Advertisement
ಹಿರಿಯ ನಾಗರಿಕರು ಸಾಮಾನ್ಯವಾಗಿ ಬ್ಯಾಂಕ್ ಎಫ್ಡಿಎಸ್, ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್), ಪ್ರಧಾನ್ ಮಂತ್ರಿ ವಯಾ ವಂದನ ಯೋಜನೆ (ಪಿಎಂವಿವಿವೈ), ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್) ಮುಂತಾದ ಹೂಡಿಕೆಗಳನ್ನು ಪರಿಗಣಿಸುತ್ತಾರೆ.
ಸರಕಾರಿ ಬೆಂಬಲಿತ ಹಿರಿಯ ನಾಗರಿಕರ ಉಳಿತಾಯ ಯೋಜನೆಗಳು ಹೆಚ್ಚು ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಮ್ಯೂಚುವಲ್ ಫಂಡ್‌ಗಳು ಅಥವಾ ಎಫ್ಡಿಗಳಿಗಿಂತ ಭಿನ್ನವಾದ ಹೂಡಿಕೆ ಅವಕಾಶಗಳು ಸರಕಾರದ ಯೋಜನೆಗಳಲ್ಲಿರುತ್ತವೆ. ಇದರಲ್ಲಿ 5 ವರ್ಷಗಳ ಕಾಲ ಹೂಡಿಕೆ ಮಾಡಬಹುದು, ಅದನ್ನು ಹೆಚ್ಚುವರಿ ಮೂರು ವರ್ಷಗಳವರೆಗೆ ವಿಸ್ತರಿಸಬಹುದು. ವಾರ್ಷಿಕ ಶೇಕಡಾ 7.4ರಷ್ಟು ಬಡ್ಡಿ
ಪ್ರಸ್ತುತ, ಹಿರಿಯ ನಾಗರಿಕರು ಎಸ್‌ಸಿಎಸ್‌ಎಸ್‌ನಲ್ಲಿ ವಾರ್ಷಿಕ ಶೇ.7.4 ರಷ್ಟು ಬಡ್ಡಿದರವನ್ನು ಪಡೆಯುತ್ತಾರೆ ಮತ್ತು ಅದನ್ನು ತ್ತೈಮಾಸಿಕದಲ್ಲಿ ಲೆಕ್ಕಹಾಕಿ ಖಾತೆಗೆ ಜಮಾ ಮಾಡಲಾಗುತ್ತದೆ.
Related Articles
ಎಸ್‌ಸಿಎಸ್‌ಎಸ್‌ನಲ್ಲಿ ಅವಧಿ ಪೂರ್ಣಗೊಳ್ಳುವ ಮೊದಲೇ ಹಣವನ್ನು ಹಿಂಪಡೆಯಲು ಅವಕಾಶವಿದೆ. ಆದರೆ ಖಾತೆ ಆರಂಭಿಸಿದ ದಿನಾಂಕದಿಂದ ಎರಡು ವರ್ಷಗಳು ಪೂರ್ಣಗೊಳ್ಳುವ ಮೊದಲು ಹೂಡಿಕೆದಾರರು ಯೋಜನೆಯಿಂದ ನಿರ್ಗಮಿಸಿದರೆ ಠೇವಣಿ ಮೊತ್ತದ ಶೇ.1.5ರಷ್ಟು ದಂಡ ವಿಧಿಸಲಾಗುತ್ತದೆ. ಹಾಗೆಯೇ 2 ವರ್ಷಳಿಂದ 5 ವರ್ಷಗಳ ನಡುವಿನ ಅಂತರದಲ್ಲಿ ನಿರ್ಗಮಿಸಿದರೆ ಶೇ. 1ರಷ್ಟು ದಂಡ ವಿಧಿಸಲಾಗುತ್ತದೆ.
Advertisement
ಖಾತೆದಾರನ ಸಾವು ಸಂಭವಿಸಿದರೆ ?ಒಂದು ವೇಳೆ ಎಸ್‌ಸಿಎಸ್‌ಎಸ್ ಖಾತೆಯಲ್ಲಿ ಹಣ ಹೂಡಿಕೆದಾರರ ಮರಣ ಸಂಭವಿಸಿದರೆ, ಎಲ್ಲ ಮುಕ್ತಾಯದ ಲಾಭಗಳನ್ನು ಕಾನೂನುಬದ್ಧ ಉತ್ತರಾಧಿಕಾರಿ/ನಾಮಿನಿಗೆ ವರ್ಗಾಯಿಸಲಾಗುತ್ತದೆ. ಸಾವಿನ ಹಕ್ಕುಗಳ ಸಂದರ್ಭದಲ್ಲಿ, ಖಾತೆ ಮುಚ್ಚುವ ಕಾರ್ಯವಿಧಾನವನ್ನು ಕೈಗೊಳ್ಳಲು ನಾಮಿನಿ ಅಥವಾ ಕಾನೂನು ಉತ್ತರಾಧಿಕಾರಿ ನಿಗದಿತ ಅರ್ಜಿ ನಮೂನೆಯಲ್ಲಿ ಮರಣ ಪ್ರಮಾಣಪತ್ರದ ಜತೆಗೆ ಲಿಖೀತ ವಿನಂತಿಯನ್ನು ಭರ್ತಿ ಮಾಡಬೇಕಾಗುತ್ತದೆ.