ಅಥಣಿ: ಪಟ್ಟಣದ ಪೊಲೀಸ್ ಸಮುದಾಯ ಭವನದಲ್ಲಿ ರವಿವಾರ ವಿಭಾಗಮಟ್ಟದ ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಂದು ಕೊರತೆ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಅಥಣಿ ಡಿವೈಎಸ್‌ಪಿ ಎಸ.ವಿ. ಗಿರೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಥಣಿ, ಐಗಳಿ, ರಾಯಭಾಗ, ಕುಡಚಿ, ಕಾಗವಾಡ ಮತ್ತು ಹಾರೂಗೇರಿ ಪೊಲೀಸ್ ಠಾಣೆಗಳ ವ್ಯಾಪ್ತಿಯ ವಿವಿಧ ಗ್ರಾಮಗಳ ಮುಖಂಡರು ತಮ್ಮ ಗ್ರಾಮಗಳ ಸಮಸ್ಯೆಗಳನ್ನು ಹೇಳಿಕೊಂಡರು.
ಕಾಗವಾಡ ಪಿಎಸೆ„ ಆರ್.ಎಲ್ ಧರ್ಮಟ್ಟಿ, ಅಥಣಿ ಪಿಎಸೆ„ ಕುಮಾರ ಹಾಡಕಾರ, ಹಾರೂಗೇರಿ ಪಿಎಸೆ„ ಯಮನಪ್ಪ ಮಾಂಗ, ರಾಯಭಾಗ ಸಿಪಿಐ ಎಚ್ ಡಿ ಮುಲ್ಲಾ, ಐಗಳಿ ಪಿಎಸ್‌ಐ ಶಿವರಾಜ ನಾಯಕವಾಡಿ ಮೊದಲಾದ ಅಧಿಕಾರಿಗಳು ಇದ್ದರು.
ಗುತ್ತಿಗೆ ಪೌರ ಕಾರ್ಮಿಕರ ಮುಖಂಡ ಬಸವರಾಜ ಕಾಂಬಳೆ ಮಾರತನಾಡಿ, ಬೀದಿ ವ್ಯಾಪಾರಸ್ಥರಿಗೆ ಆಗುತ್ತಿರುವ ಕಿರುಕುಳ ತಪ್ಪಿಸುವಂತೆ ಮತ್ತು ಬೀದಿ ವ್ಯಾಪಾರವನ್ನು ನಂಬಿದ ಕುಟುಂಬಗಳಿಗೆ ವಹಿವಾಟು ನಡೆಸಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.
ಇನ್ನುಳಿದಂತೆ ಸ್ಮಶಾನ ಭೂಮಿ ಕೊರತೆ, ಶಾಲಾ ವಿದ್ಯಾರ್ಥಿಗಳ ಬಸ್ ವ್ಯವಸ್ಥೆ ಹಾಗೂ ಗ್ರಾಮೀಣ ಭಾಗದಲ್ಲಿ ಗ್ರಂಥಾಲಯಗಳ ವ್ಯವಸೆœ ಒದಗಿಸುವುದು ಸೇರಿದಂತೆ ಪ್ರಕರಣಗಳ ಗಭೀರತೆಯ ಆಧಾರದಲ್ಲಿ ದೂರು ಸ್ವೀಕರಿಸಬೇಕು ಎಂಬ ಸಲಹೆಗಳನ್ನು ಮುಖಂಡರು ನೀಡಿದರು.
ಡಿವೈಎಸ್ಪಿ ಎಸ್.ವಿ ಗಿರೀಶ್ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮಸ್ಯೆಗಳಿಗೆ ಆದಷ್ಟು ಬೇಗ ತಮ್ಮ ಇಲಾಖೆಯಿಂದ ಸ್ಪಂದಿಸುವ ಕೆಲಸ ಮಾಡುವುದರ ಮೂಲಕ ಸಮಸ್ಯೆಗಳನ್ನು ಆಯಾ ಇಲಾಖೆಗಳ ಗಮನಕ್ಕೆ ತಂದು ಬಗೆಹರಿಸುವ ಪ್ರಯತ್ನ ಮಾಡುವುದಾಗಿ ಹೇಳಿದರು. ತುರ್ತು ಪರಿಸ್ಥಿತಿಯಲ್ಲಿ ಮತ್ತು ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸಲು ದೇಶಾದ್ಯಂತ 112 ಒಂದೇ ಸಹಾಯವಾಣಿ ಇದ್ದು, ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.
ಇದನ್ನೂ ಓದಿ :ನಿಪ್ಪಾಣಿ ನಗರಸಭೆ ಮೇಲಿನ ಭಗವಾ ಧ್ವಜ ತೆರವಿಗೆ ಮಾಹಿತಿ ಸಂಗ್ರಹ
ಸುನೀಲ ವಾಘಮೋರೆ, ರವಿ ಕಾಂಬಳೆ, ಅನಿಲ ಸೌದಾಗರ, ಗೌತಮ ಬನಸೋಡೆ, ಕುಮಾರ ಬನಸೋಡೆ, ಶ್ರೀಕಾಂತ ಅಲಗೂರ್, ಶಂಕರ ಕಾಂಬಳೆ, ಮಂಜು ಹೋಳಿಕಟ್ಟಿ, ರಾಮ ಮರಳೆ, ಪ್ರಶಾಂತ ಕಾಂಬಳೆ, ಪಂಡಿತ ನೂಲಿ, ಅಶೋಕ ಕಾಂಬಳೆ, ರಾಕೇಶ ಮಣ್ಣಾಪ್ಪಗೋಳ, ಖಾಂಡೇಕರ್ ಸರ್ ಇನ್ನೂ ಹಲವಾರು ಮುಂಖಡರು ಉಪಸ್ಥಿತರಿದ್ದರು.