮ ಉದ್ಘಾಟಿಸಿದ ಬೆಂಗಳೂರು ವ್ಯಾಸಯೋಗ ವಿಶ್ವವಿದ್ಯಾನಿಲಯದ ಕುಲಪತಿ ಡಾ| ರಾಮಚಂದ್ರ ಜಿ. ಭಟ್ ಮಾತನಾಡಿ, ಇಡೀ ಪ್ರಕೃತಿಯು ದೈವೀಶಕ್ತಿಯ ಅಧೀನದಲ್ಲಿದ್ದು, ನಾವು ಪ್ರಕೃತಿಯ ನಿಯಮ ಮೀರಿದರೆ ಅಪಾಯದ ಸಾಧ್ಯತೆ ಹೆಚ್ಚು. ಹೀಗಾಗಿ ಪ್ರಕೃತಿ ಚಿಕಿತ್ಸೆ, ಯೋಗ ವಿಶೇಷ ಮೌಲ್ಯವನ್ನು ಗಳಿಸಿಕೊಂಡಿದೆ. ಈ ರೀತಿಯ ಅಧ್ಯ ಯನ ಪ್ರವಾಸದಿಂದ ಪರಸ್ಪರ ಉಭಯ ದೇಶಗಳ ಸಾಂಸ್ಕೃತಿಕ ವಿನಿಮಯ, ವೈಜ್ಞಾನಿಕತೆಯನ್ನು ತಿಳಿಯಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿ ಶಶಿಧರ್ ಶೆಟ್ಟಿ ಮಾತನಾಡಿ, ಶೈಕ್ಷಣಿಕ ವ್ಯವಸ್ಥೆಯಲ್ಲಿ ಪರಸ್ಪರ ಇತರ ದೇಶಗಳಿಗೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳ ಅಧ್ಯಯನ ನಡೆಸಿದಾಗ ದೇಶದ ಅಭಿವೃದ್ಧಿಯ ಜತೆಗೆ ವಿದ್ಯಾರ್ಥಿಗಳ ವೈಯ ಕ್ತಿಕ ಅಭಿವೃದ್ಧಿಯೂ ಸಾಧ್ಯ ಎಂದರು.
ಸೂಜಿ ಚಿಕಿತ್ಸೆ
ಕಾಲೇಜಿನ ಪ್ರಾಂಶುಪಾಲ ಡಾ| ಪ್ರಶಾಂತ್ ಶೆಟ್ಟಿ ಪ್ರಸ್ತಾವನೆಗೈದು, ಸೂಜಿ ಚಿಕಿತ್ಸೆ (ಆಕ್ಯುಪಂಕ್ಚರ್) ಕುರಿತು ಜಾಗತಿಕ ಮಟ್ಟದಲ್ಲಿ ಸರ್ವೇಯೊಂದು ನಡೆದಿದ್ದು, ಜಗತ್ತಿನಲ್ಲಿ ಈ ಚಿಕಿತ್ಸೆ ನಡೆಸುತ್ತಿರುವ ಟಾಪ್ 10 ಮಂದಿಯಲ್ಲಿ 4 ಮಂದಿ ಎಸ್‌ಡಿಎಂ ನ್ಯಾಚುರೋಪತಿಯ ವಿದ್ಯಾರ್ಥಿಗಳಾಗಿದ್ದವರು ಎಂಬುದು ಹೆಮ್ಮೆಯ ವಿಚಾರ.
ನವಕಾಂತ್ ಭಟ್, ಕಮಲೇಶ್ ಆರ್ಯ, ದುಶ್ಯಂತ್ ರೈನಾ ಹಾಗೂ ಉಮಾ ನಾಗಪ್ರಸಾದ್ ಅವರು 10 ರೊಳಗಿನ ಸ್ಥಾನದಲ್ಲಿದ್ದಾರೆ ಎಂದರು.
ವಾಂಕ್‌ವಾಂಗ್ ವಿ.ವಿ.ಯ ಡಾ| ಜಾಂಗ್‌ಸೂನ್ ಸಿಯೊ ಉಪಸ್ಥಿತರಿದ್ದರು. ಕಾಲೇಜಿನ ಯೋಗ ವಿಭಾ ಗದ ಡೀನ್ ಡಾ| ಶಿವಪ್ರಸಾದ್ ವಂದಿಸಿದರು. ಜೋಸ್ತಾ ತಾಯಿಲ್ ನಿರ್ವಹಿಸಿದರು. ದಕ್ಷಿಣ ಕೊರಿಯಾ ದಿಂದ ಒಟ್ಟು 37 ಮಂದಿ ಅಧ್ಯಯನ ಕ್ಕಾಗಿ ಆಗಮಿಸಿದ್ದಾರೆ.