Advertisement

ನ್ಯಾಯಾಧೀಶರಿಂದ ಪರಿಶೀಲನೆ, ಅಧಿಕಾರಿಗಳಿಗೆ ತರಾಟೆ

03:10 AM Oct 27, 2021 | Team Udayavani |

ಸುಳ್ಯ: ನಗರದಲ್ಲಿ ಕುಡಿಯುವ ನೀರು ಕೆಸರು ಮಿಶ್ರಿತ ವಾಗಿರುವ ಬಗ್ಗೆ ಸುಳ್ಯ ಸಿವಿಲ್‌ ನ್ಯಾಯಾಲಯದ ಹಿರಿಯ ನ್ಯಾಯಾ ಧೀಶ ಸೋಮಶೇಖರ ಮತ್ತು ಕಿರಿಯ ನ್ಯಾಯಾಧೀಶ ಯಶವಂತ್‌ ಕುರ್ಮಾ ಅವರು ಪರಿಶೀಲನೆ ನಡೆಸಿದರು.

Advertisement

ಕೆಲವು ದಿನಗಳಿಂದ ಕೆಸರು ಮಿಶ್ರಿತ ನೀರು ಸರಬರಾಜಾಗುತ್ತಿರುವ ಬಗ್ಗೆ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಮಂಗಳ ವಾರ ಸಂಜೆ ಕಲ್ಲುಮುಟ್ಲುವಿನ ಶುದ್ಧೀ ಕರಣ ಘಟಕಕ್ಕೆ ಭೇಟಿ ನೀಡಿ ಎಲ್ಲ ವಿಭಾಗಗಳನ್ನು ಪರಿಶೀಲಿಸಿದ ನ್ಯಾಯಾ ಧೀಶರು ನೀರು ಸಮರ್ಪಕವಾಗಿ ಶುದ್ಧೀಕರಿಸದೆ ಸರಬರಾಜಾಗುತ್ತಿರುವ ಬಗ್ಗೆ ಮತ್ತು ಕೆಸರು ಮಿಶ್ರಿತ ನೀರು ಪೂರೈಸುತ್ತಿರುವ ಬಗ್ಗೆ ನಗರ ಪಂಚಾಯತ್‌ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರು.

ಹಳೆಯ ಘಟಕ
ನಾಲ್ಕು ದಶಕಗಳಷ್ಟು ಹಳೆಯ ಶುದ್ಧೀಕರಣ ಘಟಕದಿಂದ ಸಮರ್ಪಕ ವಾಗಿ ನೀರು ಶುದ್ಧೀಕರಿಸಿ ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಹೊಸ ಘಟಕ ಸ್ಥಾಪಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೂ ಮಂಜೂರಾಗಿಲ್ಲ ಎಂದು ನ. ಪಂಚಾಯತ್‌ ಮುಖ್ಯಾಧಿಕಾರಿ ಎಂ.ಆರ್‌. ಸ್ವಾಮಿ ಹಾಗೂ ಎಂಜಿನಿಯರ್‌ ಶಿವಕುಮಾರ್‌ ವಿವರಿಸಿದರು.

ಇದನ್ನೂ ಓದಿ:ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯ ಆದೇಶ ಮರುಪರಿಶೀಲನೆಗೆ ಹೈಕೋರ್ಟ್‌ ಸೂಚನೆ

ಶುದ್ಧವಾದ ಕುಡಿಯುವ ನೀರು ಸರಬರಾಜು ಮಾಡುವುದು ನಗರ ಪಂಚಾಯತ್‌ನ ಜವಾಬ್ದಾರಿ. ಅದಕ್ಕಾಗಿ ದೂರದೃಷ್ಟಿಯ ಯೋಜನೆ ಗಳನ್ನು ರೂಪಿಸಿ ಅನುಷ್ಠಾನ ಮಾಡಬೇಕು. ಅಗತ್ಯ ಕ್ರಮಗಳನ್ನು ಕೂಡಲೇ ಕೈಗೊಳ್ಳಬೇಕು ಎಂದು ನ್ಯಾಯಾಧೀಶರು ಹೇಳಿದರು.

Advertisement

ಕೂಡಲೇ ಪರೀಕ್ಷೆ
ನಡೆಸಿ ವರದಿ ಕೊಡಿ
ಸರಬರಾಜು ಮಾಡುತ್ತಿರುವ ನೀರನ್ನು ಪರೀಕ್ಷೆಗೆ ಒಳಪಡಿಸಿ ತತ್‌ಕ್ಷಣ ವರದಿ ಸಲ್ಲಿಸಬೇಕು. ಶುದ್ಧ ನೀರು ಸರಬರಾಜಿಗೆ ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಬೇಕು ಎಂದು ನ್ಯಾಯಾಧೀಶರು ಎಂಜಿನಿಯರ್‌ಗೆ ಸೂಚಿಸಿದರು.

ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ, ನ.ಪಂ. ಸದಸ್ಯರಾದ ಎಂ. ವೆಂಕಪ್ಪ ಗೌಡ, ಉಮ್ಮರ್‌, ಪ್ರಮುಖರಾದ ಸುಂದರ ಪಾಟಾಜೆ, ಉನೈಸ್‌ ಪೆರಾಜೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next